ಬೆಂಗಳೂರು: ಮಹಾವಿಷ್ಣು ದುಷ್ಟರ ಸಂರಕ್ಷಣೆಗಾಗಿ ನಾನಾ ಅವತಾರಗಳನ್ನೆತ್ತಿ ರಕ್ಷಕನಾಗಿದ್ದಾನೆ. ಮಹಾವಿಷ್ಣುವಿನ ಉಗ್ರ ರೂಪವೇ ನರಸಿಂಹಾವತಾರವಾಗಿದೆ. ನರಸಿಂಹ ದೇವರ ರಕ್ಷಾ ಮಂತ್ರ ಯಾವುದು ಮತ್ತು ಅದನ್ನು ಓದುವುದರ ಫಲಗಳೇನು ನೋಡಿ.
ನರಸಿಂಹ ರಕ್ಷಾಮಂತ್ರವನ್ನು ಓದುವುದರಿಂದ ನರಸಿಂಹ ದೇವರ ಅನುಗ್ರಹಕ್ಕೆ ಪಾತ್ರರಾಗುತ್ತೀರಿ. ಯಾರಿಗೆ ಜೀವನದಲ್ಲಿ ಭಯ, ಮನಸ್ಸಿನಲ್ಲಿ ಅಶಂಕೆ, ಶತ್ರು ಭಯ, ಸೋಲಿನ ಭಯವಿದೆಯೋ ಅಂತಹವರು ನರಸಿಂಹ ರಕ್ಷಾ ಕವಚ ಸ್ತೋತ್ರವನ್ನು ಓದುವುದರ ಮೂಲಕ ಧೈರ್ಯ ಕಂಡುಕೊಳ್ಳಬಹುದು. ಈ ಮಂತ್ರವು ದುಷ್ಠ ಶಕ್ತಿಗಳಿಂದ ನಮ್ಮನ್ನು ಕಾಪಾಡುತ್ತದೆ. ನರಸಿಂಹ ರಕ್ಷಾ ಕವಚ ಮಂತ್ರ ಹೀಗಿದೆ:
ಸಹೃತ್ ಕಮಲ ಸಂವಾಸಂ, ಕೃತ್ವಾತು ಕವಚಂ ಪಠೇತ್ ನರಸಿಂಹೋ ಮೇ ಶಿರಃ ಪಾತು ಲೋಕ ರಕ್ಷಾರ್ಥ ಸಂಭವಃ ಸರ್ವ ಗೋಪಿ ಸ್ತಂಭ ವಸಃ ಫಲಂ ಮೇ ರಕ್ಷತು ಧ್ವನಿಮ್
ಈ ಮಂತ್ರವನ್ನು ನಮ್ಮನ್ನು ಯಾವುದೇ ಹಾನಿಗಳಿಂದ ರಕ್ಷಿಸುತ್ತದೆ. ಯಾವ ರೀತಿ ಯುದ್ಧ ಕಾಲದಲ್ಲಿ ಸೈನಿಕನಿಗೆ ಶತ್ರುಗಳಿಂದ ರಕ್ಷಿಸಿಕೊಳ್ಳಲು ಕವಚವಿರುತ್ತದೋ ಅದೇ ರೀತಿ ನಮ್ಮ ಜೀವನದಲ್ಲಿ ಯಾವುದೇ ದುಷ್ಠ ಶಕ್ತಿಯ ತೊಂದರೆಗಳಾಗದಂತೆ ನರಸಿಂಹ ಸ್ತೋತ್ರವು ಕವಚವಾಗಿರುತ್ತದೆ.