ಬೆಂಗಳೂರು : ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಲು ಮುಂಜಾನೆ ಎಲ್ಲರೂ ಮನೆಯ ಮುಂದೆ ರಂಗೋಲಿಗಳನ್ನು ಹಾಕುತ್ತಾರೆ. ಆದರೆ ಕೆಲವರು ರಾತ್ರಿಯೇ ರಂಗೋಲಿ ಹಾಕಿಡುತ್ತಾರೆ. ಇದು ಒಳ್ಳೆಯದೇ? ಎಂಬುದನ್ನು ತಿಳಿದುಕೊಳ್ಳಿ.
ಹಬ್ಬ ಹರಿದಿನಗಳಲ್ಲಿ ಕೆಲವರು ಮುಂಜಾನೆ ರಂಗೋಲಿ ಹಾಕಲು ಸಮಯವಿಲ್ಲವೆಂದು ರಾತ್ರಿಯೇ ಮನೆ ಮುಂದೆ ಗುಡಿಸಿ, ತೊಳೆದು ರಂಗೋಲಿ ಹಾಕಿಡುತ್ತಾರೆ. ಇದು ಒಳ್ಳೆಯದೇ. ಆದರೆ ಮರುದಿನ ಮುಂಜಾನೆ ಕೂಡ ಕ್ಲೀನ್ ಆಗಿ ತೊಳೆದು ರಂಗೋಲಿ ಹಾಕಲೇಬೇಕು. ಇಲ್ಲವಾದರೆ ಇದರಿಂದ ಯಾವುದೇ ಫಲ ಸಿಗುವುದಿಲ್ಲ. ರಂಗೋಲಿಯನ್ನು ಬ್ರಾಹ್ಮಿ ಮುಹೂರ್ತದಲ್ಲಿ ಹಾಕಬೇಕು. ಇದರಿಂದ ಲಕ್ಷ್ಮೀದೇವಿ ಆ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳಂತೆ.