ಮನೆಯಲ್ಲಿ ಸದಾ ಲಕ್ಷ್ಮೀ ನೆಲೆಸಿರಲು ಗ್ರಹಿಣಿ ಅಡುಗೆ ಮಾಡುವ ಮುಂಚೆ ಈ ಕೆಲಸ ಮಾಡಿದರೆ ಸಾಕು

ಶುಕ್ರವಾರ, 7 ಡಿಸೆಂಬರ್ 2018 (07:20 IST)
ಬೆಂಗಳೂರು : ಪ್ರತಿಯೊಬ್ಬರು ಜೀವನ ನಡೆಸಲು ಹಣ ಬೇಕೇಬೇಕು. ಕೆಲವರು ಎಷ್ಟೇ ಕಷ್ಟಪಟ್ಟು ಹಣ ಸಂಪಾದನೆ ಮಾಡಿದರೂ ಅದು ಅವರ ಕೈಯಲ್ಲಿ ಉಳಿಯುವುದಿಲ್ಲ. ಅಂತವರ ಕೈಯಲ್ಲಿ ಹಣ ಉಳಿಯಬೇಕೆಂದರೆ ಅವರ ಮನೆಯಲ್ಲಿ ಸಂಪತ್ತಿನ ಅಧಿದೇವತೆ ಲಕ್ಷ್ಮೀ ಸದಾ ನೆಲೆಸಿರಬೇಕು. ಲಕ್ಷ್ಮೀ ಮನೆಯಲ್ಲಿ ನೆಲೆಸಲು ಪ್ರತಿದಿನ ಗ್ರಹಿಣಿ ಅಡುಗೆ ಮಾಡುವ ಮುಂಚೆ ಈ ಕೆಲಸ ಮಾಡಲೇಬೇಕು.


ಹೌದು. ಮನೆಯಲ್ಲಿ ಬೆಳಿಗ್ಗೆ ಆದ ತಕ್ಷಣ ಮೊದಲು ಮಾಡುವ ಕೆಲಸ ಹಾಲು ಕಾಯಿಸುವುದು. ಲಕ್ಷ್ಮೀ ಕ್ಷೀರ ಸಾಗರದಲ್ಲಿ ಹುಟ್ಟಿದವಳು. ಆದ್ದರಿಂದ ಹಾಲು ಲಕ್ಷ್ಮೀಯ ಸ್ವರೂಪ. ಆದ್ದರಿಂದ ಬೆಳಿಗ್ಗೆ ಹಾಲು ಕಾಯಿಸುವ ಮೊದಲು ಒಲೆ ಅಥವಾ ಗ್ಯಾಸ್ ನ್ನು ಚೆನ್ನಾಗಿ ಒರೆಸಿಕೊಂಡು ಅರಶಿನ ಕುಂಕುಮ ಹಚ್ಚಿ. ಅಗ್ನಿ ದೇವನ ಸ್ಮರಿಸಿ ನಂತರ ಹಾಲು ಕಾಯಿಸಬೇಕು.


ಒಂದು ವೇಳೆ ಹಾಲು ಉಕ್ಕಿದರೆ  ಅದಕ್ಕೆ 2 ಅಕ್ಕಿಯ ಕಾಳುಗಳನ್ನು ಹಾಕಬೇಕು. ಹಾಗೇ ಕುದಿಸಿದ ಹಾಲನ್ನು ಮುಚ್ಚಿಡಬೇಕು. ಹೀಗೆ ಮಾಡುವವರ ಮನೆಯಲ್ಲಿ ಯಾವಾಗಲೂ ಲಕ್ಷ್ಮೀ ನೆಲೆಸಿರುತ್ತಾಳೆ. ಹಣದ ಕೊರತೆ ಉಂಟಾಗುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಿಮ್ಮ ಇಷ್ಟಾರ್ಥಗಳು ನೇರವೇರಲು ಈ ಸಮಯದಲ್ಲಿ ಶಿವನನ್ನು ಪೂಜಿಸಿ