Webdunia - Bharat's app for daily news and videos

Install App

Horoscope 2025: ಜ್ಯೋತಿಷಿ ಶ್ರೀ ವೆಂಕಟೇಶ್ವರ ಭಟ್ ಅವರಿಂದ 2025 ರ ಮೇಷಾದಿ ದ್ವಾದಶ ರಾಶಿಗಳ ವರ್ಷಫಲ

Krishnaveni K
ಬುಧವಾರ, 1 ಜನವರಿ 2025 (07:13 IST)
ಮೇಷಾದಿ ದ್ವಾದಶ ರಾಶಿಯವರವ್ಯಾದಿ ನವಗ್ರಹರ ರಾಶಿ ಬದಲಾವಣೆಯಿಂದ ಆಗುವ  ಗೋಚರಫಲ 01-01-2025 ರಿಂದ 31-12-2025 ರ ವರೆಗೆ ಹೇಗಿರಲಿದೆ ಎಂಬುದನ್ನು ಜ್ಯೋತಿಷಿ ಶ್ರೀ ವೆಂಕಟೇಶ್ವರ ಭಟ್ ಅವರು ವಿವರಿಸಿದ್ದಾರೆ. ಇವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಣಿತರಾಗಿದ್ದು ಅನುಭವಿಗಳೂ, ಮೇಧಾವಿಗಳೂ ಆಗಿದ್ದಾರೆ. ಶ್ರೀ ವೆಂಕಟೇಶ್ವರ ಭಟ್ ಅವರು ಯಾವ ರಾಶಿಯವರಿಗೆ ಈ ವರ್ಷ ಏನು ಫಲ ಎಂದು ನೀಡಿರುವ ವಿವರಣೆ ಇಲ್ಲಿದೆ ನೋಡಿ.

ಶನಿ ಗ್ರಹವು 29-03-2025 ನೇ ದಿನಾಂಕದಂದು ಮೀನ ರಾಶಿಯ ಪ್ರವೇಶ
ಗುರು ಗ್ರಹವು 14-05-2025 ನೇ ದಿನಾಂಕದಂದು ಮಿಥುನ ರಾಶಿಯ ಪ್ರವೇಶ

ಮೇಷರಾಶಿ :-ಜನ್ಮರಾಶಿಯಿಂದ ತೃತೀಯ-ಚತುರ್ಥದಲ್ಲಿ ಸಂಚರಿಸುವ ಗುರು ಹಾಗೂ ದ್ವಾದಶದಲ್ಲಿ ಶನಿ ಗ್ರಹವು ಹಲವು ವಿಧ ತಾಪತ್ರಯಗಳನ್ನೂ ಕಷ್ಟ- ನಷ್ಟಗಳನ್ನೂ ಸೂಚಿಸುತ್ತಾರೆ. ಪಂಚಮದ ಕೇತುವು ಮಕ್ಕಳ ಸಂಬಂಧ ಚಿಂತೆಗೆ ಕಾರಣನು. ದೈವಬಲವಿರದು,ತೃತಿಯದ ಗುರು ಹಲವು ವಿಘ್ನಗಳ ನಡುವೆಯೂ ಕೆಲಸವನ್ನು ಪೂರೈಸಲು ಸಹಕಾರಿ, ಮನಸ್ಸಿಗೆ ನೆಮ್ಮದಿ ಕಡಿಮೆ, ಸಮೀಪದ ಬಂಧು ಅಥವಾ ಪ್ರೀತಿಪಾತ್ರರಿಗೆ ತೊಂದರೆ, ಆರ್ಥಿಕ ಅಡಚಣೆ, ಸ್ಥಾನಚಲನೆ, ಕರ್ಮವಿಘ್ನ, ಬಂಧುಜನರಿಂದ ಕ್ಲೇಶಗಳು, ಮನೋವ್ಯಾಕುಲತೆ, ಪಶುಗಳಿಂದ,ವಾಹನಗಳಿಂದ  ಜಾಗ್ರತೆವಹಿಸಬೇಕು, ಕುಟುಂಬದಲ್ಲಿ ದುಃಖಕರ ಪ್ರಸಂಗಗಳು,ಮನಸ್ತಾಪಗಳೂ ತೋರುವುದು,ಆರೋಗ್ಯಕ್ಕೂ ಉತ್ತಮವಲ್ಲ.ಶನಿಯ ಸಾರ್ಧಸಪ್ತಚಾರದ ಫಲವಾಗಿ ಕೆಲಸಕಾರ್ಯಗಳಲ್ಲಿ ಜಾಡ್ಯತೆ, ಬದುಕಿನಲ್ಲಿ ಅಸ್ತವ್ಯಸ್ತತೆ, ಬುದ್ದಿಯ ಆಸ್ಥಿರತೆ, ಚಿಂತೆ ಇತ್ಯಾದಿ ಕಾಣಿಸೀತು. ಶಾರೀರಿಕ ಕಷ್ಟಗಳೂ ಉಂಟಾಗುವುದು.ಬಿದ್ದು ಪೆಟ್ಟಾಗುವ ಸಾಧ್ಯತೆ,ಶನಿಶಾಂತಿ, ಅಶ್ವತ್ಥಪ್ರದಕ್ಷಿಣೆ, ಸುಬ್ರಹ್ಮಣ್ಯಸೇವೆ, ಗಣಪತಿಸೇವೆ, ವಿಷ್ಣುಕ್ಷೇತ್ರದಲ್ಲಿ ಸೇವೆಗಳನ್ನು ಮಾಡಿಸುತ್ತಾ ಬರುವುದು ಉತ್ತಮ.ಪ್ರಾರಂಭದಲ್ಲಿ ಜೂನ್ ವರೆಗೆ ಅಗ್ನಿಭಯ, ಉದ್ಯೋಗ-ಗೃಹಕೃತ್ಯಗಳಲ್ಲಿ ತೊಂದರೆ,ಜಾಡ್ಯ, ಪ್ರಯಾಣದಲ್ಲಿ ಕಷ್ಟನಷ್ಟಗಳು ಎದುರಾಗುವವು,ಭೂಮಿ ವಿಷಯದಲ್ಲಿ ಜಾಗ್ರತೆವಹಿಸಬೇಕು,  ಔದ್ಯೋಗಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿಯಿದೆ. ಸಾಂಸಾರಿಕವಾಗಿಯೂ ಉತ್ತಮ ಕೆಲಸಗಳಾಗಲಿವೆ. ಮುಂದೆ ಸಪ್ಟೆಂಬರ 16ರ ವರೆಗೆ ಆರೋಗ್ಯದ ಬಗ್ಗೆ ಅದರಲ್ಲೂ ಹೊಟ್ಟೆ ಹಾಗೂ ಕಣ್ಣಿಗೆ ಸಂಬಂಧಿಸಿ ಜಾಗ್ರತೆ ವಹಿಸಬೇಕು. ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ, ಮಕ್ಕಳಿಂದ ಮತ್ತು ಆಧೀನ ನೌಕರರಿಂದ ಆಡಚಣೆ, ಆದಾಯವು ಉತ್ತಮವಿದ್ದರೂ ಖರ್ಚುವೆಚ್ಚ ಅಧಿಕ. ಆದರೂ ಈ ಸಮಯದಲ್ಲಿ ಕುಜನು ಅನುಕೂಲನಾಗಿದ್ದು ಹಲವು ಸಮಯದಿಂದ ಇದ್ದ ಸಮಸ್ಯೆಗೆ ಪರಿಹಾರ ಸಿಕ್ಕಿ ನಡೆಸಲು ಉದ್ದೇಶಿಸಿದ ಕಾರ್ಯವು ನೆರವೇರುವುದು. ಮುಂದೆ ಒಕ್ಟೋಬರ 17ರ ವರೆಗೆ ಆರೋಗ್ಯ ಸುಧಾರಿಸುವುದು. ಗೃಹಸೌಕರ್ಯ, ಬಂಧುಸಹಕಾರ, ಆತ್ಮಸ್ಥೆರ್ಯ ವೃದ್ಧಿಸುವುದು,ಮಕ್ಕಳ ವಿಷಯದಲ್ಲಿ ಸಮಸ್ಯೆ,ಮುಂದೆ  ಕಷ್ಟ-ನಷ್ಟಗಳು ಅಧಿಕ. ಪಿತ್ತೋಷ್ಣ ಜಾಡ್ಯ, ರಕ್ತದೋಷ, ಉದರಸಂಬಂಧ ವ್ಯಾಧಿಗಳು, ದಾಂಪತ್ಯದಲ್ಲಿ ವಿರಸ, ಬಂಧುವಿಯೋಗ,ಆರ್ಥಿಕ ಆಡಚಣೆ, ಅಪಘಾತಭಯ, ಇತ್ಯಾದಿ ಸಂಭವವಿದೆ,ಮುಂದೆ ವರ್ಷಾಂತ್ಯದವರೆಗೂ ಉತ್ತಮಫಲವಿದ್ದು ವ್ಯವಹಾರದಲ್ಲಿ ಮೊದಲಿನ ತೊಂದರೆಗಳು ಕಡಿಮೆಯಾಗುವುದು. ಹೊಸ ಯೋಜನೆಗಳ ಅನುಷ್ಠಾನ, ಅಪೇಕ್ಷಿತ ಜನಸಹಾಯ, ಅಧಿಕಾರಿ ವರ್ಗದವರಿಂದ ಪ್ರಯೋಜನ, ಕಾರ್ಯಸಫಲತೆ, ಆರೋಗ್ಯವೃದ್ಧಿ ಒದಗುವುದು.

