ನರದೃಷ್ಟಿ ನಿವಾರಣೆಗೆ ಈ ದೇವಸ್ಥಾನದಿಂದ ಈ ವಸ್ತುವನ್ನು ತಂದು ಮನೆಗೆ ಕಟ್ಟಿ

ಶುಕ್ರವಾರ, 12 ಜುಲೈ 2019 (09:05 IST)
ಬೆಂಗಳೂರು : ಜೀವನಲ್ಲಿ ಕಷ್ಟ, ಸಂಕಟಗಳು, ಸಮಸ್ಯೆಗಳು  ಎದುರಾಗುವುದು ಸಹಜ. ಆದರೆ ಎಷ್ಟೇ ಕಷ್ಟಪಟ್ಟ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ, ಸಮಸ್ಯೆಗಳು ಹೆಚ್ಚಾಗುತ್ತಿದೆ ಎಂದಾದರೆ ಅಂತವರಿಗೆ ಯಾವುದಾದರೂ ಕೆಟ್ಟ ಕಣ್ಣಿನ ದೃಷ್ಟಿ ಅಥವಾ ನರದೃಷ್ಟಿ ತಗುಲಿದೆ ಎಂದರ್ಥ. ಇದನ್ನು ಹೋಗಲಾಡಿಸಲು ಈ ಪರಿಹಾರವನ್ನು ಮಾಡಿ.
ಮಂಗಳವಾರ ಅಥವಾ ಶನಿವಾರ ಹನುಮಂತನ ದೇವಾಲಯಕ್ಕೆ ಹೋಗಿ ಕಪ್ಪು ದಾರವನ್ನು ತೆಗೆದುಕೊಂಡು ಅದಕ್ಕೆ 9 ಗಂಟನ್ನು ಹಾಕಿ ಅದನ್ನು ನಾವು ಮನೆಯ ಬಾಗಿಲಿಗೆ ಕಟ್ಟಬೇಕು. ನಂತರ ಹಣವನ್ನು ಶೇಖರಿಸಿಡುವ ಜಾಗದಲ್ಲಿ ಇಟ್ಟರೆ, ನಿಮ್ಮ ಮನೆಯಲ್ಲಿ ಆರ್ಥಿಕ ಸಂಕಷ್ಟಗಳು ಎಂದಿಗೂ ಉಂಟಾಗುವುದಿಲ್ಲ.


ಅಷ್ಟೇ ಅಲ್ಲದೆ ಈ ಕಪ್ಪು ದಾರವನ್ನು ನೀವು ಕೊರಳಿಗೆ ಧರಿಸುವುದರಿಂದ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ಈ ರೀತಿ ಮಾಡುವುದರಿಂದ ನರ ದೃಷ್ಟಿ, ಕೆಟ್ಟ ಕಣ್ಣಿನ ದೃಷ್ಟಿಯಿಂದ ಮುಕ್ತಿ ಪಡೆಯಬಹುದು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅನುರಾಧ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?