Select Your Language

Notifications

webdunia
webdunia
webdunia
webdunia

ಮಲಗುವ ಮುನ್ನ ಹೇಳಬೇಕಾದ ಶಕ್ತಿ ಶಾಲೀ ಮಂತ್ರ

Sleep

Krishnaveni K

ಬೆಂಗಳೂರು , ಗುರುವಾರ, 27 ಫೆಬ್ರವರಿ 2025 (08:40 IST)
ಬೆಂಗಳೂರು: ಕೆಲವರಿಗೆ ಎಷ್ಟೇ ಸುಖದ ಸುಪ್ಪತ್ತಿಗೆಯಿದ್ದರೂ ನಿದ್ರೆ ಬಾರದು. ರಾತ್ರಿ ನಿದ್ರೆ ಬಾರದೇ ತೊಂದರೆ ಅನುಭವಿಸುತ್ತಿದ್ದರೆ ಈ ಶಕ್ತಿ ಶಾಲೀ ಮಂತ್ರವನ್ನು ಪಠಿಸಿ ಮಲಗಿ. ಇದರಿಂದ ನಿದ್ರಾಹೀನತೆಗೆ ಪರಿಹಾರ ಸಿಗುತ್ತದೆ.

ನಮ್ಮ ಶಾಸ್ತ್ರ, ಸಂಪ್ರದಾಯಗಳಲ್ಲಿ ಎಲ್ಲದಕ್ಕೂ ಪರಿಹಾರವಿದೆ. ಮನುಷ್ಯ ಆರೋಗ್ಯವಾಗಿರಬೇಕೆಂದರೆ ಮನಸ್ಸಿನಲ್ಲಿ ಚಿಂತೆಯಿರಬಾರದು, ಮಲಗಿದಾಗ ನೆಮ್ಮದಿಯ ನಿದ್ರೆ ಬರಬೇಕು. ಆದರೆ ಅದೆರಡೂ ಇಲ್ಲದೇ ಇದ್ದಲ್ಲಿ ಮನುಷ್ಯನನ್ನು ರೋಗಗಳು ಬಾಧಿಸುತ್ತವೆ.

ಕೆಲವರು ರಾತ್ರಿ ಮಲಗಿದರೂ ನಿದ್ರೆ ಬರಲ್ಲ ಎಂದು ಹೊರಳಾಡುವವರಿರುತ್ತಾರೆ. ರಾತ್ರಿ ಮಲಗಿದ ತಕ್ಷಣ ನಿದ್ರೆ ಬರಬೇಕು, ಶಾಂತ, ದುಸ್ವಪ್ನಗಳಿಲ್ಲದ ನಿದ್ರೆ ನಿಮ್ಮದಾಗಬೇಕು ಎಂದರೆ ಶಬರ ಮಂತ್ರವನ್ನು ಪಠಿಸಿ ಮಲಗಿದರೆ ಉತ್ತಮ.

ಶಬರ ಮಂತ್ರ ಇಲ್ಲಿದೆ ನೋಡಿ:
ಓಂ ಹ್ರೀಂ ಶ್ರೀಂ ಗೋಂ, ಗೋರಕ್ಷ ನಾಥಾಯ ವಿದ್ಮಹೆ
ಸೂರ್ಯ ಪುತ್ರಾಯ ಧೀಮಹಿ ತನ್ನೋ ಗೋರಕಾಸ ನಿರಂಜನಾಃ ಪ್ರಚೋದಯಾತ್
ಓಂ ಹ್ರೀಂ ಶ್ರೀಂ ಗೋಂ, ಹಮ್ ಫಟ್ ಸ್ವಾಹ
ಓಂ ಹ್ರೀಂ ಶ್ರೀಂ ಗೋಂ, ಗೋರಕ್ಷ ಹಮ್ ಫಟ್ ಸ್ವಾಹ
ಓಂ ಹ್ರೀಂ ಶ್ರೀಂ ಗೋಂ ಗೋರಕ್ಷ, ನಿರಂಜನಾತ್ಮನೇ ಹಮ್ ಫಟ್ ಸ್ವಾಹ

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?