Publish Date: Fri, 24 Apr 2026 (09:02 IST)
Updated Date: Fri, 24 Apr 2026 (09:15 IST)
ಶುಕ್ರವಾರ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಲು ಒಳ್ಳೆಯ ದಿನ. ಈ ದಿನ ಮುತ್ತೈದೆಯರಿಗೆ ಅರಿಶಿನ-ಕುಂಕುಮ ನೀಡುವುದು ಅಥವಾ ಬಡವರಿಗೆ ಅನ್ನದಾನ ಮಾಡುವುದು ಶ್ರೇಷ್ಠ. ಈ ದಿನ ನಾವು ಮಾಡುವ ಕೆಲ ಕ್ರಮಗಳು ನಮಗೆ ಲಕ್ಷ್ಮಿ ಕೃಪೆಯನ್ನು ನೀಡುತ್ತದೆ.
ಇನ್ನೂ ನಿತ್ಯವು ನಾವು ಅನುಸರಿಸುವ ಕೆಲ ಕ್ರಮಗಳು ಲಕ್ಷ್ಮಿ ಕೃಪೆಗೆ ಪಾತ್ರರಾಗುವಂತೆ ಮಾಡುತ್ತದೆ. ಇಲ್ಲಿದೆ ಅದರ ಬಗ್ಗೆ ಮಾಹಿತಿ.
ಮನೆಯ ಶುಚಿತ್ವ: ಲಕ್ಷ್ಮಿಯು ಸ್ವಚ್ಛತೆ ಇರುವಲ್ಲಿ ನೆಲೆಸುತ್ತಾಳೆ. ವಿಶೇಷವಾಗಿ ಸಂಜೆ ಸಮಯದಲ್ಲಿ ಮನೆ ಅಸ್ತವ್ಯಸ್ತವಾಗಿರಬಾರದು.
ದೀಪಾರಾಧನೆ: ಪ್ರತಿದಿನ ಮುಂಜಾನೆ ಮತ್ತು ಸಂಜೆ ಹೊಸ್ತಿಲಿಗೆ ಪೂಜೆ ಮಾಡಿ, ಮನೆಯ ದೇವರ ಕೋಣೆಯಲ್ಲಿ ತುಪ್ಪದ ದೀಪವನ್ನು ಹಚ್ಚುವುದು ಅತ್ಯಂತ ಶುಭ ಎಂದು ಹೇಳಲಾಗುತ್ತದೆ.
ಹೊಸ್ತಿಲ ಪೂಜೆ: ಮನೆಯ ಮುಖ್ಯ ದ್ವಾರದ (ಹೊಸ್ತಿಲು) ಮೇಲೆ ಕುಂಕುಮ, ಅರಿಶಿನದಿಂದ ಅಲಂಕರಿಸಿ ಪೂಜಿಸುವುದು ಲಕ್ಷ್ಮಿಯನ್ನು ಆಹ್ವಾನಿಸಿದಂತೆ.
ಪಠಿಸಬೇಕಾದ ಸ್ತೋತ್ರಗಳು ಹೀಗಿದೆ:
ಲಕ್ಷ್ಮಿ ಕೃಪೆಗಾಗಿ ಈ ಕೆಳಗಿನ ಸ್ತೋತ್ರಗಳನ್ನು ಪಠಿಸಬಹುದು:
ಶ್ರೀ ಮಹಾಲಕ್ಷ್ಮಿ ಅಷ್ಟಕಂ: "ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ..."
ಕನಕಧಾರಾ ಸ್ತೋತ್ರ: ಆದಿ ಶಂಕರಾಚಾರ್ಯರು ರಚಿಸಿದ ಈ ಸ್ತೋತ್ರವು ಆರ್ಥಿಕ ಸಂಕಷ್ಟಗಳನ್ನು ದೂರ ಮಾಡುತ್ತದೆ.
ಲಕ್ಷ್ಮಿ ಗಾಯತ್ರಿ ಮಂತ್ರ: > ಓಂ ಮಹಾಲಕ್ಷ್ಮೈ ಚ ವಿದ್ಮಹೇ ವಿಷ್ಣು ಪತ್ನ್ಯೈ ಚ ಧೀಮಹಿ ತನ್ನೋ ಲಕ್ಷ್ಮಿಃ ಪ್ರಚೋದಯಾತ್ ||