ವೃಷಭರಾಶಿ :-ಈ ವರ್ಷ ದೈವಬಲ ಉತ್ತಮವಿದೆ, ದ್ವಿತೀಯದ ಗುರುವು ಕುಟುಂಬದ ಅಭಿವೃದ್ಧಿಯನ್ನು ಮಾಡುತ್ತದೆ,ಶನಿಯೂ ಏಕಾದಶದಲ್ಲಿ ಸುಫಲದಾಯಕನು, ರಾಹುಕೇತುಗಳು ಮಿಶ್ರಫಲದಾಯಕರು, ಉದ್ಯೋಗ ವ್ಯವಹಾರದಲ್ಲಿ ಅನುಕೂಲಗಳು, ಪತಿಪತ್ನಿಯರಲ್ಲಿ ಹೆಚ್ಚಿನ ಅನ್ನೋನ್ಯತೆ, ಮಕ್ಕಳಿಗೂ ಅನುಕೂಲವುಂಟಾಗುವುದು. ಆದಾಯ ಹೆಚ್ಚುವುದು. ಮನೆಯಲ್ಲಿ ಶುಭಶೋಭಾನಾದಿ ಮಂಗಲಕಾರ್ಯಗಳು ನಡೆಯುವವು, ಗ್ರಹಿಸಿದ ಕೆಲವೊಂದು ಕಾರ್ಯಗಳು ಅನಿರೀಕ್ಷಿತವಾಗಿ ನಡೆಯುತ್ತವೆ, ಸಹೋದರ ಸಮಾನ ವ್ಯಕ್ತಿಯಿಂದ ಹಾಗೂ ಬಂಧುಗಳಿಂದ ವಿಶೇಷ ಸಹಕಾರ ಪಡೆಯುವಿರಿ, ಉದ್ಯೋಗಾದಿ ವಿಷಯದಲ್ಲಿ ಉತ್ತಮ ಅಭಿವೃದ್ಧಿ, ಬಹಳ ಸಮಯದಿಂದ ನಿಂತ ಕೆಲಸ ಕಾರ್ಯಗಳು ಮುಂದುವರಿಯುತ್ತದೆ, ಮನೆಯಿಂದ ಹೊರಗೆ ಕಾಲ ಕಳೆಯಬೇಕಾಗುತ್ತದೆ, ಉತ್ತಮ ಸಾಮಾಜಿಕ ಸ್ಥಾನಮಾನಗಳು ಒದಗುವವು, ಕೆಲವೊಂದು ಸಂದರ್ಭಗಳಲ್ಲಿ ಕಾರ್ಯವಿಘ್ನಗಳೂ ತೊಂದರೆಗಳೂ ಎದುರಾಗುವವು. ಕೆಲವೊಂದು ಅನಿರೀಕ್ಷಿತ ಆಘಾತಗಳು ಉಂಟಾಗುವುದು, ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಲಭ್ಯ, ಕಾರ್ಯಸಫಲತೆ, ಸ್ಥಾನಮಾನಾದಿ ಲಾಭ, ಧನಾಭಿವೃದ್ಧಿ, ವ್ಯವಹಾರಗಳು ಉತ್ತಮಗೊಳ್ಳುವುದು, ಇತರರಿಂದ ಸಹಕಾರವನ್ನು ಪಡೆಯುವಿರಿ, ಆರೋಗ್ಯವು ವೃದ್ಧಿಸುವುದು, ಮಕ್ಕಳಿಂದ ಶುಭಫಲ, ಇತ್ಯಾದಿಗಳಿದ್ದರೂ ಆನಂತರ ಕಾರ್ಯವೈಫಲ್ಯ, ಬಂಧುವಿರೋಧ, ದುಃಖ, ಪಿತ್ತೋಷ್ಣಜಾಡ್ಯ, ಜ್ವರರೋಗಾದಿಗಳು, ಅಗ್ನಿಭಯ, ವೃತ್ತಿ-ವಾಸಸ್ಥಳದಲ್ಲಿ ಬದಲಾವಣೆ, ಇತ್ಯಾದಿಗಳು ಇರುತ್ತವೆ, ಮಕ್ಕಳ ವಿಷಯದಲ್ಲಿ ಎಚ್ಚರಿಕೆಯಿರಲಿ, ಮುಂದೆ ಅಗೋಸ್ತುನ ವರೆಗೆ ಆರೋಗ್ಯ ಇತ್ಯಾದಿಗಳಿರುತ್ತವೆ,  ಸಾಂಸಾರಿಕ-ಔದ್ಯೋಗಿಕ-ಆರ್ಥಿಕ ಅಭಿವೃದ್ಧಿಯಿದೆ, ದೀರ್ಘಕಾಲದ ಸಮಸ್ಯೆಗೆ ಪರಿಹಾರ ಸಿಗುವುದು. ಮುಂದೆ ಒಕ್ಟೋಬರ 17ರ ವರೆಗೆ ಭೂಮಿ, ಬಂಗಾರ, ಹವಳ, ತಾಮ್ರ ಇತ್ಯಾದಿ ಅಥವಾ ಅವುಗಳ ವ್ಯವಹಾರದಿಂದ ಲಾಭವಿದೆ. ಗೃಹ-ವಾಹನಾದಿ ಸುಖಗಳಲ್ಲಿ ಕೊರತೆ, ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಕಾಣಿಸೀತು. ಮಕ್ಕಳಿಂದ ಅಡಚಣೆಗಳು ಎದುರಾದೀತು. ಮುಂದೆ ನವಂಬರ 16ರ ವರೆಗೆ ಆರೋಗ್ಯದಲ್ಲಿ ಸುಧಾರಣೆ, ಶತ್ರುನಾಶ, ಗೃಹಸೌಕರ್ಯವೃದ್ಧಿ, ಬಂಧುಸಹಕಾರ ಸಿಗುವುದು. ಆತ್ಮಸ್ಥೆರ್ಯವೃದ್ಧಿ ಇತ್ಯಾದಿ ಪ್ರಾಪ್ತವಾಗುವವು. ಮುಂದೆ ಫೆಬ್ರವರಿ 12ರ ವರೆಗೆ ಮಾರ್ಗಸಂಚಾರ, ಉದರ ಸಂಬಂಧ ಹಾಗೂ ಉಸಿರಾಟದ ತೊಂದರೆಗಳು, ಕೌಟುಂಬಿಕ ಕಿರಿಕಿರಿ, ಕಲಹ, ಆರ್ಥಿಕವಾಗಿ ಕಷ್ಟ- ನಷ್ಟಗಳು, ಕಾರ್ಯವಿಘ್ನ, ಶ್ರಮ ಇತ್ಯಾದಿಗಳಿದ್ದರೂ ವಿವಿಧ ಮೂಲಗಳಿಂದ ಧನಪ್ರಾಪ್ತಿಯಿದೆ. ಮುಂದೆ ವರ್ಷಾಂತ್ಯದ ವರೆಗೂ ಸಕಲ ಕಾರ್ಯಸಿದ್ಧಿ, ಸ್ಥಾನಮಾನಾದ್ಯುತ್ಕರ್ಷ, ಭೂಧನಾದಿ ಲಾಭ, ಆರೋಗ್ಯವೃದ್ಧಿ ಇತ್ಯಾದಿ ಪ್ರಾಪ್ತವಾಗುವವು.

ಮಿಥುನರಾಶಿ :- ಈ ವರ್ಷ ದೈವವು ಪ್ರತಿಕೂಲವಾಗಿದೆ. 12-1 ರ ಗುರು, ದಶಮದ ಶನಿ ಹಾಗೂ ನವಮದ ರಾಹು ಪ್ರತಿಕೂಲ ಫಲದಾಯಕರು, ಉದ್ಯೋಗದಲ್ಲಿ ಬದಲಾವಣೆ, ಸ್ತ್ರೀ ಸಂಬಂಧವಾಗಿ ತೊಂದರೆಗಳು, ವ್ಯವಹಾರ ಹಾಗೂ ಸಂಬಂಧಗಳಲ್ಲಿ ಸ್ಥಿರತೆ ಕೈಗೊಳ್ಳಲು ಬಂಧುಮಿತ್ರರಿಂದ ಒತ್ತಡ, "ಸ್ಥಾನಭ್ರಂಶಧನಕ್ಷಯೌಕಲಹಧೀಜಾಡ್ಯಗುರ ಜನ್ಮಗೇ" ಎಂಬಂತೆ ಜನ್ಮರಾಶಿಯ ಗುರುವಿನಿಂದ ಧನವ್ಯಯ, ಸ್ಥಾನಮಾನಗಳಿಗೆ ಹಾನಿ, ಬುದ್ಧಿಯ ಅಸ್ಥಿರತೆ, ಕಲಹ ಇತ್ಯಾದಿಗಳೊಂದಿಗೆ ಪರಸ್ಥಳ ಸಂಚಾರಾದಿ ಫಲಗಳೂ ಉಂಟಾಗುವುದು,ಈ ಸಮಯದಲ್ಲಿ ಪ್ರಭಾವೀ ವ್ಯಕ್ತಿಗಳ ಸಂಪರಕವಾಗುತ್ತದೆ,ಕಾರ್ಯಗಳಲ್ಲಿ ಆಲಸ್ಯ ತೋರುವುದರಿಂದ ಹಾಗೂ ಶಾರೀರಿಕ ಕಷ್ಟಗಳಿಂದ ನಿಮಗೆ ಕೆಲವೊಂದು ನಷ್ಟಗಳು ಉಂಟಾಗುವುದು,ಆತ್ಮೀಯರೊಂದಿಗೆ ಕಲಹವಾದೀತು,ದುಡುಕಿನ ಕೆಲಸಗಳಿಂದ ವೈವಾಹಿಕ ಜೀವನಕ್ಕೆ ತೊಂದರೆಯಾಗಬಹುದು,ವಿದ್ಯೆಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಪ್ರತಿಕೂಲ ಫಲಗಳುಂಟಾಗುವುದು, ನವ ಮದ ರಾಹುವು ಧರ್ಮಸಮ್ಮತವಲ್ಲದ ಪ್ರವೃತ್ತಿಗಳಿಗೆ ಪ್ರೇರೇಪಿಸುವನು, ಶಿವ-ಸುಬ್ರಹ್ಮಣ್ಯ-ಮಹಾವಿಷ್ಣು ಕ್ಷೇತ್ರಗಳಲ್ಲಿ ಯಥಾಶಕ್ತಿ ಸೇವೆ ಸಲ್ಲಿಸುವದರಿಂದ ಶುಭ, ಮೇ 14ರ ವರೆಗೆ ಧನಾಭಿವೃದ್ಧಿ,ಸ್ಥಾನಮಾನಾದ್ಯುತ್ಕರ್ಷೆ ಪ್ರಾಪ್ತವಾಗುವವು, ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ಕೆಟ್ಟಜನರ ಸಂಪರ್ಕದಿಂದ ಅಶುಭಫಲ, ಸ್ಥಾನಭ್ರಂಶ, ಬಂಧುದುಃಖ, ಇತ್ಯಾದಿಗಳು ಅಗೋಸ್ತು 16ರ ವರೆಗೂ ಇರುತ್ತವೆ, ವಾಹನ, ಭೂಮಿ, ಮನೆಗೆ ಸಂಬಂಧಿಸಿದ ವ್ಯವಹಾರದಿಂದ ನಷ್ಟ ಸಂಭವ, ಉದ್ಯೋಗದಲ್ಲಿ, ಗೃಹಕೃತ್ಯಗಳಲ್ಲಿ ಆಡಚಣೆ, ಈ ಮಧ್ಯೆ ಜೂನ್-ಜುಲಾಯಿ ಅವಧಿಯಲ್ಲಿ ಧಾತುದ್ರವ್ಯಗಳಿಂದ ಲಾಭ, ವ್ಯವಹಾರಗಳು ಉತ್ತಮಗೊಳ್ಳುವುದು, ಇತರರಿಂದ ಸಹಕಾರ ಪಡೆಯುವಿರಿ,ಆರೋಗ್ಯವು ವೃದ್ಧಿಸುವುದು,ಮುಂದೆ ಸಪ್ಟೆಂಬರ 16ರ ವರೆಗೆ ಗೃಹಸೌಕರ್ಯ ಪ್ರಾಪ್ತಿ, ಸಾಂಸಾರಿಕ-ಔದ್ಯೋಗಿಕ-ಆರ್ಥಿಕ ಅಭಿವೃದ್ಧಿಯಿದೆ,ಸಹೋದರ ಸಮಾನರಿಂದ ಅಸಮಾಧಾನ, ಮಕ್ಕಳಿಗೆ ಸಂಬಂಧಿಸಿ ಚಿಂತೆ, ಶತ್ರುಪೀಡೆ, ಅಪಕೀರ್ತಿ ಇತ್ಯಾದಿ ಎದುರಾಗುತ್ತದೆ,ಮುಂದೆ ಒಕ್ಟೋಬರ 18ರ ವರೆಗೆ ಗೃಹವಾಹನಾದಿ ಸುಖಗಳಿಗೆ ಹಾನಿ, ದಾಪಂತ್ಯದಲ್ಲಿ ಸಾಮರಸ್ಯದ ಕೊರತೆ,ಮಕ್ಕಳಿಂದ ಮತ್ತು ಅಧೀನ ನೌಕರರಿಂದ ಅಡಚಣೆಗಳು, ಮುಂದೆ ದಶಂಬರ 15ರ ವರೆಗಿನ ಅವಧಿಯು ಅತ್ಯಂತ ಶುಭ. ಆತ್ಮಸ್ಥೆರ್ಯ ವೃದ್ಧಿ, ರೋಗನಿವೃತ್ತಿ, ಶತ್ರುನಾಶ, ಶೋಕಪರಿಹಾರ, ಮಕ್ಕಳಿಗೂ ಅನುಕೂಲಫಲ, ಆದಾಯವು ಹೆಚ್ಚುವುದು. ಮನೆಯಲ್ಲಿ ಶುಭಶೋಭನಾದಿ ಮಂಗಲಕಾರ್ಯಗಳು, ಪತಿಪತ್ನಿಯರಲ್ಲಿ ಅನ್ನೋನ್ಯತೆ ಹೆಚ್ಚುವುದು,ಕೌಟುಂಬಿಕ ವಿರಸ, ಕಲಹ, ಆರ್ಥಿಕ ಸಂಕಷ್ಟ,ಖಿನ್ನತೆ, ಅಪಘಾತ-ದೈಹಿಕ ವಿಪದಾಪತ್ತುಗಳ ಸಂಭವ,ಮುಂದೆ ವರ್ಷಾಂತ್ಯದ ವರೆಗೂ ಮೇಲಿನ ಫಲಗಳೇ ಹೆಚ್ಚಾಗಿ ಅನುಭವಕ್ಕೆ ಬರುವವು. ಆಡಚಣೆಗಳ ನಡುವೆಯೂ ಕೌಟುಂಬಿಕವಾಗಿ, ಔದ್ಯೋಗಿಕವಾಗಿ ಅಭಿವೃದ್ಧಿಯಿದೆ.

ಕರ್ಕಾಟಕ ರಾಶಿ :- ಈ ವರ್ಷ ದೈವಬಲವಿಲ್ಲ. ಜನ್ಮರಾಶಿಯಿಂದ ಭಾಗ್ಯಸ್ಥಾನದಲ್ಲಿ ಸಂಚರಿಸುವ ಶನಿ ಹಾಗೂ ದ್ವಾದಶ-ಜನ್ಮರಾಶಿಗಳಲ್ಲಿ ಸಂಚರಿಸುವ ಗುರು ಹಾಗೂ 8-2ರ ರಾಹು-ಕೇತುಗಳು ಅನೇಕ ವಿಧದ ಕಷ್ಟ-ನಷ್ಟಗಳನ್ನು ಸೂಚಿಸುವರು, ಅನ್ಯವ್ಯಕ್ತಿಗಳ ಮಾತಿನಿಂದ ಮನಸ್ಸಿಗೆ ಅಸಮಾಧಾನ ತೋರಬಹುದು, ಹಿರಿಯರ ನುಡಿಗಳು ಕೆಲವೊಮ್ಮೆ ಸರಿಕಾಣದು, ದೂರಸ್ಥಳದಲ್ಲಿ ಹೆಚ್ಚಾಗಿ ವಾಸವನ್ನು ಮಾಡಬೇಕಾಗುವುದು, ಕೌಟುಂಬಿಕ ಸುಖವು ಅಲ್ಪವಾಗುವುದು, ಅನಗತ್ಯ ಸುಳ್ಳು ಆಪಾದನೆಗೆ ಗುರಿಯಾಗುವ ಸಂದರ್ಭಗಳೂ ಇರುತ್ತದೆ. ಆರ್ಥಿಕ ಸಂಕಷ್ಟಗಳೆದುರಾಗುವವು, ಉದ್ಯೋಗದಲ್ಲಿ ಬದಲಾವಣೆ, ಸ್ತ್ರೀ ಸಂಬಂಧವಾಗಿ ತೊಂದರೆಗಳು, ಕಲುಷಿತ ಆಹಾರ ಸೇವನೆಯಿಂದ ಅನಾರೋಗ್ಯ. ನಮ್ಮ ವ್ಯವಹಾರ ಹಾಗೂ ಸಂಬಂಧಗಳಲ್ಲಿ ಸ್ಥಿರತೆ ಕೈಗೊಳ್ಳಲು ಬಂಧುಮಿತ್ರರಿಂದ ಒತ್ತಡ. ಕೆಲಸಗಳು ನಿಧಾನವಾಗಿ ನಡೆಯುವುದು. ಕೆಲವೊಮ್ಮೆ ಅನಗತ್ಯ ಪ್ರಯಾಣ, ಮನಸ್ಸಿಗೆ ಖಿನ್ನತೆ, ಶಾರೀರಿಕ ಆಯಾಸಗಳೂ ತೋರಬಹುದು. ಅನಗತ್ಯ ಖರ್ಚುವೆಚ್ಚಗಳೆದುರಾಗುವವು. ಗೋಸೇವೆ. ಅನಾಥರಿಗೆ-ಬಡವರಿಗೆ ಅನ್ನದಾನ, ಗಣಪತಿ, ಸ್ಕಂದ, ಮಹಾವಿಷ್ಣು ಕ್ಷೇತ್ರಗಳಲ್ಲಿ ವಿಶೇಷಸೇವೆಯನ್ನು ನಡೆಸುವುದರಿಂದ ಶುಭ.
ಪ್ರಾರಂಭದಲ್ಲಿ ಎಪ್ರಿಲ್ 13ರ ವರೆಗೆ ಹಣದ ವ್ಯವಹಾರದಲ್ಲಿ ವಿರೋಧ ಫಲ. ಕಾರ್ಯವಿಳಂಬ, ನಮ್ಮವರ ಆರೋಗ್ಯದ ಬಗ್ಗೆ ಚಿಂತೆ. ಮುಂದೆ ಜೂನ್ 15ರ ವರೆಗೆ ವ್ಯಾವಹಾರಿಕ ಅಡಚಣೆಗಳ ನಿವಾರಣೆ, ಹೊಸ ಯೋಜನೆಗಳ ಅನುಷ್ಠಾನ, ಸಣ್ಣಸಮಸ್ಯೆಗಳು ತೋರಿದರೂ ನಿಭಾಯಿಸುವಿರಿ. ಕುಟುಂಬವರ್ಗದಿಂದ ಸ್ಪೂರ್ತಿ ಸಿಗುವುದು. ಸ್ಥಾನಮಾನಾದಿ ಲಾಭ, ಧನಾಭಿವೃದ್ಧಿಯಿದೆ. ಮುಂದೆ ಸಪ್ಟಂಬರ 16ರ ವರೆಗೆ ಲೋಹ, ಬೆಂಕಿ ಮತ್ತು ವಿದ್ಯುತ್ತುಗಳಲ್ಲಿ ವಿಶೇಷ ಜಾಗ್ರತೆ ವಹಿಸಿ. ಪಿತ್ತ ಅಥವಾ ಉಷ್ಣಸಂಬಂಧೀ ತೊಂದರೆ ಕಂಡುಬರುವುದು. ಉದ್ಯೋಗದಲ್ಲಿ ಗೃಹಕೃತ್ಯಗಳಲ್ಲಿ ತೊಂದರೆಗಳು ಕಾಡಬಹುದು. ಈ ಮಧ್ಯೆ ಜುಲಾಯಿ ಅಂತ್ಯದಿಂದ ಮಕ್ಕಳಿಂದ ಶುಭಫಲ, ಆರೋಗ್ಯ ವೃದ್ಧಿ. ಮುಂದೆ ಒಕ್ಟೋಬರ 17ರ ವರೆಗೆ ಗೃಹಸೌಕರ್ಯ, ಆರೋಗ್ಯ ಸುಧಾರಣೆ, ಆರ್ಥಿಕ-ಔದ್ಯೋಗಿಕ ಅಭಿವೃದ್ಧಿ ಪ್ರಾಪ್ತವಾಗುವವು. ಮುಂದೆ ದಶಂಬರ 7ರ ವರೆಗೆ ಪಿತ್ತೋಷ್ಣಜಾಡ್ಯ, ಜಠರರೋಗ, ರಕ್ತದೋಷ, ಕೆಟ್ಟಜನರ ಸಂಸರ್ಗ, ಸ್ಥಾನಭ್ರಂಶ, ಬಂಧುದುಃಖ, ಸ್ಥಿರಸೊತ್ತುಗಳಿಂದ ನಷ್ಟ, ಕಾರ್ಯವಿಘ್ನ, ಮಕ್ಕಳಿಗೆ ಸಂಬಂಧಿಸಿ ದುಃಖ-ಚಿಂತೆ ಇತ್ಯಾದಿಗಳಿಂದ ಮನಸ್ಸಿನ ನೆಮ್ಮದಿ ಕಡಿಮೆ. ಮುಂದೆ ಉತ್ತಮವಿದ್ದು ಆರೋಗ್ಯವು ಸುಧಾರಿಸುವುದು. ಗೃಹಸೌಕರ್ಯ ಉಂಟಾಗುವುದು. ದೀರ್ಘಕಾಲದ ಸಮಸ್ಯೆಗೆ ಪರಿಹಾರ, ಶತ್ರುಭಯಕಲಹಾದಿಗಳಿಂದ ಮುಕ್ತಿ, ಕಾರ್ಯಜಯ ಲಭಿಸುವುದು. ಮುಂದೆ ವರ್ಷಾಂತ್ಯದವರೆಗೂ ಕಷ್ಟ-ನಷ್ಟಗಳೇ ಅಧಿಕ. ದೂರ ಪ್ರಯಾಣ, ದಾಂಪತ್ಯದಲ್ಲಿ ವಿರಸ, ಶಾರೀರಿಕ ಆಪಾಯಗಳು, ದೇಹಕ್ಷತಿಯಿಂದ ನಿಃಶಕ್ತಿ, ಆರ್ಥಿಕಮುಗ್ಗಟ್ಟು, ಅವಮಾನ, ಇತ್ಯಾದಿ ಎದುರಾಗುವವು.

ಸಿಂಹರಾಶಿ :- ವರ್ಷಾರಂಭದಲ್ಲಿ ಗುರುವು ದಶಮದಲ್ಲಿದ್ದು ಅನಂತರ ಲಾಭಸ್ಥಾನದ ಗುರುವು ದೈವಬಲವೊದಗಿಸುವನು. ಎಲ್ಲಾ ರೀತಿಯಲ್ಲಿ ಅನುಕೂಲಗಳು ಉಂಟಾಗುವುದು. ಗ್ರಹಿಸಿದ ಕಾರ್ಯಗಳನ್ನು ಈಗ ಪ್ರಯತ್ನಿಸಿದಲ್ಲಿ ಸಿದ್ಧಿಸುವುದು. ಕುಟುಂಬದಲ್ಲಿ ಹೊಸಬರ ಆಗಮನದ ನಿರೀಕ್ಷೆಯಿದೆ. ಆರ್ಥಿಕವಾಗಿ ಕೆಲವು ಅನುಕೂಲ ಅಭಿವೃದ್ಧಿಯಾಗುವುದು. ಉನ್ನತ ಸ್ಥಾನಮಾನಗಳು ಸಿಗುವ ಸಾಧ್ಯತೆ. ಗೃಹದಲ್ಲಿ ಶುಭಶೋಭನಾದಿ ಕಾರ್ಯಗಳು ನಡೆಯುವುದು. ಆರ್ಥಿಕವಾಗಿಯೂ ಉತ್ತಮ ಪ್ರಗತಿಯುಂಟು. ದೂರಪ್ರಯಾಣ ಯೋಗವಿದೆ. ಹೊಸಕಾರ್ಯದ ಬಗ್ಗೆ ಆಲೋಚಿಸುವಿರಿ, ಆದರೂ ಅಷ್ಟಮ ಶನಿ, ಜನ್ಮ- ಸಪ್ತಮಗಳ ರಾಹುಕೇತುಗಳಿಂದ ಕುಟುಂಬದಲ್ಲಿ ದುಃಖಕರ ಪ್ರಸಂಗಗಳು, ಮನಸ್ತಾಪಗಳೂ ಎದುರಾಗುವವು. ಆರೋಗ್ಯಕ್ಕೂ ಉತ್ತಮವಲ್ಲ. ಸಾಂಸಾರಿಕ ಸುಖದಲ್ಲಿ ಕೊರತೆ, ವಾಹನಾದಿಗಳಿಂದ ಮತ್ತು ಕೆಳಮಟ್ಟದ ಜನರಿಂದ ತೊಂದರೆ ಸಂಭವ, ಕೃಷಿಕಾರ್ಯಗಳಲ್ಲಿ ನಷ್ಟ ವಿಘ್ನಗಳು, ಶರೀರ-ಮನಸ್ಸುಗಳಿಗೆ ಪೀಡೆ, ಮನಃಕ್ಷೇಶ, ಸ್ಥಾನಮಾನಾದಿ ಹಾನಿ, ಧನಹಾನಿ, ಸಂತಾನಸಂಬಂಧ ದುಃಖ, ಅಶುಭಗಳ ಅನುಭವವಾದೀತು. ಶನಿಶಾಂತಿ, ಗಣಪತಿಸೇವೆ, ಸುಬ್ರಹ್ಮಣ್ಯ ಕ್ಷೇತ್ರದರ್ಶನದಿಂದ ಶುಭ. ಪ್ರಾರಂಭದಲ್ಲಿ ಮೇ 14ರ ವರೆಗೆ ಕಾರ್ಯವಿಘ್ನ, ಶಾರೀರಿಕ ತೊಂದರೆಗಳು, ಬಂಧುವಿಯೋಗ, ಕೌಟುಂಬಿಕ ವಿರಸ, ಹಣದ ವ್ಯವಹಾರದಲ್ಲಿ ವಿರೋಧಫಲ, ಇತ್ಯಾದಿ ಎದುರಾಗುವವು. ಮುಂದೆ ಜುಲಾಯಿ 16ರ ವರೆಗೆ ಕಾರ್ಯಜಯ, ಸ್ಥಾನಮಾನಾದ್ಯುತ್ಕರ್ಷೆ, ಧನಸುವರ್ಣಾದಿಲಾಭ, ಜತೆಗೆ ಕಲಹ-ಶತ್ರುಕೃತ ದೋಶದಿಂದ ರಾಜೋಪದ್ರವ, ಧನಹಾನಿ ಇತ್ಯಾದಿ ಸಂಭವ, ಮುಂದೆ ಒಕ್ಟೋಬರ 17ರ ವರೆಗೆ ಅಗ್ನಿಭಯ, ಉದ್ಯೋಗ-ಗೃಹಕೃತ್ಯಗಳಲ್ಲಿ ತೊಂದರೆ, ಅನಾರೋಗ್ಯ, ಪ್ರಯಾಣದಲ್ಲಿ ದುಃಖ, ಬುದ್ದಿಯ ಆಸ್ಥಿರತೆ, ಆರ್ಥಿಕ ಅಡಚಣೆ ಇತ್ಯಾದಿ ಸಂಭವ. ಆದರೂ ಈ ಅವಧಿಯಲ್ಲಿ ಕುಜನು ಅನುಕೂಲನಾಗಿದ್ದು ಪ್ರತಿಸ್ಪರ್ಧಿಗಳಿಗೆ ಹಿನ್ನಡೆ, ಹೊಸ ಯೋಜನೆಗಳ ಅನುಷ್ಠಾನಕ್ಕೆ ಉತ್ತಮ ಕಾಲ. ಅಪೇಕ್ಷಿಸಿದ ಜನಸಹಾಯ ಲಭ್ಯ. ಕೆಳವರ್ಗದ ಜನರಿಂದ ಪ್ರಯೋಜನೆ, ಮಕ್ಕಳಿಂದ ಶುಭಫಲ, ಮುಂದೆ ನವೆಂಬರ 16ರ ವರೆಗೂ ಮೇಲಿನ ಶುಭಫಲಗಳೇ ಕೆಲವೊಂದು ಪ್ರಾಪ್ತವಾಗುವವು. ಮುಂದೆ  ಶಾರೀರಿಕ ಆರೋಗ್ಯದ ಬಗ್ಗೆ ಜಾಗ್ರತೆವಹಿಸಬೇಕು. ಗೃಹವಾಹನಾದಿಗಳಿಗೆ ಖರ್ಚು, ಪ್ರಾಣಿ ವರ್ಗದಿಂದ ತೊಂದರೆ, ಮೆಕ್ಕಳಿಂದ ಮತ್ತು ಅಧೀನ ನೌಕರರಿಂದ ಆಡಚಣೆಗಳು ಎದುರಾದೀತು. ಮುಂದೆ ಶತ್ರುಭಯಕಲಹಾದಿಗಳಿಂದ ಮುಕ್ತಿ, ಕಾರ್ಯಜಯ, ಆರೋಗ್ಯ ಸುಧಾರಣೆ. ಗೃಹಸೌಕರ್ಯವೃದ್ಧಿ, ಬಂಧುಸಹಕಾರ ಸಿಗುವುದು. ಕೌಟುಂಬಿಕ ಜೀವನದಲ್ಲಿ ಏರುಪೇರಾದೀತು. ಮುಂದೆ ವರ್ಷಾಂತ್ಯದವರೆಗೂ ಅನಾರೋಗ್ಯ, ಅಪಘಾತಭಯ, ಅವಮಾನ, ಆರ್ಥಿಕ ಕಷ್ಟ-ನಷ್ಟಗಳು ಎದುರಾಗುವವು. ಕಾರ್ಯಗಳಿಗೆ ತಡೆಗಳುಂಟಾಗುವ ಸಾದ್ಯತೆಯಿದೆ.

ಕನ್ಯಾರಾಶಿ :-ವರ್ಷಾರಂಭದಲ್ಲಿ ಮತ್ತು ವರ್ಷ ಮಧ್ಯದಲ್ಲಿ ನವಮ ಏಕಾದಶದ ಗುರುವು ದೈವಬಲವೊದಗಿಸಿದರೂ ಉಳಿದಂತೆ ದಶಮದ ಗುರುವು ಮಿಶ್ರಫಲದಾಯಕನು, ಸಪ್ತಮದ ಶನಿ ದ್ವಿತೀಯದ ಕೇತು ಅಶುಭರು, ಈ ಅವಧಿಯಲ್ಲಿ ಗುಣದೋಷಗಳಿಂದ ಕೂಡಿದ ಮಿಶ್ರಫಲಾನುಭವವಾಗುವುದು. ಮನೋನಿಶ್ಚಿತ ಕೆಲಸಗಳು, ವಿವಾಹಾದಿ ಶುಭ ಸಮಾರಂಭಗಳು ನಡೆಯುವುದು. ಉದ್ಯೋಗ ವ್ಯವಹಾರದಲ್ಲಿ ಕೆಲವು ಅನುಕೂಲಗಳು ಉಂಟಾಗುವುದು. ಆರ್ಥಿಕವಾಗಿ ಉತ್ತಮ ಅಭಿವೃದ್ಧಿಯಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ವಿಶೇಷ ಪ್ರಯತ್ನವು ಅಗತ್ಯ ಕೆಲವೊಂದು ಕಾರ್ಯಗಳಲ್ಲಿ ಆಡಚಣೆಗಳೆದುರಾಗಿ ನಿರೀಕ್ಷಿತ ಫಲ ಸಿಗದು. ಸಹನೆ ಕಳೆದುಕೊಳ್ಳದೆ ಸ್ವಸಾಮರ್ಥ್ಯದಲ್ಲಿ ಭರವಸೆಯಿಡಿ, ಧನಹಾನಿ, ಸಂತಾನ ಸಂಬಂಧ ದುಃಖ, ಸ್ಥಾನಮಾನಾದಿ ಹಾನಿ  ಎದುರಾದೀತು ಕೆಲವರಿಗೆ ಶತನಮಾನಾದಿ ಪ್ರಾಪ್ತಿ. ಹೊಟ್ಟೆಯಿಂದ ಕೆಳಭಾಗದಲ್ಲಿ ಆನಾರೋಗ್ಯ ಕಾಣಿಸಿಕೊಳ್ಳಬಹುದು. ಸಂಗಾತಿಗೂ ಈ ಕಾಲವು ಅನುಕೂಲಕರವಲ್ಲ. ಕೊಟ್ಟ ಮಾತಿನಂತೆ ನಡೆಯಲು ಸಾಧ್ಯವಾಗದು. ಸಾಂಸಾರಿಕ ಹೊಂದಾಣಿಕೆಯಲ್ಲಿ ಕೊರತೆ ತೋರುವುದು. ಗಣಪತಿ ಸೇವೆ, ಶಿವಕ್ಷೇತ್ರ-ವಿಷ್ಣುಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸುವುದರಿಂದ ಶುಭ. ಪ್ರಾರಂಭದಲ್ಲಿ ಜೂನ್ 15ರ ವರೆಗೆ ದೇಹಾರೋಗ್ಯದಲ್ಲಿ ಏರುಪೇರು, ಪಿತ್ತ, ರಕ್ತ, ಮೂತ್ರಾಶಯ, ಉದರಸಂಬಂಧ ಅನಾರೋಗ್ಯ, ಕಾರ್ಯವಿಘ್ನಗಳು, ಬಂಧುವಿಯೋಗ, ಆರ್ಥಿಕ ಅಡಚಣೆಗಳು, ಇತ್ಯಾದಿ ಎದುರಾಗುವವು. ಮುಂದೆ ಅಗೋಸ್ತು 16ರ ವರೆಗೆ ವ್ಯವಹಾರದಲ್ಲಿ ಮೊದಲಿನ ತೊಂದರೆಗಳು ಕಡಿಮೆಯಾಗುವುದು. ಹೊಸ ಯೋಜನೆಗಳ ಅನುಷ್ಠಾನ, ಸ್ಥಾನಮಾನ, ಆರ್ಥಿಕ ಪ್ರಗತಿ, ಆರೋಗ್ಯವೃದ್ಧಿ ಪ್ರಾಪ್ತವಾಗುವವು. ಮುಂದೆ ನವಂಬರ 16ರ ವರೆಗೆ ಬೆಂಕಿ ಮತ್ತು ವಿದ್ಯುತ್ತುಗಳಿಂದ ಅಪಾಯ, ಉದ್ಯೋಗ ಹಾಗೂ ಗೃಹಕೃತ್ಯಗಳಲ್ಲಿ ಆಡಚಣೆ, ಆರೋಗ್ಯದಲ್ಲಿ ಏರುಪೇರು, ಪ್ರಯಾಣದಲ್ಲಿ ಕಷ್ಟನಷ್ಟಗಳು, ವೃತ್ತಿ-ವಾಸಸ್ಥಳದಲ್ಲಿ ಬದಲಾವಣೆ, ವಾಗೋಷದಿಂದ ಕಲಹ, ಇತ್ಯಾದಿ ಎದುರಾಗುವವು. ಈ ಮಧ್ಯೆ ಒಕ್ಟೋಬರ 27 ರಿಂದ ಕೆಲವೊಂದು ಉತ್ತಮಫಲಗಳಿದ್ದು ವ್ಯವಹಾರಗಳು ಉತ್ತಮಗೊಳ್ಳುವುದು. ಆರೋಗ್ಯವೃದ್ಧಿ, ಪ್ರತಿಸ್ಪರ್ಧಿಗಳ ವಿರುದ್ಧ ಜಯ, ಕೆಳವರ್ಗದವರಿಂದ ಪ್ರಯೋಜನ, ಮಕ್ಕಳಿಂದ ಶುಭಫಲ, ಇತ್ಯಾದಿಗಳು ಮುಂದೆ ದಶಂಬರ 16ರ ವರೆಗೂ ಪ್ರಾಪ್ತವಾಗುವವು. ಅಭಿವೃದ್ಧಿಯಿದೆ. ವ್ಯವಹಾರದಲ್ಲಿ ವ್ಯವ ನಷ್ಟ, ಕೌಟುಂಬಿಕ ಕಲಹೆ, ಸೇವಕರಿಂದ ಅಡಚಣೆ ಇತ್ಯಾದಿಗಳು ಮುಂದೆ ಎದುರಾದೀತು. ಮುಂದೆ ವರ್ಷಾಂತ್ಯದ ವರೆಗೂ ದೇಹಾರೋಗ್ಯ ಸುಧಾರಣೆ, ದೀರ್ಘಕಾಲದ ಸಮಸ್ಯೆ ಪರಿಹಾರ, ಶತ್ರುಭಯಕಲಹಾದಿಗಳಿಂದ ಮುಕ್ತಿ, ಕಾರ್ಯಜಯ, ಗೃಹಸೌಕರ್ಯವೃದ್ಧಿ, ಬಂಧುಸಹಕಾರ, ಭೂಧನಸುವರ್ಣಾದಿ ಪ್ರಾಪ್ತಿ ಇತ್ಯಾದಿಗಳು  ವರ್ಷಾಂತ್ಯದವರೆಗೂ ಅನುಭವಕ್ಕೆ ಬರುವವು.

