Select Your Language

Notifications

webdunia
webdunia
webdunia
Thursday, 10 April 2025
webdunia

ಶುಕ್ರವಾರ ಈ ಒಂದು ವಸ್ತು ತಂದಿಟ್ಟರೆ ಲಕ್ಷ್ಮಿ ನಿಮ್ಮ ಮನೆಗೆ ಬರುತ್ತಾಳೆ

Lakshmi Devi

Krishnaveni K

ಬೆಂಗಳೂರು , ಶುಕ್ರವಾರ, 20 ಸೆಪ್ಟಂಬರ್ 2024 (08:48 IST)
Photo Credit: X
ಬೆಂಗಳೂರು: ಇಂದು ಶುಭ ಶುಕ್ರವಾರವಾಗಿದ್ದು, ಅದೃಷ್ಟ ದೇವತೆ ಲಕ್ಷ್ಮೀ ದೇವಿಯ ವಾರವಾಗಿದೆ. ಈ ದಿನ ಇದೊಂದು ವಸ್ತುವನ್ನು ಮನೆಗೆ ತಂದಿಟ್ಟರೆ ನಿಮ್ಮ ಅದೃಷ್ಟ ಖುಲಾಯಿಸುತ್ತದೆ.
 

ಲಕ್ಷ್ಮೀ ದೇವಿ ಸಮೃದ್ಧಿಯ ಸಂಕೇತ. ಆಕೆ ಮನೆಗೆ ಬರಬೇಕಾದರೆ ಮುಖ್ಯವಾಗಿ ಮನೆಯ ಹೊಸ್ತಿಲನ್ನು ಶುಭ್ರವಾಗಿಟ್ಟುಕೊಂಡು ರಂಗೋಲಿ ಹಾಕಿ ಶುಭ ಸಂಕೇತ ತೋರಿಸುತ್ತಿರಬೇಕು. ಇದಲ್ಲದೇ ಮನೆಯ ಮುಂದೆ ತುಳಸಿ ಗಿಡವನ್ನು ಇಟ್ಟುಕೊಳ್ಳುವುದು ಲಕ್ಷ್ಮೀ ದೇವಿಗೆ ಅತ್ಯಂತ ಪ್ರೀತಿ ತರುತ್ತದೆ.

ಶುಕ್ರವಾರ ಎಲ್ಲರೂ ಲಕ್ಷ್ಮೀ ದೇವಿಯ ಪೂಜೆ ಮಾಡುತ್ತಾರೆ. ಆದರೆ ಇಂದು ಲಕ್ಷ್ಮೀ ದೇವಿಯ ಪೂಜೆ ಮಾಡುವಾಗ ಮರೆಯದೇ ತಾವರೆ ಹೂ ಮನೆಗೆ ತಂದು ದೇವರ ಮನೆಯಲ್ಲಿಟ್ಟು ಪೂಜೆ ಮಾಡಿ. ಯಾಕೆಂದರೆ ಲಕ್ಷ್ಮೀ ಕಮಲ ಪ್ರಿಯೆ. ಆಕೆಯ ಪೂಜೆಗೆ ಕಮಲದ ಹೂಗಳು ಇರಲೇಬೇಕು.

ಎಲ್ಲಿ ಮಹಾವಿಷ್ಣುವಿಗೆ ಗೌರವ ಸಿಗುತ್ತದೋ ಅಲ್ಲಿ ಲಕ್ಷ್ಮೀ ದೇವಿ ನೆಲೆಸಿರುತ್ತಾಳೆ. ಹೀಗಾಗಿ ಮನೆಯಲ್ಲಿ ಅಥವಾ ದೇವರ ಮನೆಯಲ್ಲಿ ಮಹಾವಿಷ್ಣುವಿನ ಫೋಟೋ ಇಟ್ಟುಕೊಂಡರೆ ವಿಷ್ಣುವಿನ ಜೊತೆಗೆ ಲಕ್ಷ್ಮೀ ಕೃಪಾಕಟಾಕ್ಷವೂ ನಿಮಗೆ ದೊರೆಯುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಮನೆಯನ್ನು ಸ್ವಚ್ಛವಾಗಿಟ್ಟುಕೊಂಡು ಸಂಜೆ ಹೊತ್ತಿಗೆ ದೀಪ ಹಚ್ಚಿ ದೇವರ ಪ್ರಾರ್ಥನೆ ಮಾಡುವುದು ಮುಖ್ಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?