Publish Date: Sat, 28 Mar 2026 (08:25 IST)
Updated Date: Sat, 28 Mar 2026 (08:29 IST)
ಶನಿವಾರ ಶನಿದೇವನಿಗೆ ವಿಶೇಷವಾದ ದಿನವಾಗಿದ್ದು ಇಂದು ಶನಿ ದೋಷವಿರುವವರು ಎಳ್ಳೆಣ್ಣೆ ಸಮರ್ಪಣೆ ಮಾಡುತ್ತಾರೆ. ಸಾಮಾನ್ಯವಾಗಿ ಶನಿ ದೇವನಿಗೆ ಎಳ್ಳೆಣ್ಣೆ ಸಮರ್ಪಣೆ ಮಾಡುವುದು ಪದ್ಧತಿ. ಆದರೆ ಎಳ್ಳೆಣ್ಣೆ ಯಾಕೆ ಕೊಡುತ್ತಾರೆ ಎಂಬುದರ ಪೌರಾಣಿಕ ಹಿನ್ನಲೆಯನ್ನು ತಿಳಿದುಕೊಳ್ಳಿ.
ಶನಿ ದೋಷವಿರುವವರು ಶನಿ ದೇವನಿಗೆ ಎಳ್ಳೆಯನ್ನು ಸಮರ್ಪಿಸುವುದರಿಂದ ದೋಷದ ಪ್ರಭಾವ ತಕ್ಕ ಮಟ್ಟಿಗೆ ತಗ್ಗುವುದು ಎಂಬ ನಂಬಿಕೆಯಿದೆ. ಇದಕ್ಕಾಗಿ ಇಂದು ಶನಿ ದೇವಾಲಯಕ್ಕೆ ತೆರಳಿ ಎಳ್ಳೆಣ್ಣೆ ಸಮರ್ಪಿಸುವುದು ಅಥವಾ ಎಳ್ಳೆಣ್ಣೆ ದೀಪ ಹಚ್ಚುತ್ತಾರೆ.
ಆದರೆ ಇದಕ್ಕೆ ಕಾರಣವೂ ಇದೆ. ಈ ಹಿಂದೆ ತ್ರೇತಾಯುಗದಲ್ಲಿ ರಾಮಸೇತು ನಿರ್ಮಾಣ ಮಾಡುವಾಗ ಆಂಜನೇಯ ಸ್ವಾಮಿಯ ಶಕ್ತಿ ಪರೀಕ್ಷೆ ಮಾಡಲು ಶನಿ ದೇವ ಯುದ್ಧ ಮಾಡಿದ್ದನಂತೆ. ಈ ವೇಳೆ ಶನಿ ದೇವನಿಗೆ ಗಾಯವಾಗಿತ್ತು. ಅದನ್ನು ನಿವಾರಿಸಲು ಹನುಮಂತ ಎಳ್ಳೆಯನ್ನು ಹಚ್ಚಿದಾಗ ಗಾಯ ಗುಣವಾಗಿತ್ತು. ಇದರಿಂದ ಸಂಪ್ರೀತನಾದ ಶನಿ ದೇವನು ನನಗೆ ಯಾರೇ ಎಳ್ಳೆಣ್ಣೆಯನ್ನು ಸಮರ್ಪಿಸಿದರೂ ಅವರ ನೋವುಗಳು ನಿವಾರಣೆಯಾಗುತ್ತದೆ ಎಂದು ವರ ನೀಡಿದನಂತೆ. ಹೀಗಾಗಿಯೇ ಎಳ್ಳೆಣ್ಣೆಯನ್ನು ಸಮರ್ಪಿಸಲಾಗುತ್ತದೆ ಎಂಬ ನಂಬಿಕೆಯಿದೆ.