ತುಲಾರಾಶಿ :- ಮೊದಲ ಒಂದೂವರೆ ತಿಂಗಳ ಹೊರತು ಉಳಿದಂತೆ ಸಾಕಷ್ಟು ದೈವಬಲವಿದೆ. ಪ್ರಾರಂಭದಲ್ಲಿ ಮೇ 14ರ ವರೆಗೆ ಅಷ್ಟಮದ ಗುರು ಆನಂತರ ಪಂಚಮದ ಶನಿಯಿಂದ ಆರೋಗ್ಯದಲ್ಲಿ ಏರುಪೇರು, ವೃತ್ತಿಕ್ಷೇತ್ರದಲ್ಲಿ, ಉದ್ಯೋಗ-ವಹಾರಗಳಲ್ಲಿ ಸೋಲು, ಅನೇಕ ರೀತಿಯ ಚಿಂತೆ ಕಾಡಬಹುದು. ಮಕ್ಕಳ ಅಭಿವೃದ್ಧಿ ಕುಂಠಿತವಾದೀತು. ಮುಂದೆ ಭಾಗ್ಯದ ಗುರು ಹಾಗೂ ಷಷ್ಯದ ಶನಿ ಶುಭಫಲದಾಯಕರು. ಮನೋನಿಶ್ಚಿತ ಕಾರ್ಯಗಳು ಆಡಚಣೆಯಿಲ್ಲದೆ ನಡೆಯುವುದು. ವಿವಾಹಾದಿ ಶುಭ ಸಮಾರಂಭಗಳು, ಉದ್ಯೋಗ ವ್ಯವಹಾರದಲ್ಲಿ ಅನುಕೂಲ ಉಂಟಾಗುವುದು. ಆರ್ಥಿಕವಾಗಿ ಉತ್ತಮ ಅಭಿವೃದ್ಧಿಯಿದೆ. ಮನೆಯಲ್ಲಿ ಶಾಂತಿ, ಸುಖಸಂತೋಷ, ಗೌರವ ಲಭಿಸುವುದು. ಸಾರ್ವಜನಿಕ ರಂಗದಲ್ಲಿಯೂ ಗುರುತಿಸಲ್ಪಡುವಿರಿ. ನಮ್ಮಲ್ಲಿ ಆಂತರಿಕವಾದ ಧೈರ್ಯ-ಪ್ರಚೋದನೆಗಳು ಉತ್ಪನ್ನವಾಗುವುದು. ವರ್ಷಮಧ್ಯದಲ್ಲಿ ಮಕ್ಕಳ ವಿದ್ಯಾಭ್ಯಾಸದಲ್ಲಿ ವಿಶೇಷ ಪ್ರಯತ್ನ ಅಗತ್ಯ. ಕೆಲಸ ಕಾರ್ಯಗಳಲ್ಲಿ ವಿವಿಧ ರೀತಿಯ ಆಡಚಣೆ ಎದುರಾಗಿ ನಿರೀಕ್ಷಿತ ಫಲಸಿಗದು. ಕೆಲವೊಮ್ಮೆ ಭುಜದ ಹಾಗೂ ಉದರದ ತೊಂದರೆಯೂ ನಮಗೆ ಉಂಟಾಗಬಹುದು. ವಿಷ್ಣುಸೇವೆ. ಸುಬ್ರಹ್ಮಣ್ಯಸೇವೆ ಯಥಾಶಕ್ತಿ ನಡೆಸುವುದರಿಂದ ಶುಭ.
ಪ್ರಾರಂಭದಲ್ಲಿ ಜುಲಾಯಿ 16ರ ವರೆಗೆ ಮೊದಲು ಉತ್ತಮ ಆರೋಗ್ಯ, ಗೃಹಸೌಕರ್ಯ ಇತ್ಯಾದಿ ಉತ್ತಮ ಫಲಗಳಿದ್ದು ಆನಂತರ ದೇಹಾರೋಗ್ಯದಲ್ಲಿ ಏರುಪೇರು, ಕೌಟುಂಬಿಕ ಭಿನ್ನಾಭಿಪ್ರಾಯ-ವಿರಸ, ಸ್ವಜನಕಲಹ, ಮಿತಿಮೀರಿದ ಖರ್ಚುವೆಚ್ಚಗಳು, ಅಪಘಾತಭಯ, ಸ್ವಜನವಿಯೋಗ, ಕಾರ್ಯವಿಘ್ನ, ಇತ್ಯಾದಿ ಎದುರಾದಾವು. ಮುಂದೆ ಸಪ್ಟೆಂಬರ 16ರ ವರೆಗೆ ಕಾರ್ಯಜಯ, ಸ್ಥಾನಮಾನಾದ್ಯುತ್ಕರ್ಷೆ, ಧನಾಭಿವೃದ್ಧಿ, ಅಧಿಕಾರಿವರ್ಗದಿಂದ ಪ್ರಯೋಜನ ಇತ್ಯಾದಿ ಪ್ರಾಪ್ತವಾಗುವದು. ಆದರೆ ಧನವ್ಯಯ, ವಾಹನ, ಲೋಹ, ಶಸ್ತ್ರಗಳಲ್ಲಿ ಎಚ್ಚರಿಕೆ ವಹಿಸಬೇಕು. ಶಾರೀರಿಕವಾಗಿಯೂ ಬಳಲುವಿರಿ. ಉಷ್ಣಪ್ರಕೋಪ, ನೇತ್ರಬಾಧೆ, ಇತ್ಯಾದಿ ಸಂಭವ, ಮುಂದೆ ದಶಂಬರ 7ರ ವರೆಗೆ ಉದ್ಯೋಗದಲ್ಲಿಯೂ ಗೃಹಕೃತ್ಯಗಳಲ್ಲಿಯೂ ತೊಂದರೆ, ಕಾರ್ಯವೈಫಲ್ಯ, ಬಂಧುವಿರೋಧ, ದುಃಖ, ಜ್ವರರೋಗಾದಿಗಳು, ಧನಹಾನಿ- ಆರ್ಥಿಕ ಅಡಚಣೆ, ವೃತ್ತಿ-ವಾಸಸ್ಥಳದಲ್ಲಿ ಬದಲಾವಣೆ, ಇತ್ಯಾದಿ ಎದುರಾಗುವವು, ಔದ್ಯೋಗಿಕ-ಆರ್ಥಿಕ ಅಭಿವೃದ್ಧಿ, ಗೃಹಧನಾದಿಲಾಭ, ಆರೋಗ್ಯ ಸುಧಾರಿಸುವುದು. ವ್ಯವಹಾರಗಳು ಉತ್ತಮಗೊಳ್ಳುವುದು. ಇತರರಿಂದ ಸಹಕಾರವನ್ನು ಪಡೆಯುವಿರಿ. ಮುಂದೆ ವರ್ಷಾಂತ್ಯದವರೆಗೂ ಗೃಹವಾಹನಾದಿಸುಖಗಳಲ್ಲಿ ಕೊರತೆ, ಪ್ರಾಣಿ ವರ್ಗದಿಂದ ತೊಂದರೆ, ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ, ಮಕ್ಕಳಿಂದ ಮತ್ತು ಅಧೀನ ನೌಕರರಿಂದ ಆಡಚಣೆಗಳು, ಶತ್ರುಪೀಡೆ, ಆನಾರೋಗ್ಯ, ರಕ್ತದೋಷ, ಸ್ಥಾನಭ್ರಂಶ, ಕಲಹ, ಅಪಕೀರ್ತಿ ಇತ್ಯಾದಿ ಪ್ರತಿಕೂಲಫಲಗಳೇ ಅನುಭವಕ್ಕೆ ಬರುವವು.

