Select Your Language

Notifications

webdunia
webdunia
webdunia
webdunia

ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಹೀಗೆ ಮಾಡಿ !

ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಹೀಗೆ ಮಾಡಿ !
ಬೆಂಗಳೂರು , ಬುಧವಾರ, 18 ಜುಲೈ 2018 (15:50 IST)
ಕಣ್ಣಿನ ಸುತ್ತ ಕಪ್ಪು ಕಲೆಗಳು ಅನೇಕ ಜನರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಇದರಿಂದ ನಿಮ್ಮ ಸೌಂದರ್ಯಕ್ಕೆ ಕುತ್ತು ಬರುವುದು ಖಚಿತ. ಒತ್ತಡ, ಅಸಮತೋಲಿತ ಆಹಾರ ಪದ್ದತಿ, ನಿದ್ರಾಹೀನತೆ, ಸೂರ್ಯನ ಕಿರಣಗಳು ನೇರವಾಗಿ ಬೀಳುವುದು, ಖಿನ್ನತೆ,  ಪೋಷಕಾಂಶದ ಕೊರತೆ, ಅತಿಯಾದ ಮಾದಕ ವಸ್ತುಗಳ ಸೇವನೆಯಿಂದ ಕಣ್ಣಿನ ಸುತ್ತ ಕಪ್ಪು ಕಲೆಗಳಾಗುತ್ತವೆ.

ಕಪ್ಪು ಕಲೆಗಳನ್ನು ಹೋಗಲಾಡಿಸಲು ಹಲವಾರು ದುಬಾರಿ ಔಷಧ ಮತ್ತು ಕ್ರೀಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದ, ಆದರೆ ಕಡಿಮೆ ಖರ್ಚಿನಲ್ಲಿ ಮನೆಯಲ್ಲೇ ಮಾಡುವಂತಹ ಮನೆ ಮದ್ಧುಗಳನ್ನು ನೋಡೋಣ
 
* ಸೂರ್ಯನ ಕಿರಣಗಳು ನೇರವಾಗಿ ಕಣ್ಣಿಗೆ ಬೀಳದಂತೆ ನೋಡಿಕೊಳ್ಳಿ. ಇದಕ್ಕಾಗಿ ಬಿಸಿಲಲ್ಲಿ ಮನೆಯಿಂದ ಹೊರಹೋಗುವ ಮೊದಲು ಸನ್‌ಗ್ಲಾಸ್ ಅಥವಾ ಕೊಡೆಯನ್ನು ಬಳಸಿ.
 
* ವಾರಕ್ಕೆ 2 ಬಾರಿ ವ್ಯಾಯಾಮ ಮಾಡಿ. ಇದು ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ಕಡಿಮೆ ಮಾಡುದಷ್ಟೆ ಅಲ್ಲದೆ ಮುಖದ ಅಂದ ಮತ್ತು ಹೊಳಪನ್ನು ಹೆಚ್ಚಿಸುತ್ತದೆ.
 
* ಪ್ರತಿನಿತ್ಯ 10-12 ಲೋಟ ನೀರು ಕುಡಿಯಿರಿ.
 
*  ಪ್ರತಿದಿನವೂ ಕನಿಷ್ಟ 7-8 ಗಂಟೆ ನಿದ್ದೆ ಮಾಡಿ.
 
* ಕಂಪ್ಯೂಟರ್ ಅಥವಾ ಮೊಬೈಲ್ ಅನ್ನು ಕಣ್ಣಿನ ಹತ್ತಿರವಿರುವ ಹಾಗೆ ಇರಿಸಿ ಬಳಸಬೇಡಿ.
 
*  ಕಣ್ಣಿನ ಸುತ್ತ ಇರುವ ಕಪ್ಪು ಕಲೆಗೆ ಬಾದಾಮಿ ಎಣ್ಣೆ / ವಿಟಮಿನ್ ಇ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ.
 
