Daily Horoscope

Select Your Language

Notifications

webdunia
webdunia
webdunia
webdunia

ಜ್ಯೋತಿಷ್ಯ ಪ್ರಕಾರ ಮೀನ ರಾಶಿಯವರು ಯಾವ ಆರೋಗ್ಯ ಸೇವಿಸಬೇಕು

Astrology
ಜ್ಯೋತಿಷ್ಯದ ಪ್ರಕಾರ ಆಯಾ ಗ್ರಹಗಳಿಗೆ ಅನುಗುಣವಾಗಿ ಆಹಾರ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಮೀನ ರಾಶಿಯವರು ಜ್ಯೋತಿಷ್ಯದ ಪ್ರಕಾರ ಯಾವ ಆಹಾರ ಸೇವಿಸಿದರೆ ಉತ್ತಮ ಇಲ್ಲಿದೆ ವಿವರ.

ಮೀನ ರಾಶಿಯನ್ನು ಆಳುವ ಗ್ರಹ ಗುರು. ಈ ರಾಶಿಯವರು ಮಾನಸಿಕವಾಗಿ ಭಾವನೆಗಳನ್ನು ನಿಯಂತ್ರಿಸುವುದು ಮುಖ್ಯ ಮತ್ತು ಲಿವರ್ ಗೆ ಸಂಬಂಧಿಸಿದ ಆರೋಗ್ಯ ಕಾಪಾಡಿಕೊಳ್ಳಬೇಕು. ರಕ್ತ ಸಂಚಾರ ಮತ್ತು ದೇಹ ನಿರ್ಜಲೀಕರಣಕ್ಕೊಳಗಾಗದಂತೆ ಆಹಾರ, ನೀರಿನಂಶ ಸೇವನೆ ಮಾಡುವುದು ಮುಖ್ಯ. ಈ ರಾಶಿಯವರು ಯಾವ ತರಕಾರಿ, ಹಣ್ಣು, ಮಸಾಲೆ ಪದಾರ್ಥಗಳನ್ನು ಸೇವಿಸಿದರೆ ಆರೋಗ್ಯವಾಗಿರುತ್ತಾರೆ ಎಂಬುದರ ವಿವರಣೆ ಇಲ್ಲಿದೆ ನೋಡಿ.

ತರಕಾರಿ: ಸೊಪ್ಪು ತರಕಾರಿ, ಕ್ಯಾರೆಟ್, ಸಿಹಿಗೆಣಸು, ಮೂಲಂಗಿ
ಹಣ್ಣು: ದಾಳಿಂಬೆ, ಆಪಲ್, ಕಿತ್ತಳೆ, ದ್ರಾಕ್ಷಿ
ಧಾನ್ಯಗಳು: ಇಡೀ ಗೋಧಿ, ಬಾರ್ಲಿ, ಓಟ್ಸ್
ಮಸಾಲೆ ಪದಾರ್ಥಗಳು: ಶುಂಠಿ, ಬೆಳ್ಳುಳ್ಳಿ, ಅರಿಶಿನ, ಚಕ್ಕೆ

ಈ ರಾಶಿಯವರು ಅತಿಯಾದ ಉಪ್ಪಿನಂಶ, ಜಿಡ್ಡುಯುಕ್ತ ಆಹಾರ ಪದಾರ್ಥಗಳು, ಜಂಕ್ ಫುಡ್ ಗಳನ್ನು ಸೇವಿಸುವುದನ್ನು ತಪ್ಪಿಸಿ. ಆದಷ್ಟು ಬಿಸಿ ಆಹಾರ, ಪ್ರತಿನಿತ್ಯ ಜೇನು ತುಪ್ಪ, ನಿಂಬೆ ರಸ ಪಾನೀಯಗಳನ್ನು ಸೇವಿಸುವುದು ಈ ರಾಶಿಯವರ ಆರೋಗ್ಯ ವೃದ್ಧಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಕಾದಶಮುಖ ಹನುಮತ್ಕವಚ ಸ್ತೋತ್ರಂ ಕನ್ನಡದಲ್ಲಿ