ವೃಶ್ಚಿಕರಾಶಿ :-ಗುರುವು ಮೇ 14ರ ವರೆಗೆ ಸಪ್ತಮದಲ್ಲಿ, ಒಕ್ಟೋಬರ 18 ರಿಂದ ದಶಂಬರ 5ರ ವರೆಗೆ ಭಾಗ್ಯದಲ್ಲಿ ಶುಭನು. ಈ ಅವಧಿಯಲ್ಲಿ ದೈವಬಲವಿದೆ. ಕೆಲಸಗಳು ಅಡಚಣೆಗಳಿಲ್ಲದೆ ನಡೆಯುವುದು. ವಿವಾಹಾದಿ ಶುಭಕಾರ್ಯಗಳು ನಡೆಯುವುದು. . ಉದ್ಯೋಗ ವ್ಯವಹಾರದಲ್ಲಿ ಅನುಕೂಲ ಉಂಟಾಗುವುದು. ಆರ್ಥಿಕ ಅಭಿವೃದ್ಧಿಯಿದೆ. ಸಂತಾನಲಾಭ, ಧನಲಾಭ, ಉತ್ತಮ ಬುದ್ಧಿಶಕ್ತಿ ಇತ್ಯಾದಿ ಉಂಟಾಗುವುದು. ಗುರು, ಪಂಚಮದ ಉಳಿದಂತೆ ಜನ್ಮರಾಶಿಯಿಂದ ಅಷ್ಟಮದ ಶನಿ, ಚತುರ್ಥದ ರಾಹು ಅಶುಭಪ್ರದರು. ದೈವಬಲವಿಲ್ಲ. ಆರೋಗ್ಯದಲ್ಲಿ ಏರುಪೇರು, ವೃತ್ತಿಕ್ಷೇತ್ರದಲ್ಲಿ, ಉದ್ಯೋಗ-ವ್ವಹಾರಗಳಲ್ಲಿ ಹಿನ್ನಡೆ, ಕಾರ್ಯವಿಘ್ನ, ಆರ್ಥಿಕ ಸಂಕಷ್ಟ ಉಂಟಾಗಬಹುದು. ಚಿಂತೆ, ಮಾನಸಿಕ ಒತ್ತಡ ಕಾಡಬಹುದು, ಪಂಚಮದ ಶನಿಯಿಂದ 'ಸುತಧನಪರಿಹೀನ: ಪಂಚಮಸ್ಯೆ ಪ್ರಚುರಕಲಹಯುಕ್ತ:' ಎಂಬಂತೆ ಮಕ್ಕಳ ವಿಚಾರವಾಗಿಯೂ ಮನಸ್ಸಿಗೆ ನೆಮ್ಮದಿ ಕಡಿಮೆಯಾಗಿ ವ್ಯಾಕುಲತೆ ಹೆಚ್ಚಬಹುದು. ಮನೆಯವರೊಂದಿಗೆ ಭಿನ್ನಾಭಿಪ್ರಾಯಗಳು ಮೂಡುವುದು. ತಾಯಿ-ತಂದೆ ಹಾಗೂ ಹಿರಿಯರ ಕುರಿತು ಜಾಗ್ರತೆ-ಶ್ರದ್ಧೆ ವಹಿಸಬೇಕು. ರಾತ್ರಿ ಸಂಚಾರದಲ್ಲಿ ಜಾಗ್ರತೆ ವಹಿಸಿ. ಶನಿಶಾಂತಿ, ರುದ್ರಾಭಿಷೇಕ, ವಿಷ್ಣುಸೇವೆ ಇತ್ಯಾದಿಗಳಿಂದ ಶುಭ,
ಪ್ರಾರಂಭದಲ್ಲಿ ಮೇ 14ರ ವರೆಗೆ ಶಾರೀರಿಕ ಆರೋಗ್ಯವೃದ್ಧಿ, ಗೃಹಸೌಕರ್ಯ ಪ್ರಾಪ್ತಿ, ಬಂಧುಗಳಿಂದ ಸಹಕಾರ, ಆತ್ಮಸ್ಥೆರ್ಯ ವೃದ್ಧಿಸುವುದು. ಮುಂದೆ ಅಗೋಸ್ತು 16ರ ವರೆಗೆ ಪಿತ್ತೋಷ್ಣಜಾಡ್ಯ, ಉದರವ್ಯಾಧಿ, ಉಸಿರಾಟದ ತೊಂದರೆಗಳು, ದಾಂಪತ್ಯದಲ್ಲಿ ವಿರಸ, ಕಲಹ, ಹಣದ ವ್ಯವಹಾರದಲ್ಲಿ ವಿರೋಧ ಫಲ, ಮನೋಮಾಂದ್ಯತೆ ಇತ್ಯಾದಿ ಎದುರಾಗುವುದು. ಈ ಮಧ್ಯೆ ಜೂನ್ 6ರ ಇತರರಿಂದ ಆದರಣೆ ಗೌರವ, ಮಾನ್ಯತೆ, ಹೆಚ್ಚು ಪ್ರೋತ್ಸಾಹಗಳು ಲಭಿಸುವುದು. ಆರೋಗ್ಯದ ಸಮಸ್ಯೆ ಲೆಕ್ಕಿಸದೆ ಕೆಲಸ ಕಾರ್ಯಗಳಲ್ಲಿ ಹೆಚ್ಚು ಉತ್ತೇಜನದಿಂದ ಇರುವಿರಿ. ಗೃಹಸುಖ, ಅಭಿವೃದ್ಧಿ ಇರುವುದು. ವಿವಿಧ ಮೂಲಗಳಿಂದ ಧನಪ್ರಾಪ್ತಿ, ಕುಟುಂಬವರ್ಗದಿಂದ ಸ್ಫೂರ್ತಿ, ಸ್ಥಾನಮಾನಾದ್ಯುತ್ಕರ್ಷೆ, ಭೂಸಂಬಂಧ ವ್ಯವಹಾರಗಳು ಸುಲಭವಾಗಿ ನಡೆಯಬಹುದು. ಉತ್ತಮ ಸ್ಥಾನಮಾನಾದಿಗಳು ದೊರಕುವುದು. ಆರ್ಥಿಕ ಉತ್ಕರ್ಷ, ಸರ್ವಕಾರ್ಯ ಸಫಲತೆ, ಸ್ಥಾನಮಾನಾದಿ ಲಾಭ, ಇತ್ಯಾದಿ ಶುಭಫಲಗಳು ಒಕ್ಟೋಬರ್ 17ರ ವರೆಗೂ ಇರುವುದು. ಕಾರ್ಯಗಳಲ್ಲಿ ವೈಫಲ್ಯ, ಬಂಧುವಿರೋಧ, ಆರ್ಥಿಕ ವಿರುಪೇರು, ದುಃಖ, ಜ್ವರರೋಗಾದಿಗಳು, ಉದ್ಯೋಗದಲ್ಲಿ ಅಡಚಣೆ ಇತ್ಯಾದಿ ಎದುರಾಗುವವು. ಮುಂದೆ  ಸ್ಥಾನಪ್ರಾಪ್ತಿ, ಗೃಹಲಾಭ, ಧನಲಾಭ, ಶತ್ರುನಾಶ ಇತ್ಯಾದಿ ಶುಭಫಲಗಳೊಂದಿಗೆ ಜಠರರೋಗ, ರಕ್ತದೋಷ, ಬಲವಂತವಾಗಿ ಕೆಟ್ಟಜನರ ಸಂಸರ್ಗದಿಂದ ಆಶುಭಫಲವಿದೆ. ಮುಂದೆ ವರ್ಷಾಂತ್ಯದವರೆಗೂ ಕಾರ್ಯಗಳಿಗೆ ವಿಘ್ನ ಮಕ್ಕಳ ವಿಚಾರವಾಗಿ ಚಿಂತೆ, ಮನಸ್ಸಿನ ನೆಮ್ಮದಿ ಕಡಿಮೆಯಾಗುವುದು.

ಧನುರಾಶಿ :-ಗುರುವು ವರ್ಷಾರಂಭದ ಒಂದೂವರೆ ತಿಂಗಳು ಷಷ್ಯದಲ್ಲಿ, ವರ್ಷಮಧ್ಯದ ಒಂದೂವರೆ ತಿಂಗಳು ಅಷ್ಟಮದಲ್ಲಿ ಅಶುಭನು. ಉಳಿದಂತೆ ಜನ್ಮರಾಶಿಯಿಂದ ಸಪ್ತಮದಲ್ಲಿ ಸಂಚರಿಸುವ ಗುರುವು ದೈವಬಲ ಒದಗಿಸುವನು. ತೃತೀಯದ ರಾಹುವೂ ಶುಭನು ಭಾಗ್ಯ ಚೆನ್ನಾಗಿರುವಂತೆ ಆನಿಸುವುದು. ವಿವಾಹ ಶುಭಶೋಧನಾದಿ ಕೌಟುಂಬಿಕ ಕಾರ್ಯಗಳು ನಡೆಯಲು ಸಕಾಲ. ಭೂವಾಹನಾದಿ ಸುಖಗಳು ಉಂಟಾಗುವುದು. ಪತ್ನಿಗೂ ಅನುಕೂಲಕಾಲ. ಉತ್ತಮ ಸ್ಥಾನಮಾನ, ದಾಂಪತ್ಯದಲ್ಲಿ ಸುಖಸಂತೋಷಗಳು, ಸಂತಾನಲಾಭ, ಧನಲಾಭ, ಶುಭಯಾತ್ರೆ, ಮನೆಯವರು ಹಾಗೂ ಬಂಧುಗಳೊಂದಿಗೆ ಆತ್ಮೀಯತೆ ಬಲಗೊಳ್ಳುವುದು. ಧೈರ್ಯ-ಉತ್ಸಾಹದಿಂದಿರುವಿರಿ, ಷಷ್ಟ-ಅಷ್ಟಮದ ಗುರು ಹಂಗರಾವರ್ಷಪೂರ್ತಿ ಸುಖಸ್ಥಾನದ ಶನಿಯಿಂದ ಸ್ತ್ರೀಸುಖಗೃಹಸುಖಾದಿಗಳಿಂದ ಆರ್ಥಿಕ ಸರಕಾರಿ ವಾಹನಾದಿಗಳಿಂದ ತೊಂದರೆ, ಮಾನಸಿಕ ಅಶಾಂತಿ, ಶತುಪೀಡೆ, ಅನೇಕ ರೀತಿಯ ಚಿಂತೆ, ಮಾನಸಿಕ ಒತತ್ವ ಕಾಡಬಹುದು ಹಿರಿಯರೊಂದಿಗಿನ ಆತ್ಮೀಯತೆ ಕೆಡಬಹುದು. ಅಶ್ವತ್ಥಸೇವೆ ರುದ್ರಾಭಿಷೇಕ, ಗಣಪತಿಸೇವೆ, ವಿಷ್ಣುಸೇವೆ ಇತ್ಯಾದಿ ಯಥಾಶಕ್ತಿ ನಡೆಸುವುದರಿಂದ ಶುಭ.
ಪ್ರಾರಂಭದಲ್ಲಿ ಮೇ 14ರ ವರೆಗೆ ಗೃಹಕೃತ್ಯಗಳಿಗೆ ಖರ್ಚು, ಮಕ್ಕಳ ಬಗ್ಗೆ ಸಮಸ್ಯೆ, ನೌಕರರಿಂದ ಅಡಚಣೆ, ಅನಾರೋಗ್ಯ, ಕಾರ್ಯವಿಷ್ಯ, ಶತ್ರುಪೀಡೆ ಇತ್ಯಾದೆ ಎದುರಾಗುವವು. ಆದರೂ ವಿವಿಧ ಮೂಲಗಳಿಂದ ಧನಪ್ರಾಪ್ತಿಯಿದೆ. ಮುಂದೆ ಜೂನ್ 15 ರ ವರೆಗೆ ಬಂಧುಸಹಕಾರ. ಗೃಹಸೌಕರ್ಯವೃದ್ಧಿ, ಆತ್ಮಸ್ಥೆರ್ಯವೃದ್ಧಿ, ಮುಂದೆ ಸಪ್ಟೆಂಬರ 16 ರ ವರೆಗೆ ಕಾರ್ಯಗಳಲ್ಲಿಯೂ ವಿಘ್ನಗಳು, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಆತ್ಮಸ್ಥೆರ್ಯ ಕುಗ್ಗುವುದು. ಅಸಹನೆ ಹೆಚ್ಚುವುದು. ಈ ಮಧ್ಯ ಜುಲಾಯಿ 29 ರಿಂದ ಕುಜನು ಅನಕೂಲನಿದ್ದು ಅಭಿವೃದ್ಧಿ ಇರುವುದು, ಇತರರಿಂದ ಆದರಣೆ-ಗೌರವ, ಪ್ರೋತ್ಸಾಹಗಳು ಲಭಿಸುವುದು. ಭೂಸಂಬಂಧ ವ್ಯವಹಾರಗಳಲ್ಲಿ ಯಶಸ್ಸು, ಆರೋಗ್ಯಸುಧಾರಣೆ, ಗೃಹಸೌಕರ್ಯವೃದ್ಧಿ, ಮುಂದೆ ನವಂಬರ 16ರ ವರೆಗೆ ಶತ್ರುಗಳ ಉಪಟಳ ಕಡಿಮೆಯಾಗುವುದು. ಆಪೇಕ್ಷಿತ ಜನಸಹಾಯ, ಕುಟುಂಬವರ್ಗದಿಂದ ಸ್ಫೂರ್ತಿ ಒದಗುವುದು. ಆತ್ಮಗೌರವವೃದ್ಧಿ, ಕಾರ್ಯಸಿದ್ಧಿ, ಆರ್ಥಿಕ ಅಭಿವೃದ್ಧಿ, ಸ್ಥಾನಮಾನಾದ್ಯುತ್ಕರ್ಷ ಪ್ರಾಪ್ತವಾಗುವವು. ಸ್ಥಿರ ಸ್ಥಿರಾಸ್ತಿ ವ್ಯವಹಾರದಲ್ಲಿ ಧನಹಾನಿ ಸಹಾನಿ ಎದುರಾಗುವದು,ಉದ್ಯೋಗ, ಗೃಹಕೃತ್ಯಗಳಲ್ಲಿ ತೊಂದರೆ, ದುಷ್ಟವೃತ್ತಿ, ಕಾರ್ಯವೈಫಲ್ಯ, ಬಂಧುವಿರೋಧ, ದುಃಖ, ಜ್ವರರೋಗಾದಿಗಳು,ಧನಹಾನಿ, ಸಂಚಾರದಲ್ಲಿ ಸುಖ, ಬುದ್ದಿಯ ಅಸ್ಥಿರತೆ ಇತ್ಯಾದಿ ಎದುರಾಗುವವು. ಮುಂದೆ ವರ್ಷಾಂತ್ಯದವರೆಗೂ ಶುಭಫಲಗಳಿದ್ದು ಆರೋಗ್ಯ ಸುಧಾರಿಸುವದು. ಗೃಹಸೌಕರ್ಯವೃದ್ಧಿ, ಆರೋಗ್ಯವೃದ್ಧಿ,ಆರ್ಥಿಕ ಅಭಿವೃದ್ಧಿ, ಕೌಟುಂಬಿಕ ಪ್ರಗತಿ, ಸಹೋದರರು ಅಸಮಾಧಾನಗೊಳ್ಳಬಹುದು.

