Publish Date: Mon, 27 Jan 2025 (15:43 IST)
Updated Date: Mon, 27 Jan 2025 (15:45 IST)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳವಾರದಂದು ಕೂದಲು ಅಥವಾ ಗಡ್ಡವನ್ನು ಕತ್ತರಿಸುವುದರಿಂದ ವ್ಯಕ್ತಿಗೆ ಅಶುಭವಾಗುತ್ತದೆ ಎಂಬುದು ನಂಬಿಕೆ. ಈ ರೀತಿಯ ನಂಬಿಕೆ ಹಿಂದೆ ಕೆಲವು ಕಾರಣ ಕೂಡ ಇದೆ.
ದಕ್ಷಿಣ ಭಾರತದಲ್ಲಿ ಹಿಂದೂಗಳು ಮಂಗಳವಾರದಂದು ಕೂದಲು ಕಟ್ ಮಾಡಲ್ಲ. ದಿನನಿತ್ಯದ ಜೀವನದಲ್ಲಿ ಮಾಡಬೇಕಾದ ಕೆಲಸಗಳಿಗೆ ಕೆಲ ಶುಭ ಹಾಗೂ ಅಶುಭ ಎಂಬ ನಂಬಿಕೆಗಳಿದೆ. ಅದರಂತೆ ಮಂಗಳವಾರದಂದು ಕೂದಲು ಕಟ್ ಮಾಡುವುದು ಅಶುಭವೆಂದು ಹೇಳಲಾಗುತ್ತದೆ.
ಮಂಗಳವಾರದ ದಿನವು ಮಂಗಳ ಗ್ರಹದೊಂದಿಗೆ ಸಂಬಂಧವನ್ನು ಹೊಂದಿದೆ. ಈ ಮಂಗಳ ಗ್ರಹವು ತುಂಬಾನೇ ಆಕ್ರಮಣಕಾರಿ ಸ್ವಭಾವನ್ನು ಹೊಂದಿದೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮಂಗಳವಾದರಂದು ಕೂದಲು ಕಟ್ ಮಾಡಿದ್ದಲ್ಲಿ ನಕಾರಾತ್ಮಕ ಶಕ್ತಿ ಆವರಿಸಿಕೊಳ್ಳುತ್ತದೆ ಎಂಬುದು ನಂಬಿಕೆ. ಇದಲ್ಲದೆ, ಹಣಕಾಸಿನ ಪರಿಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನಲಾಗಿದೆ.
ಮಂಗಳವಾರದಂದು ಕೂದಲು ಕತ್ತರಿಸುವುದರಿಂದ ಗ್ರಹಗಳ ದುಷ್ಪರಿಣಾಮಗಳು ನಿಮ್ಮ ಮನಸ್ಸಿನ ಮೇಲೆ ಬೀಳುತ್ತವೆ ಎಂದು ನಂಬಲಾಗಿದೆ. ಅಲ್ಲದೇ, ಹಣದ ಕೊರತೆಯನ್ನು ಎದುರಿಸಬೇಕಾಗಬಹುದು. ಆದ್ದರಿಂದ ಈ ದಿನ ಕೂದಲನ್ನು ಕತ್ತರಿಸುವದರಿಂದ ನಕಾರಾತ್ಮಕ ಶಕ್ತಿ ವ್ಯಕ್ತಿಯನ್ನು ಆವರಿಸಿಕೊಳ್ಳುತ್ತದೆ ಎಂಬುದು ನಂಬಿಕೆ.