Publish Date: Tue, 28 Jan 2025 (16:56 IST)
Updated Date: Tue, 28 Jan 2025 (17:04 IST)
ಹಿಂದೂ ಪುರಾಣಗಳಲ್ಲಿ ಬೆಳಗ್ಗಿನ ಪೂಜೆಗೆ ಎಷ್ಟೂ ಮಹತ್ವ ಕೊಡುತ್ತೇವೋ ಅಷ್ಟೇ ಪಾಮುಖ್ಯತೆಯನ್ನು ಸಂಜೆಯ ಪೂಜೆಗೂ ವಿಶೇಷ ಸ್ಥಾನವಿದೆ.
ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಕೆಲ ತಪ್ಪುಗಳನ್ನು ಮಾಡಬೇಡಿ. ಒಂದು ವೇಳೆ ಆ ತಪ್ಪುಗಳನ್ನು ಮಾಡಿದರೆ ದಾರಿದ್ರ್ಯ ಆವರಿಸಿಕೊಳ್ಳುತ್ತದೆ ಎಂಬ ನಂಬಿಕೆ.
ಸಂಜೆ ಆಗುತ್ತಿದ್ದಂತೆ ಒಂದಷ್ಟು ಕೆಲಸಗಳನ್ನು ಮಾಡಬಾರದು ಎಂದು ನಮ್ಮ ಹಿರಿಯರು ನಮಗೆ ಹೇಳುತ್ತಾ ಬಂದಿದ್ದಾರೆ. ಅದರಲ್ಲಿ ಒಂದು ಸೂರ್ಯಾಸ್ತದ ನಂತರ ತಲೆ ಬಾಚಿಕೊಳ್ಳುವುದು ತಪ್ಪು ಎಂದು ಹೇಳುತ್ತಾರೆ. ಈ ವೇಳೆ ಕೂದಲು ಬಾಚಿದರೆ ಕೆಟ್ಟ ಶಕ್ತಿಗಳು ಮನೆಯೊಳಗೆ ಆಕ್ರಮಿಸುತ್ತದೆ ಎನ್ನುತ್ತಾರೆ.
ಸಂಜೆ ವೇಳೆ 5ರಿಂದ 6ರ ಒಳಗೆ ಕೂದಲು ಬಾಚಿಕೊಳ್ಳಬೇಕು. ಮಹಿಳೆಯರಯ ದೀಪ ಹಚ್ಚಿದ ಮೇಲೆ ಕೂದಲು ಬಾಚಿಕೊಂದ್ರೆ ದಾರಿದ್ರ್ಯ ಆವರಿಸುತ್ತದೆ ಎಂಬ ನಂಬಿಕೆ. ಇದರಿಂದ ಸಂಸಾರದಲ್ಲಿ ಸಮಸ್ಯೆ, ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದೆ.
ಹಾಗಾಗಿ ದೀಪ ಹಚ್ಚಿದ ಮೇಲೆ ತಲೆ ಬಾಚಿಕೊಳ್ಳುವುದನ್ನು ನಿಲ್ಲಿಸಿದರೆ ಒಳ್ಳೆಯದು.