Select Your Language

Notifications

webdunia
webdunia
webdunia
webdunia

ದೀಪಾರಾಧನೆ ಈ ರೀತಿ ಮಾಡಿದರೆ ಅಂದುಕೊಂಡ ಕೋರಿಕೆಗಳು ನೆರವೇರುತ್ತವೆಯಂತೆ

ದೀಪಾರಾಧನೆ ಈ ರೀತಿ ಮಾಡಿದರೆ ಅಂದುಕೊಂಡ ಕೋರಿಕೆಗಳು ನೆರವೇರುತ್ತವೆಯಂತೆ
ಬೆಂಗಳೂರು , ಶನಿವಾರ, 10 ಆಗಸ್ಟ್ 2019 (08:34 IST)
ಬೆಂಗಳೂರು : ಪ್ರತಿಯೊಬ್ಬರು ಮನೆಯಲ್ಲಿ ಪ್ರತಿದಿನ ದೇವರ ಮುಂದೆ ದೀಪ ಬೆಳಗುತ್ತಾರೆ. ಆದರೆ ದೀಪಾರಾಧನೆಯನ್ನು ಶಾಸ್ತ್ರೋಕ್ತವಾಗಿ ಮಾಡಬೇಕು. ಇದರಿಂದ ದೇವರ ಅನುಗ್ರಹ ನಮಗೆ ಸಿಗುತ್ತದೆ.




ಪ್ರಾತಃಕಾಲದ ನಾಲ್ಕು ಗಂಟೆ ಮೂವತ್ತು ನಿಮಿಷಗಳಿಂದ ಹಿಡಿದು  ಆರು ಗಂಟೆಯ ಮಧ್ಯದಲ್ಲಿ ಅಂದರೆ ಮುಂಜಾನೆ ನಾಲ್ಕೂವರೆಯಿಂದ ಆರು ಗಂಟೆಯ ಒಳಗೆ ದೀಪಾರಾಧನೆಯನ್ನು ಮನೆಯಲ್ಲಿ ಮಾಡಬೇಕು. ದೀಪದಲ್ಲಿ ಮೊದಲಿಗೆ ಎರಡು ಬತ್ತಿಗಳನ್ನು ಹಾಕಬೇಕು. ಎರಡು ಬತ್ತಿಗಳು ಬಿಡಿಬಿಡಿಯಾಗಿರಬೇಕು. ಆ ಎರಡು ಬತ್ತಿಗಳು ಕೊನೆಯಲ್ಲಿ ಮಾತ್ರ ಸೇರಿರಬೇಕು. ಕೊನೆಗಳು ಸೇರುವಂತೆ ತೈಲದಿಂದ ಸುತ್ತಬೇಕು. ನಂತರವೇ ದೀಪವನ್ನು ಬೆಳಗಿಸಬೇಕು.


ಸಾಯಂಕಾಲ ದೀಪವನ್ನು ದೇವರ ಮುಮದೆ ಬೆಳಗುವ ಮೊದಲು ಹೊಸ್ತಿಲಿನ ಕೊನೆಯ ಮೂಲೆಯಲ್ಲಿ ಇರುವ ಎರಡು ಮೂಲೆಗಳಲ್ಲಿ ಬೆಳಗಿಸುವ ದೀಪವನ್ನು ಇಡಬೇಕು. ದೀಪಾರಾಧನೆಯನ್ನು ಗಣಪತಿಯ ಪ್ರಾರ್ಥನೆಯಿಂದ ಶುರು ಮಾಡಿ ಆರಾಧಿಸಬೇಕು. ಪ್ರಧಾನ ದೀಪದಿಂದ ಇನ್ನೊಂದು ದೀಪವನ್ನು ಹಚ್ಚಬಾರದು. ಎಳ್ಳೆಣ್ಣೆಯಿಂದ ಬೆಳಗಿಸಿದ ದೀಪವನ್ನು ದೇವರಿಗೆ ಎಡ ಭಾಗದಲ್ಲಿ ಹಾಗೂ ಹಸುವಿನ ತುಪ್ಪದಿಂದ ಬೆಳಗಿಸಿದ ದೀಪವನ್ನು ದೇವರ ಬಲ ಭಾಗದಲ್ಲಿ ಇರುವಂತೆ ಬೆಳಗಿಸಬೇಕು.


ದೀಪಾರಾಧನೆಗಾಗಿ ಬೆಳಗಿಸುವ ಬತ್ತಿ ಆಗ್ನೇಯ ದಿಕ್ಕಿಗೆ ಮುಖವಾಗಿ ಇರಿಸಿದರೆ ಅತ್ಯಂತ ಶುಭ. ಪ್ರತಿದಿನ ಈ ನಿಯಮಗಳನ್ನು ಪಾಲಿಸಿದರೆ ಶ್ರೀ ಮಹಾಲಕ್ಷ್ಮೀ ದೇವಿಯ ಅನುಗ್ರಹ ಪಡೆದು, ಅಧಿಕ ಧನ ಪ್ರಾಪ್ತಿಯಾಗಿ ಎಲ್ಲವೂ ಶುಭವಾಗುತ್ತದೆ . ಅಂದುಕೊಂಡ ಕೋರಿಕೆಗಳು ನೆರವೇರುತ್ತವೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?