Webdunia - Bharat's app for daily news and videos

Install App

Muruga Mantra: ಸುಬ್ರಹ್ಮಣ್ಯ ದೇವರ ಮೂಲ ಮಂತ್ರ ಯಾವುದು, ಯಾಕೆ ಓದಬೇಕು

Krishnaveni K
ಸೋಮವಾರ, 6 ಜನವರಿ 2025 (08:44 IST)
ಬೆಂಗಳೂರು: ಸುಬ್ರಹ್ಮಣ್ಯ ದೇವರ ಮೂಲ ಮಂತ್ರ ಅತ್ಯಂತ ಪವರ್ ಫುಲ್ ಮಂತ್ರವಾಗಿದ್ದು ಇದನ್ನು ಓದುವುದರ ಫಲವೇನು ಯಾಕೆ ಓದಬೇಕು ಇಲ್ಲಿದೆ ನೋಡಿ ವಿವರ.

ಸುಬ್ರಹ್ಮಣ್ಯ ದೇವರು ವಿಶೇಷವಾಗಿ ನಮಗೆ ಮಾನಸಿಕ ನೆಮ್ಮದಿ, ಸಂತಾನ ಸಮಸ್ಯೆಗಳು, ವಿವಾಹಾದಿ ತೊಂದರೆಗಳಿದ್ದರೆ ನಿವಾರಿಸುತ್ತಾನೆ ಎಂಬ ನಂಬಿಕೆಯಿದೆ. ಸುಬ್ರಹ್ಮಣ್ಯ ದೇವರ ಮೂಲ ಮಂತ್ರವನ್ನು ಓದುವುದರಿಂದ ಎಲ್ಲಾ ರೀತಿಯ ಅಡೆತಡೆಗಳು ನಿವಾರಣೆಯಾಗಿ ಮಾನಸಿಕ ನೆಮ್ಮದಿ ಕಂಡುಕೊಳ್ಳಬಹುದಾಗಿದೆ.  ಮಾನಸಿಕ ಒತ್ತಡಗಳು ನಿವಾರಣೆಯಾಗಿ ಧೈರ್ಯ ಮೂಡುತ್ತದೆ. ಆದರೆ ಮೂಲಮಂತ್ರವನ್ನು ಓದುವಾಗ ಉಚ್ಛಾರಣೆ ತಪ್ಪಾಗದಂತೆ ಎಚ್ಚರಿಕೆ ವಹಿಸುವುದು ಸೂಕ್ತ. ಸುಬ್ರಹ್ಮಣ್ಯ ದೇವರ ಮೂಲ ಮಂತ್ರ ಹೀಗಿದೆ ನೋಡಿ.

ಓಂ ಶರವಣ ಭವಾಯ ನಮಃ

ಅಥವಾ
ಓಂ ಸುಬ್ರಹ್ಮಣ್ಯ ದೇವಾಯ ನಮಃ

ಈ ಮಂತ್ರವನ್ನು ಪ್ರತಿನಿತ್ಯ 108 ಬಾರಿ ಪಠಣೆ ಮಾಡಿ. ವಿಶೇಷವಾಗಿ ಸರ್ಪದೋಷದಿಂದ ಬಳಲುತ್ತಿರುವವರು, ಸಂತಾನಾಪೇಕ್ಷಿತರು, ವಿವಾಹಾದಿ ಶುಭ ಕಾರ್ಯಗಳಿಗೆ ಅಡ್ಡಿಯಾಗುತ್ತಿದ್ದರೆ, ಕುಜ ದೋಷ ಕಾಡುತ್ತಿದ್ದರೆ ಈ ಮಂತ್ರವನ್ನು ಪಠಣೆ ಮಾಡುವುದು ಉತ್ತಮ.

ಸುಬ್ರಹ್ಮಣ್ಯ ಸ್ವಾಮಿಯ ಮೂಲ ಮಂತ್ರವನ್ನು ಪಠಿಸಲು ಇಂತಹದ್ದೇ ಸಮಯವೆಂದು ಇಲ್ಲ. ಯಾವ ಸಮಯದಲ್ಲಿ ಬೇಕಾದರೂ ಶುದ್ಧ ಮನಸ್ಸಿನಿಂದ ಪಠಣೆ ಮಾಡಬಹುದು. ಹಾಗಿದ್ದರೂ ಷಷ್ಠಿ ತಿಥಿಯಂದು, ಮಂಗಳವಾರಗಳಂದು ಪಠಣೆ ಮಾಡುವುದು ಅತ್ಯಂತ ಶ್ರೇಯಸ್ಕರವೆಂದು ನಂಬಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shani Mantra: ಶನಿ ಗಾಯತ್ರಿ ಮಂತ್ರ ಯಾವುದು, ಇದನ್ನು ಓದುವುದರಿಂದ ಏನು ಫಲ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ದುರ್ಗಾ ಅಷ್ಟೋತ್ತರ ನಾಮಾವಳಿ ಕನ್ನಡದಲ್ಲಿ ಓದಿ: ಇದನ್ನು ಓದುವುದರ ಲಾಭಗಳೇನು ನೋಡಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶ್ರೀ ಮಹಾವಿಷ್ಣು ಶತನಾಮ ಸ್ತೋತ್ರ ಕನ್ನಡದಲ್ಲಿ ಓದಿ ಏನು ಲಾಭ ನೋಡಿ

ಮುಂದಿನ ಸುದ್ದಿ
Show comments