ಬೆಂಗಳೂರು : ಭಾರತೀಯ ಸಂಪ್ರದಾಯದಲ್ಲಿ ಪೂಜೆ ಪುನಸ್ಕಾರ ವ್ರತಾಚಾರಣೆಗಳಿಗೆ ಅನಾದಿ ಕಾಲದಿಂದಲೂ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಾ ಬರಲಾಗಿದೆ. ಪೂಜೆ ಮಾಡುವುದರ ಜೊತೆಗೆ ಕೆಲವರು ಒಪ್ಪತ್ತಿನ ಉಪವಾಸವನ್ನು ಕೂಡ ಮಾಡುತ್ತಾರೆ. ಆದರೆ ಶನಿವಾರದ ದಿನ ಉಪವಾಸ ಮಾಡುವುದರಿಂದ ಶನಿ ದೇವರ ಕೃಪೆಗೆ ಪಾತ್ರರಾಗಬಹುದು ಮತ್ತು ಶನಿ ದೋಷದಿಂದ ಮುಕ್ತಿ ಹೊಂದಬಹುದು.
ಈ ವ್ರತವನ್ನು ಹೇಗೆ ಮಾಡುವುದು ಎಂಬ ಮಾಹಿತಿ ಇಲ್ಲಿದೆ ನೋಡಿ
ಯಾವುದೇ ತಿಂಗಳ ಶುಕ್ಲ ಪಕ್ಷದ ಮೊದಲ ಶನಿವಾರ ಈ ವ್ರತವನ್ನು ಕೈಗೊಳ್ಳಲಾಗುತ್ತದೆ. ಸತತವಾಗಿ 11 ಅಥವಾ 51 ವಾರಗಳ ಉಪವಾಸವನ್ನು ಮಾಡುತ್ತಾರೆ
ಉಪವಾಸ ಮಾಡುವವರ ಬೆಳಗ್ಗೆ ಸ್ನಾನವನ್ನು ಮಾಡಬೇಕು ಅಂತೆಯೇ ಸ್ನಾನದ ಸಮಯದಲ್ಲಿ ಕಪ್ಪು ಇಲ್ಲವೇ ನೀಲಿ ಬಣ್ಣದ ದಿರಿಸನ್ನು ಧರಿಸಿರಬೇಕು. ಕಬ್ಬಿಣದಿಂದ ಮಾಡಿದ ಶನಿ ದೇವರನ್ನು ಪೂಜಿಸುವುದು ಶ್ರೇಯಸ್ಕರವಾಗಿದೆ. ಪೂಜೆಯ ಸಮಯದಲ್ಲಿ ಕಪ್ಪು ಅಥವಾ ನೀಲಿ ಬಣ್ಣದ ಹೂವು, ಕಪ್ಪು ಎಳ್ಳು ಮತ್ತು ಬೇಯಿಸಿದ ಅನ್ನದೊಂದಿಗೆ ಕಪ್ಪು ಬಟ್ಟೆಯನ್ನು ಶನಿ ದೇವರಿಗೆ ಅರ್ಪಿಸಲಾಗುತ್ತದೆ. ಶನಿ ದೇವರ ಮಂತ್ರ ಪಠಣೆ ಮತ್ತು ಶನಿ ದೇವರ ಕಥಾ ಮಹಿಮೆಯನ್ನು ಓದುವ ಮೂಲಕ ಪೂಜೆಯನ್ನು ಮುಗಿಸಲಾಗುತ್ತದೆ. ದಿನವಿಡೀ ಉಪವಾಸವಿದ್ದು ಸೂರ್ಯಾಸ್ತದ ನಂತರ ಎರಡು ಗಂಟೆಗಳ ಬಳಿಕ ಆಹಾರವನ್ನು ಸೇವಿಸಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