 ಮಕರರಾಶಿ :- ಗುರುವು ಮೇ 14 ರವರೆಗೆ ಪಂಚಮದಲ್ಲೂ ಒಕ್ಟೋಬರ 18 ರಿಂದ ಒಂದೂವರೆ ತಿಂಗಳು ಸಪ್ತಮದಲ್ಲೂ ಶುಭನು. ವರ್ಷಪೂರ್ತಿ ತೃತೀಯದ ಶನಿಯೂ ಶುಭನು, ಗೃಹದಲ್ಲಿ ಶುಭಕಾರ್ಯ ನಡೆಯುವುದು. ಸಾಂಸಾರಿಕ ಕೌಟುಂಬಿಕ ಅಭಿವೃದ್ಧಿಯಿದೆ. ನೂತನ ವೃತ್ತಿ
ಕೈಗೊಳ್ಳಬಹುದು, ಅತ್ಮಸ್ಥೆರ್ಯ ಹೆಚ್ಚುವುದು, ಭೂವಾಹನಾದಿ ಸುಖ, ಸಂತಾನಸುಖ, ಆರ್ಥಿಕ ಅಭಿವೃದ್ಧಿ ಕಾಣಬಹುದು. ಶಾರೀರಿಕ ಆರೋಗ್ಯ, ವಿಶೇಷ ವ್ಯಾವಹಾರಿಕ ಸೌಲಭ್ಯ ಹೊಂದುವಿರಿ. ಸಹೋದರ ಸಮಾನರಿಂದ ಅನುಕೂಲವಿದೆ, ಆದರೂ ಒಡಹುಟ್ಟಿದವರಿಗೆ ಕೆಲವೊಂದು ತೊಂದರೆಗಳೂ ಉಂಟಾದೀತು. ವರ್ಷದ ಬಹುತೇಕ ಜನ್ಮರಾಶಿಯಿಂದ ಸಂಚರಿಸುವ ಗುರು, ಕೆಲವೊಂದು ಆನರೀಕ್ಷಿತ ಆಣುಭಫಲಗಳಿಗೆ ಕಾರಣತಿಯವರುಗಳ ಆಡುಕುವುದು ಜೀವನದ ಸಾಧಿಕಕರ್ಯಗಳೂ ಬೆಂದಿಗಿಂತ ಹೆಚ್ಚಿನ ವವ್ಯಗಳು ಕಡುವುದಾದರೂ ದೇವರ ಉಂಟಾಗಬಹುದು. ಮಾರೊಗ್ಯ ಕಾಡಬಹದ್ಯೋಗಸರೊಂದಿಗೆ ಮನ ಅಗತ್ಯ ಮನಸ್ತಾಪ ವ್ಯವಹಾರಗಳಲ್ಲಿ ವಿಘ್ನ, ಕೌಟುಂಬಿಕ ಸಾಮರಸ್ಯಕ್ಕೆ ಹಾನೆ, ಸ್ತ್ರೀಸುಖಗೃಹಸುಖಾದಿ ಹಾನೆ, ಶತ್ರುಪೀಡೆ ಉಂಟಾದೀತು. ಗಣಪತಿಸೇವೆ, ವಿಷ್ಣುಕ್ಷೇತ್ರದಲ್ಲಿ ಸುಬ್ರಹ್ಮಣ್ಯಕ್ಷೇತ್ರದಲ್ಲಿ ಯಥಾಶಕ್ತಿ ಸೇವೆ ನಡೆಸುವುದರಿಂದ ಶುಭ.
ಪ್ರಾರಂಭದಲ್ಲಿ ಸಹೋದರರ ಅಸಮಾಧಾನ, ಔದ್ಯೋಗಿಕ-ಆರ್ಥಿಕ ಅಭಿವೃದ್ಧಿ, ಸ್ಥಾನಪ್ರಾಪ್ತಿ, ಗೃಹಲಾಭ, ಧನಲಾಭ ಇತ್ಯಾದಿಗಳಿದ್ದು, ಮುಂದೆ ಜೂನ್ 15ರ ವರೆಗೆ ಗೃಹ, ವಾಹನಾದಿ ನೌಕರರಿಂದ ಆಡಚಣೆಗಳು, ಶತ್ರುಗಳಿಂದ ಪೀಡೆ, ಮಕ್ಕಳ ಬಗ್ಗೆ ಸಮಸ್ಯೆ, ಆರ್ಥಿಕ ಆಡಚಣೆ, ಜನವಿರೋಧ, ಅಪಜಯ ಇತ್ಯಾದಿ ಎದುರಾಗುವವು. ಮುಂದೆ ಜುಲಾಯಿ 16ರ ವರೆಗೆ ಆರೋಗ್ಯ ಸುಧಾರಣೆ, ಗೃಹಸೌಕರ್ಯಪ್ರಾಪ್ತಿ, ಬಂಧುಸಹಕಾರ, ಆತ್ಮಸ್ಥೆರ್ಯವೃದ್ಧಿ ಇತ್ಯಾದಿ ಪ್ರಾಪ್ತವಾಗುವವು. ಮುಂದೆ ಒಕ್ಟೋಬರ 17ರ ವರೆಗೆ ಮಿಶ್ರಫಲಗಳಿವೆ. ಆಹಾರ, ನೀರಿನ ವ್ಯತ್ಯಾಸದಿಂದ ದೇಹಾರೋಗ್ಯದಲ್ಲಿ ಏರುಪೇರು, ಬಂಧುವಿಯೋಗ, ಸತ್ಪವೃತ್ತಿಗೆ ಎಘ್ನಗಳು, ಅಸಹನೆ, ಆರ್ಥಿಕ ಆಡಚಣೆ, ಆದರೂ ವಿವಿಧಮೂಲಗಳಿಂದ ಧನಪ್ರಾಪ್ತಿ, ಗೃಹಸುಖ, ಸ್ಥಿರಾಸ್ತಿ ವ್ಯವಹಾರದಲ್ಲಿ ಜಯಲಾಭಾದಿಗಳು, ಉತ್ತಮ ಸ್ಥಾನಮಾನಾದಿಗಳು ಪ್ರಾಪ್ತವಾಗುವವು. ಮುಂದೆ ದಶಂಬರ 16ರ ವರೆಗೆ ಮೇಲಿನ ಶುಭಫಲಗಳೇ ಮುಂದುವರಿದು ವ್ಯವಹಾರದಲ್ಲಿ ಮೊದಲಿನ ತೊಂದರೆಗಳು ಕಡಿಮೆಯಾಗುವುದು. ಆದರೂ ಖರ್ಚುವೆಚ್ಚಗಳು ಅಧಿಕಗೊಳ್ಳುವವು. ಮುಂದೆ ವರ್ಷಾಂತ್ಯದವರೆಗೂ ಕಾರ್ಯವೈಫಲ್ಯ ಬಂಧುವಿರೋಧ, ದುಃಖ, ಜ್ವರರೋಗಾದಿಗಳು, ಅಧಿಕಾರಿಜನರ ಆಗ್ರಹ, ಧನಹಾನಿ, ಕಲಹ-ವಾದವಿವಾದಗಳು, ಬುದ್ಧಿಯ ಅಸ್ಥಿರತೆ, ಗೃಹಕೃತ್ಯಗಳಿಗೆ ಆರ್ಥಿಕ ಅಡಚಣೆಗಳೆದುರಾಗುವವು, ವೃತ್ತಿಯಲ್ಲಿ ಅಥವಾ ವಾಸಸ್ಥಳದಲ್ಲಿ ಬದಲಾವಣೆಯಾದೀತು.

 ಕುಂಭರಾಶಿ :- ಗುರುವು ಮೇ 14ರ ವರೆಗೆ ಚತುರ್ಥದಲ್ಲೂ ಒಕ್ಟೋಬರ 18 ರಿಂದ ಒಂದೂವರೆ ತಿಂಗಳು ಷಷ್ಟದಲ್ಲೂ ಅಶುಭನು, ವರ್ಷಪೂರ್ತಿ ಧನಸ್ಥಾನದಲ್ಲಿ ಸಾರ್ಧಸಪ್ತಚಾರದ ಶನಿ,ಜನ್ಮ-ಸಪ್ತಮಗಳ ರಾಜುಕೇತುಗಳು ಎಲ್ಲರೂ ಪ್ರತಿಕೂಲಫಲಗಳನ್ನೇ ಸೂಚಿಸುವರು. ಆರೋಗ್ಯದ ಬಗ್ಗೆ ಜಾಗ್ರತೆ ಬೇಕು. ಅನ್ಯರೊಂದಿಗೆ ಮನಸ್ತಾಪ ಉಂಟಾಗಬಹುದು. ಪ್ರೀತಿಪಾತ್ರರು ಅಥವಾ ಸಮೀಪದ ಬಂಧುವೊಬ್ಬರು ತೊಂದರೆಗೆ ಸಿಲುಕುವರು, ಮಾನಸಿಕ ಅಶಾಂತಿ, ಆರ್ಥಿಕ ಅಡಚಣೆ ಎದುರಾದೀತು, ಸ್ಫೂರ್ತಿ ಕಳಕೊಂಡು ಕೆಲಸದಲ್ಲಿ ಅನಾಸಕ್ತಿ ತೋರುವಿರಿ, ಮನೆಯವರೊಂದಿಗೆ ಹೊಂದಾಣಿಕೆಯು ಕಡಿಮೆಯಾದಂತೆ ತೋರುವುದು, ಪತನ-ಅಪಘಾತ, ಅಂಗಭಂಗ, ಮೋಸ-ವಂಚನೆ, ಕಾರ್ಯವಿಘ್ನ, ಕಳ್ಳತನ, ಕಲಹ ಇತ್ಯಾದಿ ಅನುಭವವಾಗುವುದು. ಆದರೂ ವರ್ಷದ ಬಹುಪಾಲು ಜನ್ಮದಿಂದ ಐದರಲ್ಲಿ ಸಂಚರಿಸುವ ಕುರುವು ದೈವಬಲ ಒದಗಿಸುವನು. ಆರ್ಥಿಕ-ಕೌಟುಂಬಿಕ ಅಭಿವೃದ್ಧಿಯಿದೆ. ನೂತನ ವೃತ್ತಿ ಕೈಗೊಳ್ಳಬಹುದು, ಹೊಸ ಪರಿಸರಕ್ಕೆ ಹೋಗಬಹುದು, ಆತ್ಮಸ್ಥೆರ್ಯ ಹೆಚ್ಚುವುದು, ಮಕ್ಕಳ ಸಂಬಂಧ ಶುಭಫಲವಿದೆ. ನವಗ್ರಹಾರಾಧನೆ, ವಿಷ್ಣುಕ್ಷೇತ್ರದಲ್ಲಿ ಸೇವೆಗಳನ್ನು ಮಾಡಿಸುವುದರಿಂದ ಶುಭ,ಪ್ರಾರಂಭದಲ್ಲಿ ಜೂನ್ 6ರ ವರೆಗೆ ಮನೆಯಲ್ಲಿ ಕೆಲವು ಸೌಕರ್ಯಗಳನ್ನು ಹೊಂದುವಿರಿ. ಆರೋಗ್ಯ ಸುಧಾರಿಸುವುದು. ಔದ್ಯೋಗಿಕ-ಆರ್ಥಿಕ ಅಭಿವೃದ್ಧಿಯಿದೆ. ಶತ್ರುಭಯಕಲಹಾದಿಗಳಿಂದ ಮುಕ್ತಿ, ಸಾಂಸಾರಿಕವಾಗಿಯೂ ಉತ್ತಮ ಕೆಲಸಗಳಾಗಲಿವೆ. ಮುಂದೆ ಜುಲಾಯಿ 16ರ ವರೆಗೆ ಕಷ್ಟನಷ್ಟಗಳು ಅಧಿಕ. ಗೃಹಕೃತ್ಯಗಳಿಗೆ ಆರ್ಥಿಕ ಅಡಚಣೆ, ಕೌಟುಂಬಿಕ ಭಿನ್ನಾಭಿಪ್ರಾಯ, ಮಕ್ಕಳ ವಿಷಯವಾಗಿ ಸಮಸ್ಯೆ, ಶಾರೀರಿಕ ಅಪಾಯಗಳು, ವೃತ್ತಿ-ಉದ್ಯೋಗದಲ್ಲಿ ಅಡಚಣೆ ಎದುರಾಗುವುದು. ಮುಂದೆ ಆಗೋಸ್ತು 16ರ ವರೆಗೆ ಆರೋಗ್ಯದಲ್ಲಿ ಸುಧಾರಣೆ, ಗೃಹಸೌಕರ್ಯ ಪ್ರಾಪ್ತಿ, ಬಂಧುಸಹಕಾರ, ಆತ್ಮಸ್ಥೆರ್ಯವೃದ್ಧಿ, ಶತ್ರುಹಾನಿ ಇತ್ಯಾದಿಗಳುಂಟಾಗುವವು. ಮುಂದೆ ಒಕ್ಟೋಬರ 27ರ ವರೆಗೆ ಮಾರ್ಗಸಂಚಾರ, ಉದರರೋಗ, ಉಸಿರಾಟದ ತೊಂದರೆಗಳು, ದಾಂಪತ್ಯದಲ್ಲಿ ವಿರಸ, ಹಣದ ವ್ಯವಹಾರದಲ್ಲಿ ವಿರೋಧ ಫಲ, ಮನೋಮಾಂದ್ಯತೆ, ಅಪಘಾತಭಯ, ಜನವಿರೋಧ, ಕಾರ್ಯವೈಫಲ್ಯ ಇತ್ಯಾದಿ ಎದುರಾಗುವವು. ಮುಂದೆ ಸಕಲ ಕಾರ್ಯಸಿದ್ದಿ, ಸ್ಥಾನಮಾನಾದಿ ಪ್ರಾಪ್ತಿ, ನೂತನ ಯೋಜನೆಗಳ ಪ್ರಾರಂಭಕ್ಕೆ ಕುಟುಂಬವರ್ಗದಿಂದ ಅಭಿವೃದ್ಧಿ ಇತ್ಯಾದಿಗಳಿರುತ್ತವೆ. ಆದರೂ ಅನೇಕ ವಿಧದ ಖರ್ಚುವೆಚ್ಚಗಳಿರುತ್ತವೆ. ಆರೋಗ್ಯ ಹದಗೆಡಬಹುದು. ಮುಂದೆ ವರ್ಷಾಂತ್ಯದವರೆಗೂ ಕಷ್ಟನಷ್ಟಗಳು ಅಧಿಕ ಎಲ್ಲ ವಿಚಾರಗಳಲ್ಲೂ ಜಾಗ್ರತೆವಹಿಸಬೇಕು. ಉದ್ಯೋಗ- ಗೃಹಕೃತ್ಯಗಳಲ್ಲಿ ತೊಂದರೆಗಳೆದುರಾಗುವವು. ದೂರಪ್ರಯಾಣದ ಸಾಧ್ಯತೆಯಿದೆ. ಸ್ವಜನವಿರಹ, ರಕ್ತವ್ಯಾಧಿ, ಉಷ್ಣಪ್ರಕೋಪ, ದೈಹಿಕ ಆಘಾತ, ಶತ್ರುಪೀಡೆ, ರಾಜೋಪದ್ರವ ಇತ್ಯಾದಿ ಎದುರಾಗುವವು.

