ಬೆಂಗಳೂರು : ಇಂದು ಗಣೇಶ ಚತುರ್ಥಿಯ ಪ್ರಯುಕ್ರ ಎಲ್ಲರೂ ಗಣೇಶ ಮೂರ್ತಿ ಇಟ್ಟು ಪೂಜೆ ಮಾಡುತ್ತಾರೆ. ಆದರೆ ಈ ಸಮಯದಲ್ಲಿ ಪೂಜೆ ಮಾಡಿದರೆ ಗಣೇಶ ನಿಮ್ಮ ಮನೆಗೆ ಪ್ರವೆಶಿಸುತ್ತಾನಂತೆ.
ಗಣೇಶನ ಮೂರ್ತಿಯನ್ನು ಮನೆಗೆ ತಂದು ಅದು ದೇವತಾ ವಿಗ್ರಹವಾಗಿ ಬದಲಾಗಿ ಪೂಜೆಯ ಅರ್ಹತೆಯನ್ನು ಹೊಂದಲು ಹೀಗೆ ಮಾಡಿ. ಮೊದಲಿಗೆ ಇಡುವ ಸ್ಥಳವನ್ನು ಚೆನ್ನಾಗಿ ತೊಳೆದು ಅಷ್ಟದಳ ಪದ್ಮ ರಂಗೋಲಿಯನ್ನು ಹಾಕಿ ಪೀಠವನ್ನು ಇಟ್ಟು ಅದಕ್ಕೆ ಅರಶಿನ, ಗಂಧ, ಕುಂಕುಮವನ್ನಿಟ್ಟು ಅದರ ಮೇಲೆ ಬಳಿ ವಸ್ತ್ರ ಹಾಕಿ ಅದರ ಮೇಲೆ ಅಕ್ಕಿ ಮತ್ತು ವೀಳ್ಯೆದೆಲೆ ಇಟ್ಟು ಅದರ ಮೇಲೆ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಬಳಿಕ 10.55 ನಿಮಿಷದಿಂದ ಮಧ್ಯಾಹ್ನ 1.26 ನಿಮಿಷದ ವರೆಗೆ ಒಳ್ಳೆಯ ಮುಹೂರ್ತವಿರುವುದರಿಂದ ಈ ಸಮಯದಲ್ಲಿ ವಿನಾಯಕನ ಪೂಜೆ ಮಾಡಿದರೆ ಉತ್ತಮ ಎನ್ನಲಾಗಿದೆ.