* ಪ್ರತಿನಿತ್ಯ ಮಲಗುವ ಮುಂಚೆ ಕಣ್ಣಿಗೆ ಹಚ್ಚಿರುವ ಕಾಜಲ್, ಐ ಲೈನರ್ ಅಥವಾ ಮೇಕಪ್ ಅನ್ನು ತೆಗೆಯಿರಿ. ಇದಕ್ಕಾಗಿ ಒಂದು ಸಣ್ಣ ಹತ್ತಿ ತುಂಡಿಗೆ ತಂಗಿನ ಎಣ್ಣೆಯನ್ನು ಹಾಕಿ ಅದರಿಂದ ಹಗುರವಾಗಿ ಉಜ್ಜಿದರೆ ಕಾಜಲ್, ಐ ಲೈನರ್ ಅಥವಾ ಮೇಕಪ್ ಬಹಳ ಸುಲಭವಾಗಿ ಸ್ವಚ್ಛವಾಗುತ್ತದೆ.
 
* ಸೌತೆಕಾಯಿ ಅಥವಾ ಆಲೂಗಡ್ಡೆ ಬಿಲ್ಲೆಗಳನ್ನು ಕಣ್ಣಿನ ಮೇಲೆ 15 ನಿಮಿಷ ಇರಿಸಿಕೊಳ್ಳಿ.
 
* ಅಲೋವೆರಾ ರಸವನ್ನು ಕಣ್ಣಿನ ಸುತ್ತ ಹಚ್ಚಿಕೊಂಡು, 30 ನಿಮಿಷಗಳ ನಂತರ ಮುಖ ತೊಳೆದುಕೊಳ್ಳಿ.
 
* ಕರಿದ ತಿಂಡಿ ತಿನಸುಗಳು, ಚಹಾ, ಕಾಫಿ, ಮಧ್ಯಪಾನ ಮತ್ತು ಸಿಗರೇಟ್ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ.
 
* 2 ಚಮಚ ತುರಿದ ಆಲೂಗಡ್ಡೆಯನ್ನು ಕಣ್ಣಿ ಸುತ್ತ ಇಟ್ಟು 15-20 ನಿಮಿಷ ಬಿಟ್ಟು ತೊಳೆದುಕೊಳ್ಳಿ.
 
* ಹಸಿಹಾಲಿಗೆ ಹತ್ತಿಯನ್ನು ಅದ್ದಿಸಿ ಕಲೆಗಳ ಮೇಲೆ ಇರುವಂತ ಜಾಗಕ್ಕೆ ಸುಮಾರು 10-15 ನಿಮಿಷಗಳ ಕಾಲ ಇರಿಸಿ.
 
* ಮೇಕಪ್ ತೆಗೆದ ನಂತರ ರೋಸ್ ವಾಟರ್ ಅನ್ನು ಮುಖಕ್ಕೆ ಮತ್ತು ಕಣ್ಣಿನ ಸುತ್ತ ಹಚ್ಚಿಕೊಳ್ಳಿ.
 
* ದಿನವೂ ನಿಂಬೆರಸವನ್ನು ಹಚ್ಚಿದರೆ ಕಣ್ಣಿನ ಸುತ್ತ ಇರುವ ಕಪ್ಪು ಕಲೆ ಹೋಗಲಾಡಿಸಬಹುದು.
 
* ಐಸ್ ಕ್ಯೂಬ್‌ಗಳನ್ನು ಒಂದು ಮೃದುವಾದ ಬಟ್ಟೆಗೆ ಹಾಕಿ, ಅದರಿಂದ ಕಣ್ಣು ಮತ್ತು ಮುಖವನ್ನು ಮಸಾಜ್ ಮಾಡುವುದರಿಂದ ಕಣ್ಣಿನ ಸುತ್ತ ಇರುವ ಡಾರ್ಕ್ ಸರ್ಕಲ್ ಹೋಗುವುದಲ್ಲದೆ, ಮುಖದ ಅಂದವೂ ಹೆಚ್ಚುವುದು.
 
* ಪ್ರತಿದಿನ, ರಕ್ತ ಪರಿಚಲನೆ ಸುಧಾರಿಸಲು ಸುಲಭ ಕಣ್ಣಿನ ಮಸಾಜ್ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯ ಸಂಜೀವಿನಿ ತುಳಿಸಿ ಬಗ್ಗೆ ನಿಮಗೆಷ್ಟು ಗೊತ್ತು...?