ಮೀನರಾಶಿ :-ಈ ವರ್ಷ ದೈವಬಲವಿಲ್ಲ. ತೃತೀಯ-ಚತುರ್ಥದ ಗುರು, ಜನ್ಮರಾಶಿಯಲ್ಲಿ ಸಾರ್ಧಸಪ್ತಚಾರದ ಶನಿ, ವ್ಯಯಸ್ಥಾನದ ರಾಜು, ಎಲ್ಲರೂ ಪ್ರತಿಕೂಲರು, ವರ್ಷಮಧ್ಯದ ಒಂದೂವರೆ ತಿಂಗಳು ಮಾತ್ರ ಪಂಚಮಸ್ಯೆ ಗುರುವು ಶುಭಫಲದಾಯಕನು, ವೃತ್ತಿ ಉದ್ಯೋಗಗಳಲ್ಲಿ ಸ್ಪರ್ಧೆ-ಬದಲಾವಣೆ, ಆರ್ಥಿಕ ಅಡಚಣೆಗಳು, ವಾಸಸ್ಥಳ ಬದಲಾವಣೆ, ಕಾರ್ಯಗಳಿಗೆ ವಿಘ್ನಗಳೂ ತೊಂದರೆಗಳೂ ಎದುರಾಗುವವು. ಉದ್ಯೋಗಸಂಬಂಧ ಉಪಟಳ ಸಂಭವ. ಮನಸ್ಸಿನ ನೆಮ್ಮದಿ ಕ್ಷೀಣಿಸೀತು, ಬಂಧುವೊಬ್ಬರು ತೊಂದರೆಗೆ ಸಿಲುಕಬಹುದು. ಪ್ರತಿಕೂಲ ಬಹಳ ಕಷ್ಟ ಅನುಭವಿಸುವಿರಿ. ಸಂದರ್ಭಗಳನ್ನು ಳನ್ನು ಉತ್ತಮ ನಿಭಾಯಿಸುವಿರಿ. ಜೀವನದಲ್ಲಿ ವಿಶೇಷ ಅನುಭವವಾಗುವುದು, ದೀರ್ಘಕಾಲದ ಅಸೌಖ್ಯಗಳು ಉಂಟಾಗುವ ಸಾಧ್ಯತೆ ಮನೋಬಲ ಕಳಕೊಳ್ಳುವಿರಿ. ಮಾನುವ ಒತ್ತಡಕ್ಕೊಳಗಾಗುವಿರಿ. ಮೋಡಿ ಮಾತುಗಳಿಂದ ಮೋಸಹೋಗುವಿರಿ, ಬಿದ್ದು ಅಪಾಯವಾದೀತು. ಶಿಸ್ತು, ಸಂಯಮದಿಂದ ಇದ್ದಲ್ಲಿ ನಷ್ಟಕಷ್ಟಗಳು ಕಡಿಮೆ. ಆದರೂ ವರ್ಷಮಧ್ಯದಲ್ಲಿ ಸಾಂಸಾರಿಕ ಹಾಗೂ ಕೌಟುಂಬಿಕ ಅಭಿವೃದ್ಧಿಯಿದೆ. ನೂತನ ವೃತ್ತಿ, ಕೈಗೊಳ್ಳಬಹುದು, ಆರ್ಥಿಕವಾಗಿ ಅಭಿವೃದ್ಧಿ ಕಾಣಬಹುದು. ಆತ್ಮಸ್ಥೆರ್ಯ ಹೆಚ್ಚುವುದು. ಯಥಾಶಕ್ತಿ ನವಗ್ರಹಾರಾಧನೆ, ಶನಿಶಾಂತಿ, ವಿಷ್ಣುಸೇವೆ, ಸುಬ್ರಹ್ಮಣ್ಯಸೇವೆಗಳಿಂದ ಶುಭ.
ಪ್ರಾರಂಭದಲ್ಲಿ ಮೇ 14ರ ವರೆಗೆ ಲೋಹ-ಬೆಂಕಿಯಿಂದ ಅಪಾಯ, ಆರೋಗ್ಯಹಾನಿ, ಸ್ಥಳಬದಲಾವಣೆ, ಆರ್ಥಿಕ ಏರುಪೇರು, ಪ್ರಯಾಣದಲ್ಲಿ ಕಷ್ಟನಷ್ಟಗಳು, ಪಿತ್ತವರ್ಧಕ ತಿನಿಸುಗಳಿಂದ ಹಾನಿ, ಆರ್ಥಿಕ ಅಡಚಣೆ, ಕಲಹ ಇತ್ಯಾದಿ ಎದುರಾಗುವವು. ಮುಂದೆ ಜೂನ್ 15ರ ವರೆಗೆ ಮೇಲಿನ ಕೆಲವೊಂದು ಅಶುಭಪಲಗಳೊಂದಿಗೆ ಆರೋಗ್ಯ ಸುಧಾರಿಸುವುದು. ಶಾರೀರಿಕವಾಗಿ ಬಲಗೊಳ್ಳುವಿರಿ, ಗೃಹಸೌಕರ್ಯಗಳನ್ನು ಹೊಂದುವಿರಿ. ಔದ್ಯೋಗಿಕ-ಆರ್ಥಿಕ ಅಭಿವೃದ್ಧಿಯಿದೆ. ಮುಂದೆ ಅಗೋಸ್ತು 16ರ ವರೆಗೆ ಗೃಹಸುಖಹಾನಿ, ಮಕ್ಕಳ ವಿಷಯದಲ್ಲಿ ಸಮಸ್ಯೆ-ಚಿಂತೆ, ಶತ್ರುಬಾಧೆ, ಅನಾರೋಗ್ಯ ಇತ್ಯಾದಿ ಎದುರಾಗುವವು. ಇನ್ನೊಂದೆಡೆಯಿಂದ ಕೆಲವೊಂದು ಶುಭಫಲಗಳೂ ಅನುಭವಕ್ಕೆ ಬರುವವು. ಮುಂದೆ 16ರ ವರೆಗೆ ಗೃಹಸೌಕರ್ಯ ಪ್ರಾಪ್ತಿ, ಆತ್ಮಸ್ಥೆರ್ಯವೃದ್ಧಿ ಉಂಟಾಗುವದು,ಒಂದೆಡೆ ಸಾಂಸಾರಿಕಸುಖಕ್ಕೆ ಅಡಚಣೆ, ಆತ್ಮಸ್ಥೆರ್ಯಕ್ಕೆ ಹಾನಿ, ಕಾರ್ಯ ಹಾನ ಆರ್ಥಿಕ ಏರುಪೇರು, ಆರೋಗ್ಯದಲ್ಲಿ ಏರುಪೇರು ಇತ್ಯಾದಿಗಳಿದ್ದು, ಇನ್ನೊಂದೆಡೆ ಭೂಧನಾದಿ ಲಾಭ, ಉತ್ತಮ ಸ್ಥಾನಮಾನಾದಿಗಳು ದೊರಕುವುದು. ಭೂವ್ಯವಹಾರಗಳು ಸುಲಭವಾಗಿ ನಡೆಯಬಹುದು. ಸ್ಥಾನಮಾನಾದ್ಯುತ್ಕರ್ಷೆ, ಧನಾಭಿವೃದ್ಧಿ, ವಿವಿಧ ಖರ್ಚುವೆಚ್ಚಗಳು ಇತ್ಯಾದಿ ಎದುರಾಗುವವು,ವರ್ಷಾಂತ್ಯದವರೆಗೂ ಮೇಲಿನ ಅಶುಭಫಲಗಳೇ ಇದ್ದು ಪಿತ್ತವಿಕಾರ, ಉಷ್ಣಪ್ರಕೋಪ, ಕಾರ್ಯವೈಫಲ್ಯ, ದೈಹಿಕ ಆಘಾತ, ಸ್ವಜನವಿರಹ, ಇತ್ಯಾದಿ ಎದುರಾಗುವವು.

-ಜ್ಯೋತಿಷಿ ಶ್ರೀ ವೆಂಕಟೇಶ್ವರ ಭಟ್, ಮೈಸೂರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

2025ರ ಜನವರಿ 1ರಂದು ಹುಟ್ಟಿದ ಗಂಡು ಮಗುವಿಗೆ ಯಾವ ಹೆಸರಿಡಬಹುದು ಇಲ್ಲಿದೆ ಲಿಸ್ಟ್

ಏಳೂವರೆ ವರ್ಷದಿಂದ ಕಾಡುತ್ತಿದ್ದ ಶನಿ ಈ ರಾಶಿಯವರಿಗೆ ಈ ವರ್ಷ ಕೊನೆಗೂ ಕೊನೆಯಾಗಲಿದೆ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶಿವ ತಾಂಡವ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ, ಓದಿದರೆ ಏನು ಫಲ ನೋಡಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