Publish Date: Wed, 01 Jan 2020 (09:15 IST)
Updated Date: Wed, 01 Jan 2020 (09:18 IST)
ಬೆಂಗಳೂರು : ಎಲ್ಲರಿಗೂ ಕೋಟ್ಯಾಧಿಪತಿಯಾಗಬೇಕೆಂಬ ಆಸೆ ಇರುತ್ತದೆ. ಆದಕಾರಣ ಅಂತವರು ತಾವು ಹುಟ್ಟಿದ ರಾಶಿಯ ಪ್ರಕಾರ ಪರಿಹಾರವನ್ನು ಮಾಡಬೇಕು. ಹಾಗಾದ್ರೆ ತುಲಾ ರಾಶಿಯಲ್ಲಿ ಹುಟ್ಟಿದವರು ಬೇಗ ಶ್ರೀಮಂತರಾಗಲು ಹೀಗೆ ಮಾಡಿ.
ತುಲಾರಾಶಿಯಲ್ಲಿ ಹುಟ್ಟಿದವರು ಪೂರ್ವದಿಕ್ಕಿನಲ್ಲಿರುವ ಮನೆಯಲ್ಲಿ ವಾಸಿಸಬೇಕು. ಮಂಗಳವಾರದಂದು ನೀವು ಒಂದು ಕೆಂಪು ವಸ್ತ್ರದಲ್ಲಿ ಒಂದು ರೂಪಾಯಿ ನಾಣ್ಯವನ್ನು ಹಾಕಿ ಗಂಟು ಕಟ್ಟಿ ದೇವರ ಮನೆಯಲ್ಲಿಡಬೇಕು. ನಿಮಗೆ ಹಣ ಬಂದ ಸಮಯದಲ್ಲಿ ಅದನ್ನುತೆಗೆದುಕೊಂಡು ಹೋಗಿ ಆಂಜನೇಯಸ್ವಾಮಿ ದೇವಾಲಯದ ಹುಂಡಿಯಲ್ಲಿ ಹಾಕಬೇಕು. ಇದರಿಂದ ನಿಮಗೆ ಅಖಂಡ ಐಶ್ವರ್ಯ ಪ್ರಾಪ್ತಿಯಾಗುತ್ತದೆ.
ಹಾಗೇ ಈ ರಾಶಿಯವರು ಆಕಸ್ಮಿಕ ಧನಪ್ರಾಪ್ತಿಯಾಗಲು ಪ್ರತಿ ಶುಕ್ರವಾರದಂದು ಅಕ್ಕಿಹಿಟ್ಟು, ಬೆಲ್ಲ, ಮತ್ತು ತುಪ್ಪದಿಂದ ದೀಪವನ್ನು ಹಚ್ಚಿ ಮುಖ್ಯದ್ವಾರದ ಬಳಿ ಸಂಧ್ಯಾಕಾಲದಲ್ಲಿ ಇಡಬೇಕು.