Webdunia - Bharat's app for daily news and videos

Install App

ಆರ್ಥಿಕ ತೊಂದರೆಗಳ್ನು ನಿವಾರಿಸುವ ದೂರ್ವ ಗಣಪತಿ ವ್ರತವನ್ನು ಮಾಡೋದು ಹೇಗೆ ಗೊತ್ತಾ?

Webdunia
ಭಾನುವಾರ, 28 ಜುಲೈ 2019 (06:34 IST)
ಬೆಂಗಳೂರು : ವಿಘ್ನ ವಿನಾಶಕ ಗಣಪತಿಯನ್ನು ಹಲವು ಬಗೆಯಲ್ಲಿ ವೃತದ ಮೂಲಕ ಪೂಜಿಸಬಹುದು. ಇದರಲ್ಲಿ ತುಂಬಾ ವಿಶಿಷ್ಟವಾದದ್ದು ದೂರ್ವ ಗಣಪತಿ ವ್ರತ. ಆರ್ಥಿಕ ತೊಂದರೆಗಳು ನಿವಾರಣೆಯಾಗಲು ಈ ವೃತವನ್ನು ಮಾಡುತ್ತಾರೆ. ಇದನ್ನ ಮಾಡುವ ಕ್ರಮ ಹೀಗಿದೆ.


ಈ ವ್ರತವನ್ನು ಶುಕ್ಲ ಪಕ್ಷದಲ್ಲಿ ಬರುವ ಮಂಗಳವಾರದಿಂದ ಪ್ರಾರಂಭಿಸಿ , 21 ದಿನಗಳು ಅಥವಾ 21 ಮಂಗಳವಾರಗಳು ಗಣೇಶನನ್ನು ಪೂಜಿಸಿದರೆ ಅತ್ಯಂತ ಪವಿತ್ರ ಎಂದು ಪಂಡಿತರು ಹೇಳುತ್ತಾರೆ.

 

ದೂರ್ವ ಗಣಪತಿ ವ್ರತವನ್ನು ಮಾಡುವವರು ಸೂರ್ಯೋದಯಕ್ಕೂ ಮುನ್ನ ತಲೆ ಸ್ನಾನವನ್ನು ಮಾಡಬೇಕು. ಮನೆಯ ಈಶಾನ್ಯ ಭಾಗದಲ್ಲಿ ಮೊದಲಿಗೆ ಸ್ಥಳವನ್ನು ಸ್ವಚ್ಛ ಮಾಡಿಕೊಳ್ಳಬೇಕು. ಅಕ್ಕಿ ಹಿಟ್ಟಿನಿಂದ ರಂಗೋಲಿಯನ್ನು ಬಿಡಿಸಿ ಅರಿಶಿಣ ಕುಂಕುಮದಿಂದ ಅಲಂಕಾರ ಮಾಡಬೇಕು. ನಂತರ ಗಣಪತಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ನೀವು ಪೂರ್ವ ದಿಕ್ಕಿನ ಕಡೆ ಮುಖ ಮಾಡಿ ಕುಳಿತುಕೊಳ್ಳಬೇಕು.

 

ಅರಿಶಿಣದಿಂದ ಗಣಪತಿಯನ್ನು ಮಾಡಿ ಇದನ್ನು ವೀಳ್ಯದೆಲೆಯ ಮೇಲೆ ಇರಿಸಬೇಕು. ಅರಿಶಿನದ ಗಣಪತಿಗೆ ಗಂಧ , ಅರಿಶಿನ ಕುಂಕುಮವನ್ನು ಹಚ್ಚಬೇಕು. ನಂತರ ಅಕ್ಷತೆ ಮತ್ತು ಹೂವನ್ನು ಸಮರ್ಪಿಸಬೇಕು. ದೀಪಗಳನ್ನು ನೈರುತ್ಯ ದಿಕ್ಕಿನ ಕಡೆ ಇಟ್ಟು ಕೊಬ್ಬರಿ ಎಣ್ಣೆಯಿಂದ ದೀಪಾರಾಧನೆ ಮಾಡಬೇಕು.ನಂತರ ಮೂರು ದಳಗಳಿರುವ 21 ಗರಿಕೆಯನ್ನು ಗಣಪತಿಗೆ ಸಮರ್ಪಿಸುವಾಗ ಈ ಮಂತ್ರವನ್ನು ಹೇಳಬೇಕು.

ತ್ವಂ ದೂರ್ವೆ ಅಮೃತ ಜನ್ಮಾಸಿ ವಂದಿತಾಸಿ ಸುರೈರಪಿ l ಸೌಭಾಗ್ಯo ಸಂತಂತಿಂ ದೇಹಿ ಸರ್ವ ಕಾರ್ಯಕರೀ ಭವ ll

 

 

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shani Dasha 2025: ಕರ್ಕಟಕ ರಾಶಿಯವರಿಗೆ 2025 ರಲ್ಲಿ ಶನಿಯಿಂದ ಈ ಲಾಭಗಳಾಗುತ್ತವೆ

Shani dosha horoscope 2025: ಮೇಷ ರಾಶಿಯವರಿಗೆ 2025 ರಲ್ಲಿ ಶನಿ ದೆಸೆ ಇದೆಯೇ

Baba Vanga prediction: ಬಾಬಾ ವಂಗಾ ಪ್ರಕಾರ 2025 ರಲ್ಲಿ ಈ ರಾಶಿಯವರಿಗೆ ಶನಿ ಅದೃಷ್ಟ ತರುತ್ತಾನೆ

Family horoscope 2025: ಮೀನ ರಾಶಿಯವರು 2025 ರಲ್ಲಿ ಕೌಟುಂಬಿಕವಾಗಿ ದೊಡ್ಡ ನಿರ್ಧಾರ ತೆಗೆದುಕೊಳ್ಳಲಿದ್ದೀರಿ

Family horoscope 2025: ಕುಂಭ ರಾಶಿಯವರಿಗೆ 2025 ರಲ್ಲಿ ಕೌಟುಂಬಿಕವಾಗಿ ಭವಿಷ್ಯ ಹೇಗಿರಲಿದೆ

ಮುಂದಿನ ಸುದ್ದಿ
Show comments