Daily Horoscope
✕

ದುರ್ಗಾದೇವಿಯ ಈ ಎರಡು ಮಂತ್ರ ಪಠಿಸುವುದರಿಂದ ಭಯ ದೂರವಾಗುವುದು

Krishnaveni K
ಸೋಮವಾರ, 2 ಸೆಪ್ಟಂಬರ್ 2024 (08:48 IST)
ಬೆಂಗಳೂರು: ಮಂಗಳವಾರ ವಿಶೇಷವಾಗಿ ದುರ್ಗಾದೇವಿಯ ವಾರವಾಗಿದೆ. ದುರ್ಗಾ ದೇವಿಯ ಈ ಎರಡು ಮಂತ್ರಗಳನ್ನು ಪಠಿಸುವುದರಿಂದ ಭಯ ನಾಶವಾಗುವುದು. ಅವು ಯಾವುವು ನೋಡೋಣ.

ದುರ್ಗಾ ದೇವಿ ಎಂದರೆ ಭಯ ನಾಶ ಮಾಡುವವಳು ಎಂದೇ ನಾವು ನಂಬುತ್ತೇವೆ. ಆಕೆಯ ರೂಪ ವ್ಯಗ್ರವಾದರೂ ಶರಣಾಗತಿಯಾಗಿ ಬರುವವಳಿಗೆ ತಾಯಿ ಯಾವತ್ತೂ ಒಳಿತನ್ನೇ ಮಾಡುತ್ತಾಳೆ. ಜೊತೆಗೆ ನಮಗೆ ಜೀವನದಲ್ಲಿ ಶತ್ರು ಭಯ, ಮಾಟಮಂತ್ರಾದಿಗಳ ಭಯವಿದ್ದರೆ ದುರ್ಗಾದೇವಿಯ ಪ್ರಾರ್ಥನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಮತ್ತು ಧೈರ್ಯ ಮೂಡುವುದು.

ದುರ್ಗಾ ದೇವಿ ಶಕ್ತಿ ಸ್ವರೂಪಿಣಿ. ದೇವಿಯ ನವ ಶಕ್ತಿಗಳಲ್ಲಿ ದುರ್ಗೆಯೂ ಒಬ್ಬಳು. ಈಕೆ ಶತ್ರು ನಾಶ ಮಾಡುತ್ತಾಳೆ. ನಮ್ಮ ಸಂಕಷ್ಟಗಳನ್ನು ಪರಿಹರಿಸುವ ದುರ್ಗಾದೇವಿಗೆ ಎರಡು ವಿಶೇಷ ಮಂತ್ರಗಳ ಮೂಲಕ ಪೂಜೆ ಮಾಡಬಹುದು. ಅವುಗಳಲ್ಲಿ ಒಂದು ಹೀಗಿದೆ:

‘ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣೀ ನಮೋಸ್ತುತೇ’

ಇನ್ನೊಂದು ಮಂತ್ರ:
‘ಓಂ ಜಯಂತಿ ಮಂಗಳಾ ಕಾಳೀ ಭದ್ರಕಾಳಿ ಕಪಾಲಿನೀ
ದುರ್ಗಾ ಕ್ಷಮಾ ಶಿವಾ ಧಾತ್ರೀ ಸ್ವಾಹಾ ಸ್ವಧಾ ನಮೋಸ್ತುತೇ’
ಈ ಎರಡು ಮಂತ್ರಗಳನ್ನು ನಿತ್ಯವೂ ಪಠಿಸುತ್ತಿದ್ದರೆ ನಿಮ್ಮ ಮನಸ್ಸಿನಲ್ಲಿರುವ ಭಯ ದೂರವಾಗಿ ದುರ್ಗಾದೇವಿಯ ಕೃಪೆಗೆ ಪಾತ್ರರಾಗುತ್ತೀರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗಾಯತ್ರಿ ಜಪ ಮಾಡುವ ಮೊದಲು ಓದಲೇಬೇಕಾದ ಸ್ತೋತ್ರ

ಶ್ರೀ ಕಾಳಿ ಏಕಾಕ್ಷರ ಮಂತ್ರ ಜಪಿಸುವ ವಿಧಾನ, ಫಲವೇನು ನೋಡಿ

ಸಂಜೆ ಹೊತ್ತು ಓದಲೇಬೇಕಾದ ಶ್ರೀ ಚಂದ್ರಮೌಳೀಶ್ವರ ಸ್ತವ ಸ್ತೋತ್ರ

ನಿತ್ಯ ಬೆಳಿಗ್ಗೆ ಈ ಸೂರ್ಯ ಸ್ತೋತ್ರ ಪಠಿಸಿದರೆ ಸಕಲ ರೋಗಗಳಿಂದ ಮುಕ್ತಿ

ಶನಿಯ ಪವರ್ ಫುಲ್ ಮಂತ್ರಗಳಲ್ಲಿ ಇದೂ ಒಂದು

ಮುಂದಿನ ಸುದ್ದಿ
Show comments