Select Your Language

Notifications

webdunia
webdunia
webdunia
webdunia

ಇಲ್ಲಿ ಪೊರಕೆಯನ್ನು ಇಟ್ಟರೆ ಮಹಾಲಕ್ಷ್ಮೀಯ ಶಾಪಕ್ಕೆ ಗುರಿಯಾಗುತ್ತೀರಿ

ಇಲ್ಲಿ ಪೊರಕೆಯನ್ನು ಇಟ್ಟರೆ ಮಹಾಲಕ್ಷ್ಮೀಯ ಶಾಪಕ್ಕೆ ಗುರಿಯಾಗುತ್ತೀರಿ
ಬೆಂಗಳೂರು , ಮಂಗಳವಾರ, 17 ಸೆಪ್ಟಂಬರ್ 2019 (08:41 IST)
ಬೆಂಗಳೂರು : ಪೊರಕೆ ಮಹಾಲಕ್ಷ್ಮೀಯ ಸ್ವರೂಪವೆಂದು ಹೇಳುತ್ತೇವೆ, ಮನೆಯಲ್ಲಿರುವ ನಕರಾತ್ಮಕ ಶಕ್ತಿಯನ್ನು ಹೊರಹಾಕುನ ಒಂದು ಉತ್ತಮವಾದ ಸಾಧನವೆಂದರೆ ಅದು ಪೊರಕೆ. ಈ ಪೊರಕೆಯನ್ನು ಎಲ್ಲೆಂದರಲ್ಲಿ ಇಡುವ ಹಾಗಿಲ್ಲ. ಅದಕ್ಕೆ ಕೆಲವು ನಿಯಮಗಳಿವೆ. ಅದು ಏನೆಂಬುದು ತಿಳಿದುಕೊಳ್ಳಿ.




ಮನೆಯಲ್ಲಿ ಕಸ ಗುಡಿಸುವಾಗ ದೈವತ್ವದ ದಿಕ್ಕಾದ  ಈಶಾನ್ಯ ಮೂಲೆಯಿಂದ ಗುಡಿಸಿ  ನೈರುತ್ಯ ದಿಕ್ಕಿನ ಮೂಲೆಯಿಂದ ಆ ಕಸವನ್ನು ಎತ್ತಬೇಕು. ಇದರಿಂದ ಮನೆಗೆ ಶುಭವನ್ನು ತರುತ್ತದೆ. ಹಾಗೇ ಈ ಪೊರಕೆಯನ್ನು ಬಾಗಿಲ ಮೂಲೆಯಲ್ಲಿ ಇಡುವ ಹಾಗೇ ಇಲ್ಲ. ಇದರಿಂದ ಬಹಳ ಕಷ್ಟವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಮನೆಯಲ್ಲಿ ಯಾರಿಗೂ ಕಾಣದ ಸ್ಥಳದಲ್ಲಿ ಇಡಬೇಕು.


ಮೆಟ್ಟಿಲ ಕೆಳಗೆ ಕೆಲವರು ಪೊರಕೆಗಳನ್ನು ಇಡುತ್ತಾರೆ. ಇದು ತಪ್ಪು. ಯಾಕೆಂದರೆ ಪೊರಕೆ ಮಹಾಲಕ್ಷ್ಮೀಯ ಸ್ವರೂಪವಾಗಿರುವುದರಿಂದ ಅದನ್ನು ಮೆಟ್ಟಿಲ ಕೆಳಗೆ ಇಟ್ಟು ನೀವು ಮೇಲೆ ನಡೆದುಕೊಂಡು ಹೋದರೆ ಲಕ್ಷ್ಮೀಗೆ ಅಪಮಾನ ಮಾಡಿದಂತಾಗುತ್ತದೆ. ಇದರಿಂದ ಲಕ್ಷ್ಮೀಯ ಶಾಪಕ್ಕೆ ಗುರಿಯಾಗುತ್ತೀರಿ.


Share this Story:

Follow Webdunia kannada

ಮುಂದಿನ ಸುದ್ದಿ

ಶಿವನು ಮಲಗಿರುವ ಸ್ಥಿತಿಯಲ್ಲಿರುವ ಏಕೈಕ ದೇವಾಲಯವಿದು!