ನಿಮ್ಮ ಪರ್ಸ್ ಬಣ್ಣ ಕೂಡ ನಿಮ್ಮ ಅದೃಷ್ಟ ಬದಲಾಯಿಸಲಿದೆ ಹೇಗೆ ಗೊತ್ತಾ…?

ಬುಧವಾರ, 8 ಆಗಸ್ಟ್ 2018 (15:19 IST)
ಬೆಂಗಳೂರು: ಪರ್ಸ್ ಎಲ್ಲರೂ ಇಟ್ಟುಕೊಳ್ಳುತ್ತಾರೆ. ಪರ್ಸು ಸದಾ ತುಂಬಿರುವುದು ಸಮೃದ್ಧತೆಯ ಲಕ್ಷಣವಾಗಿದ್ದು ಜೀವನದಲ್ಲಿ ಎದುರಾಗುವ ತೊಂದರೆಗಳನ್ನು ಸುಲಭವಾಗಿ ಎದುರಿಸಬಹುದು. ಫೆಂಗ್ ಶೂಯಿ ವಿಧಾನದ ಪ್ರಕಾರ ನಮ್ಮ ದೇಹದಲ್ಲಿ ಹಲವು ರೀತಿಯ ಶಕ್ತಿಗಳು ಪ್ರವಹಿಸುತ್ತಿದ್ದು ಇವುಗಳು ತರಂಗಗಳ ರೂಪದಲ್ಲಿರುತ್ತವೆ. ನಮ್ಮ ಜೊತೆ ಇರುವ ವಸ್ತುಗಳು ಈ ತರಂಗಗಳನ್ನು ಬದಲಿಸುವ ಶಕ್ತಿ ಹೊಂದಿವೆ. ಇದರೊಂದಿಗೆ ಹಣದ ಪರ್ಸು ಸಹಾ ಈ ತರಂಗಗಳನ್ನು ಬದಲಿಸಬಲ್ಲುದು. ಈ ಪರ್ಸಿನ ಬಣ್ಣ ಮುಖ್ಯವಾಗಿ ತರಂಗಗಳ ದಿಕ್ಕನ್ನು ಬದಲಿಸಬಲ್ಲ ಶಕ್ತಿ ಹೊಂದಿದೆ.


ಫೆಂಗ್ ಶುಯಿ ಪ್ರಕಾರ ಪ್ರತಿಯೊಬ್ಬರಲ್ಲಿಯೂ ಐದು ವಿಧದ ಶಕ್ತಿಪ್ರವಾಹಗಳಿರುತ್ತವೆ. ಭೂಮಿ (ಅಯಸ್ಕಾಂತ), ನೀರು, ಬೆಂಕಿ, ಲೋಹ ಮತ್ತು ಕಾಷ್ಠ. ಇವು ಅವರವರ ಜನ್ಮದಿನಾಂಕವನ್ನು ಅನುಸರಿಸಿ ಹೆಚ್ಚುಕಡಿಮೆಯಾಗಿರುತ್ತದೆ. ಇವುಗಳ ಬಗ್ಗೆ ಕೊಂಚ ಅರಿತರೆ ನಿಮಗೆ ಯಾವ ಬಣ್ಣ ಸೂಕ್ತ ಎಂದು ತಿಳಿಯಬಹುದು.


ಕಪ್ಪು :ಅತಿ ಹೆಚ್ಚಾಗಿ ಬಳಸಲ್ಪಡುವ ಬಣ್ಣವೆಂದರೆ ಕಪ್ಪು. ಸಾಮಾನ್ಯವಾಗಿ ಕಪ್ಪು ಬಣ್ಣದ ಪರ್ಸು ಹೆಚ್ಚಿನ ಎಲ್ಲಾ ಬಣ್ಣದ ಬಟ್ಟೆಗಳಿಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಕಪ್ಪು ಬಣ್ಣದ ಪರ್ಸ್ ಬೆಂಕಿ, ಭೂಮಿ ಮತ್ತು ಲೋಹದ ಶಕ್ತಿಪ್ರವಾಹ ಇರುವವರು ಕಪ್ಪು ಬಣ್ಣವನ್ನು ಆಯ್ದುಕೊಳ್ಳಬಾರದು. ಆದರೆ ನೀರು ಅಥವಾ ಕಾಷ್ಠದ ಶಕ್ತಿಪ್ರವಾಹದ ವ್ಯಕ್ತಿಗಳು ಕಪ್ಪು ಬಣ್ಣದ ಪರ್ಸ್ ಹೊಂದುವುದು ಉತ್ತಮ.


ಕೆಂಪು : ಕೆಂಪು ಬಣ್ಣ ಬೆಂಕಿ ಶಕ್ತಿಪ್ರವಾಹದ ವ್ಯಕ್ತಿಗಳಿಗೆ ಹೆಚ್ಚು ಸೂಕ್ತವಾಗಿದೆ. ಆದರೆ ಪರ್ಸುಗಳು ಈ ಬಣ್ಣದಲ್ಲಿ ಸಿಗುವುದು ಅತ್ಯಂತ ದುರ್ಲಭ.


ನೀಲಿ ಬಣ್ಣದ ಪರ್ಸ್ ನೀಲಿ ಬಣ್ಣ ಸಮೃದ್ಧತೆಯ ಸಂಕೇತವಾಗಿದೆ. ನೀಲಿ ಬಣ್ಣ ನೀರಿನ ಶಕ್ತಿಪ್ರವಾಹ ಇರುವವರಿಗೆ ಹೆಚ್ಚು ಸೂಕ್ತವಾಗಿದ್ದು ಸದಾ ಸಮೃದ್ಧತೆ ತುಂಬಿರಲು ನೆರವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮನೆಯಲ್ಲಿ ಸದಾ ಖುಷಿ ಖುಷಿಯಾಗಿರಬೇಕೆಂದರೆ ಈ ವಾಸ್ತುವನ್ನು ಅನುಸರಿಸಿ