Select Your Language

Notifications

webdunia
webdunia
webdunia
webdunia

ರೌಡಿಶೀಟರ್ ಸೈಕಲ್ ರವಿಯ ಜೊತೆಗಿನ ಸಂಬಂಧದ ಬಗ್ಗೆ ನಟ ಸಾಧುಕೋಕಿಲ ಹೇಳಿದ್ದೇನು?

ರೌಡಿಶೀಟರ್ ಸೈಕಲ್ ರವಿಯ ಜೊತೆಗಿನ ಸಂಬಂಧದ ಬಗ್ಗೆ ನಟ ಸಾಧುಕೋಕಿಲ ಹೇಳಿದ್ದೇನು?
ಬೆಂಗಳೂರು , ಶುಕ್ರವಾರ, 13 ಜುಲೈ 2018 (07:28 IST)
ಬೆಂಗಳೂರು : ಇತ್ತೀಚೆಗೆ ಪೊಲೀಸರಿಂದ ಬಂಧಿಸಲ್ಪಟ್ಟ ರೌಡಿಶೀಟರ್ ಸೈಕಲ್ ರವಿಗೂ ಸ್ಯಾಂಡಲ್ ವುಡ್ ನ ನಟ ಸಾಧುಕೋಕಿಲ ಅವರಿಗೂ ಸಂಬಂಧವಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಸ್ವತಃ ಸಾಧು ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.


ರೌಡಿಶೀಟರ್ ಸೈಕಲ್ ರವಿ ಜೊತೆ ನಟ ಸಾಧು ಕೋಕಿಲಾ ಅವರು ಸಂಪರ್ಕ ಹೊಂದಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ನಟ ಸಾಧುಕೋಕಿಲ ಅವರು ಸಿಸಿಬಿ ಪೊಲೀಸರನ್ನು ಭೇಟಿ ಮಾಡಿ ವಿಚಾರಿಸಿದ್ದರು. ಆದರೆ ಅಂದು ಮಾಧ್ಯಮಕ್ಕೆ ಈ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಅವರು ಈಗ ಈ ಬಗ್ಗೆ ಮಾತನಾಡಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.


‘ಮಾಧ್ಯಮಗಳಲ್ಲಿ ಬಂದ ವರದಿಗಳೆಲ್ಲಾ ಸುಳ್ಳು, ಭೂಗತಲೋಕದಲ್ಲಿ ಇರುವವರ ಜೊತೆ ನನಗೆ ಯಾವುದೇ ಸಂಪರ್ಕ, ಸಂಬಂಧ ಇಲ್ಲ. ನಾನು ಮಾಧ್ಯಮದ ಮುಂದೆ ಬಂದು ಇದನ್ನೆಲ್ಲಾ ಹೇಳಬಹುದಿತ್ತು. ಆದರೆ ಇದೆಲ್ಲ ಸುಳ್ಳು ಸುದ್ದಿ ಅಂತ ಈ ವಿಚಾರವನ್ನು ನಾನು ಯಾವ ಮಾಧ್ಯಮದ ಮುಂದೆಯೂ ಹೇಳಬೇಕಿಲ್ಲ.. ನಾನು ಉತ್ತರ ನೀಡಬೇಕಾಗಿರುವುದು ನಿಮಗೆ ಮಾತ್ರ. ನನ್ನ ಬೆಳಸಿದ ಅಭಿಮಾನಿಗಳಿಗೆ ಮಾತ್ರ ಎಂದು ಹೇಳಿದ್ದಾರೆ. ಈ ಮೂಲಕ ಆ ವ್ಯಕ್ತಿಗೂ ತನಗೂ ಯಾವುದೇ ಸಂಬಂಧವಿಲ್ಲ ಅಂತ ಸ್ಪಷ್ಟ ಪಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಮರ್ ಅಕ್ಬರ್ ಅಂತೋನಿ ಚಿತ್ರದಲ್ಲಿ ನಟಿಸಲು ಕಾಜಲ್ ಅಗರ್ ವಾಲ್ ಇಟ್ಟ ಬೇಡಿಕೆ ಏನು ಗೊತ್ತೇ?