Select Your Language

Notifications

webdunia
webdunia
webdunia
webdunia

ಕಚೇರಿಯ ಈ ಸ್ಥಳದಲ್ಲಿ ಇದನ್ನು ಇಟ್ಟರೆ ಅರ್ಧಕ್ಕೆ ನಿಂತ ಕೆಲಸ ಪೂರ್ಣಗೊಳ್ಳುತ್ತದೆಯಂತೆ!

ಕಚೇರಿಯ ಈ ಸ್ಥಳದಲ್ಲಿ  ಇದನ್ನು ಇಟ್ಟರೆ ಅರ್ಧಕ್ಕೆ ನಿಂತ ಕೆಲಸ ಪೂರ್ಣಗೊಳ್ಳುತ್ತದೆಯಂತೆ!
ಬೆಂಗಳೂರು , ಗುರುವಾರ, 12 ಜುಲೈ 2018 (07:17 IST)
ಬೆಂಗಳೂರು : ಹಿಂದೂ ಧರ್ಮದಲ್ಲಿ ಆನೆಯನ್ನು ತುಂಬಾ ಪವಿತ್ರ ಮತ್ತು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ಗ್ರಂಥಗಳಲ್ಲಿ ಆನೆಯನ್ನು ಧನಲಕ್ಷ್ಮಿಯ ವಾಹನವೆಂದು ನಂಬಲಾಗಿದೆ. ಆನೆಯನ್ನು ಗಣೇಶನ ಪ್ರತೀಕವೆಂದು ಪೂಜೆ ಮಾಡಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಬೆಳ್ಳಿ ಆನೆ ಮಂಗಳಕರ. ಅದು ನಕಾರಾತ್ಮಕ ಶಕ್ತಿಯನ್ನು ತೊಡೆದು ಹಾಕಿ ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸುತ್ತವೆ.


ಆದ್ದರಿಂದ ಬೆಳ್ಳಿ ಆನೆಯನ್ನು ಮನೆ ಅಥವಾ ಕಚೇರಿಯಲ್ಲಿಡುವುದ್ರಿಂದ ಎಲ್ಲ ದೋಷ ನಿವಾರಣೆಯಾಗುತ್ತದೆ. ಮನೆ, ಕಚೇರಿಯಲ್ಲಿರುವ ನಕಾರಾತ್ಮಕ ಶಕ್ತಿ ನಾಶವಾಗಿ ಲಕ್ಷ್ಮಿ ಅನುಗ್ರಹ ಪ್ರಾಪ್ತವಾಗುತ್ತದೆ. ಬೆಳ್ಳಿ ಆನೆಯನ್ನು ಮನೆ ಅಥವಾ ಕಚೇರಿ ಟೇಬಲ್ ಮೇಲಿಟ್ಟರೆ ಅರ್ಧಕ್ಕೆ ನಿಂತ ಕೆಲಸ ಪೂರ್ಣಗೊಳ್ಳುತ್ತದೆ. ಬೆಳ್ಳಿ ಆನೆಯನ್ನು ಉತ್ತರ ದಿಕ್ಕಿನಲ್ಲಿಡುವುದು ಶುಭಕರ.
ಹಾಗೇ ಇದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಕಪಾಟಿನಲ್ಲಿಡುವುದು ಒಳ್ಳೆಯದೆಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ದಾಂಪತ್ಯದಲ್ಲಿ ವಿರಸ ಮೂಡಿದ್ದರೆ ಬೆಳ್ಳಿ ಆನೆಯನ್ನು ಮಲಗುವ ಕೋಣೆಯ ಉತ್ತರ ದಿಕ್ಕಿಗೆ ಇಡಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಲಿಗೆ ಚಿನ್ನದ ಆಭರಣ ಧರಿಸುವವರು ಈ ದೇವರ ಕೋಪಕ್ಕೆ ಗುರಿಯಾಗುತ್ತಾರೆ ಎಚ್ಚರಿಕೆ!