Select Your Language

Notifications

webdunia
webdunia
webdunia
webdunia

ನಿಮ್ಮ ರಾಶಿಗನುಗುಣವಾಗಿ ನೀವು ಯಾವ ಗಿಡಗಳನ್ನು ನೆಟ್ಟರೆ ಒಳ್ಳೆಯದು ಗೊತ್ತಾ?

ನಿಮ್ಮ ರಾಶಿಗನುಗುಣವಾಗಿ ನೀವು ಯಾವ ಗಿಡಗಳನ್ನು ನೆಟ್ಟರೆ ಒಳ್ಳೆಯದು ಗೊತ್ತಾ?
ಬೆಂಗಳೂರು , ಬುಧವಾರ, 28 ಆಗಸ್ಟ್ 2019 (06:47 IST)
ಬೆಂಗಳೂರು : ಪ್ರತಿಯೊಬ್ಬರು ಮನೆಯ ಸುತ್ತಮುತ್ತ ಮರ ಗಿಡಗಳನ್ನು ಬೆಳೆಸುತ್ತಾರೆ. ಇದು ಮನೆಯ ಸುತ್ತಮುತ್ತಲಿನ ಪರಿಸರದ ಅಂದವನ್ನು ಹೆಚ್ಚಿಸುತ್ತದೆ. ಈ ಗಿಡಗಳನ್ನು ನೆಡುವಾಗ ರಾಶಿಗನುಗುಣವಾಗಿ ಮನೆಯಲ್ಲಿ ಗಿಡಗಳನ್ನು ಬೆಳೆಸಿದ್ರೆ ಜಾತಕದ ದೋಷ ನಿವಾರಣೆಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.




ಮೇಷ ಹಾಗೂ ವೃಶ್ಚಿಕ ರಾಶಿಯವರ  ಗ್ರಹ ಮಂಗಳ. ಈ ರಾಶಿಯವರು ಮನೆಯಲ್ಲಿ ಕೆಂಪು ಗುಲಾಬಿ ಗಿಡವನ್ನು ಬೆಳೆಸಬೇಕು. ಶಿವಲಿಂಗಕ್ಕೆ ಕೆಂಪು ಗುಲಾಬಿಯನ್ನು ಅರ್ಪಿಸಬೇಕು.

ವೃಷಭ ಹಾಗೂ ತುಲಾ ರಾಶಿಯವರ ಗ್ರಹ ಶುಕ್ರ. ಮನೆಯಲ್ಲಿ ಬಿಳಿ ಬಣ್ಣದ ಹೂವು ಬಿಡುವ ಗಿಡವನ್ನು ಬೆಳೆಸಿದ್ರೆ ಶುಕ್ರನ ಕೃಪೆ ಸಿಗುತ್ತದೆ. ಬಿಳಿ ಹೂವನ್ನು ಶಿವಲಿಂಗಕ್ಕೆ ಅರ್ಪಿಸಬೇಕು.

ಬುಧ ಗ್ರಹ ಕನ್ಯಾ ಹಾಗೂ ಮಿಥುನ ರಾಶಿಯ ಗ್ರಹವಾಗಿದೆ. ಈ ರಾಶಿಯವರು ಮನೆಯಲ್ಲಿ ಸಣ್ಣ ಗಿಡವನ್ನು ಬೆಳೆಸಬೇಕು. ಹೂ ಬಿಡದ ಸುಂದರವಾಗಿ ಕಾಣುವ ಗಿಡವನ್ನು ಬೆಳೆಸಬೇಕು.

ಕರ್ಕ ರಾಶಿಯ ದೇವರು ಚಂದ್ರ. ಈ ರಾಶಿಯವರು ಮನೆಯಲ್ಲಿ ತುಳಸಿ ಜೊತೆಗೆ ಸಣ್ಣ ಸಣ್ಣ ಔಷಧಿ ಸಸ್ಯಗಳನ್ನು ಬೆಳೆಸಬೇಕು.

ಸಿಂಹ ರಾಶಿಯವರು ಮನೆಯಲ್ಲಿ ಕೆಂಪು ಹೂವಿನ ಗಿಡವನ್ನು ಬೆಳೆಸಬೇಕು. ಸೂರ್ಯೋದಯದ ವೇಳೆ ಗಿಡಕ್ಕೆ ನೀರನ್ನು ಹಾಕಬೇಕು.

ಧನು ಹಾಗೂ ಮೀನ ರಾಶಿಯವರ ಗ್ರಹ ಗುರು. ಮನೆಯಲ್ಲಿ ಹಳದಿ ಹೂವಿನ ಗಿಡ ಬೆಳೆಸಬೇಕು.

ಮಕರ ಹಾಗೂ ಕುಂಭ ರಾಶಿಯವರ ಗ್ರಹ ಶನಿ. ಈ ರಾಶಿಯವರು ಹೂ, ಹಣ್ಣು ಬಿಡದ ಆದ್ರೆ ಹೆಚ್ಚು ನೆರಳು ಬೀಳುವ ಗಿಡ ಬೆಳೆಸಬೇಕು.

 
 

Share this Story:

Follow Webdunia kannada

ಮುಂದಿನ ಸುದ್ದಿ

ಮಘ ನಕ್ಷತ್ರದವರಿಗೆ ಯಾವ ಅಕ್ಷರದಿಂದ ಆರಂಭವಾಗುವ ಹೆಸರಿಡಬೇಕು?