Select Your Language

Notifications

webdunia
webdunia
webdunia
webdunia

ಶಿವರಾತ್ರಿ ದಿನ ಜಪಿಸಲೇಬೇಕಾದ ಮಂತ್ರಗಳು ಯಾವುವು ಇಲ್ಲಿದೆ ನೋಡಿ

Shiva God

Krishnaveni K

ಬೆಂಗಳೂರು , ಬುಧವಾರ, 26 ಫೆಬ್ರವರಿ 2025 (08:39 IST)
ಬೆಂಗಳೂರು: ಇಂದು ಶಿವರಾತ್ರಿಯಾಗಿದ್ದು ಈ ದಿನ ಶಿವನನ್ನು ಕುರಿತು ಪೂಜೆ, ಭಜನೆ ಮಾಡುತ್ತಾ ಕಾಲ ಕಳೆದರೆ ಮೋಕ್ಷ ಸಿಗುವುದು ಎಂಬ ನಂಬಿಕೆ ಹಿಂದೂಗಳಲ್ಲಿದೆ. ಈ ದಿನ ಯಾವ ಮಂತ್ರಗಳನ್ನು ಜಪಿಸಬೇಕು ಇಲ್ಲಿದೆ ವಿವರ.

ಶಿವರಾತ್ರಿ ದಿನ ಹಗಲು ಮತ್ತು ರಾತ್ರಿಯಿಡೀ ಶಿವ ಭಜನೆಯಲ್ಲಿ ಕಾಲ ಕಳೆಯಬೇಕು. ಇದರಿಂದ ಶಿವನು ಸಂತೃಪ್ತನಾಗಿ ನೀವು ಬೇಡಿದ ವರವನ್ನು ನೀಡುವನದಲ್ಲದೆ ನಿಮ್ಮ ಜೀವನದ ದುರಿತಗಳೆಲ್ಲವೂ ಪರಿಹಾರವಾಗುವುದು ಎಂಬ ನಂಬಿಕೆಯಿದೆ.

ಇಂದು ದಿನವಿಡೀ ಉಪವಾಸವಿದ್ದು ಭಕ್ತಿಯಿಂದ ಶಿವನ ಧ್ಯಾನದಲ್ಲಿ ಕಾಲ ಕಳೆಯಬೇಕು. ಶಿವನ ಮೂಲ ಮಂತ್ರವಾದ ‘ಓಂ ನಮಃ ಶಿವಾಯ’ ಎನ್ನುವ ಮಂತ್ರವನ್ನು ಜಪಿಸುತ್ತಿರಬೇಕು. ಇಂದು ಅಸಂಖ್ಯಾತ ಬಾರಿ ಈ ಮಂತ್ರವನ್ನು ಜಪಿಸುತ್ತಿರಿ.

ಅದೇ ರೀತಿ ಶಿವನ ಮೃತ್ಯುಂಜಯ ಮಂತ್ರ ಹೇಳುತ್ತಿದ್ದರೆ ಅಕಾಲ ಮರಣ, ಅನಾರೋಗ್ಯ ನಿವಾರಣೆಯಾಗುವುದು. ಕೆಲಸ, ವಿದ್ಯೆಯಲ್ಲಿ ಏಕಾಗ್ರತೆಗಾಗಿ ಇಂದು ಶಿವನ ಧ್ಯಾನ ಮಂತ್ರವನ್ನು ಪಠಿಸುತ್ತಿರಿ. ಅದೇ ರೀತಿ ನಿಮ್ಮ ಮನೋಕಾಮನೆಗಳ ಪೂರೈಕೆಗಾಗಿ ಶಿವನ ರುದ್ರ ಮಂತ್ರವನ್ನು ಪಠಿಸಬೇಕು. ಇನ್ನು, ಶಿವನ ಗಾಯತ್ರಿ ಮಂತ್ರವನ್ನು ಪಠಿಸುವ ಮೂಲಕ ಮನಸ್ಸಿಗೆ ಶಾಂತಿ, ನೆಮ್ಮದಿ ನಿಮ್ಮದಾಗಿಸಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?