Webdunia - Bharat's app for daily news and videos

Install App

ನವರಾತ್ರಿಯ ಮೊದಲ ದಿನ ಇಂದು ಯಾವ ದೇವಿಯ ಹೇಗೆ ಪೂಜಿಸಬೇಕು ಇಲ್ಲಿದೆ ವಿವರ

Krishnaveni K
ಗುರುವಾರ, 3 ಅಕ್ಟೋಬರ್ 2024 (08:38 IST)
Photo Credit: X
ಬೆಂಗಳೂರು: ಇಂದಿನಿಂದ ಒಂಭತ್ತು ದಿನಗಳ ನವರಾತ್ರಿಯ ವೈಭವ ಶುರು. ಇಂದು ನವರತ್ರಿಯ ಮೊದಲ ದಿನವಾಗಿದ್ದು ದೇವಿಯನ್ನು ಶೈಲಪುತ್ರಿಯ ರೂಪದಲ್ಲಿ ಆರಾಧಿಸುತ್ತೇವೆ. ಈ ದೇವಿಯ ವಿಶೇಷತೆಯೇನು ಹೇಗೆ ಪೂಜಿಸಬೇಕು ಇಲ್ಲಿದೆ ವಿವರ.

ದೇವಿಯ ಒಂಭತ್ತು ರೂಪಗಳಲ್ಲಿ ಮೊದಲನೆಯ ರೂಪ ಶೈಲಪುತ್ರಿ. ಶೈಲ ಪುತ್ರಿ ಎಂದರೆ ಪರ್ವತ ಪುತ್ರಿ ಎಂದರ್ಥ. ಈ ದೇವಿಯು ಚಂದ್ರನ ಅಧಿಪತಿಯಾಗಿದ್ದು, ಧೈರ್ಯ ಮತ್ತು ಬಲದ ಸಂಕೇತವಾಗಿದೆ. ಬಲಕೈಯಲ್ಲಿ ತ್ರಿಶೂಲ ಎಡಕೈಯಲ್ಲಿ ಕಮಲದ ಹೂ ಹಿಡಿದು ಬಸವನ ಮೇಲೆ ಕುಳಿತ ಭಂಗಿಯಲ್ಲಿ ಈ ದೇವಿಯನ್ನು ಕಾಣಬಹುದು.
ಶೈಲಪುತ್ರಿ ದೇವಿಯ ಪೂಜೆ ಮಂತ್ರ ಹೀಗಿದೆ:
ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತಶೇಖರಂ
ವೃಷಾರೂಢಾಂ ಶೂಲಧರಂ ಶೈಲಪುತ್ರೀಂ ಯಶಸ್ವಿನೀಂ

ಇಂದು ಈ ಮಂತ್ರವನ್ನು 108 ಬಾರಿ ಪಠಿಸುತ್ತಾ ದೇವಿಯ ಆರಾಧನೆ ಮಾಡುವುದರಿಂದ ನಿಮಗೆ ಒಳಿತಾಗುತ್ತದೆ. ಇಂದು ತಪ್ಪದೇ ಶೈಲಪುತ್ರಿ ದೇವಿಗೆ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚಿ ಪೂಜೆ ಮಾಡಿ. ತಾಯಿಗೆ ಹೂವಿನಿಂದ ಅರ್ಚನೆ ಮಾಡಿ ನೈವೇದ್ಯ ಮಾಡಿದರೆ ನಿಮಗೆ ಶೈಲಪುತ್ರಿ ದೇವಿಯ ಅನುಗ್ರಹ ಸಿಗುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದು ಸೂರ್ಯಗ್ರಹಣ: ಯಾವ ರಾಶಿಯವರಿಗೆ ಏನು ಫಲ ಇಲ್ಲಿದೆ ಮಾಹಿತಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಸಕಲ ರೋಗಗಳ ಪರಿಹಾರಕ್ಕೆ ದುರ್ಗೆಯ ಈ ಮಂತ್ರವನ್ನು ಜಪಿಸಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments