Publish Date: Tue, 31 Dec 2019 (10:55 IST)
Updated Date: Tue, 31 Dec 2019 (10:56 IST)
ಬೆಂಗಳೂರು : ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ವಿನೂತನ ಟಾಸ್ಕ್ ವೊಂದನ್ನು ನೀಡಿದ್ದು, ತಮ್ಮ ಮನೆಯಲ್ಲಿನ ಹಸಿ ತ್ಯಾಜ್ಯವನ್ನು ಸಂಸ್ಕರಿಸಿ ಗೊಬ್ಬರ ಮಾಡಲು ಆದೇಶಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಸಿಸುವ ನೌಕರರು, ಅಧಿಕಾರಿಗಳಿಗೆ ತಮ್ಮ ಮನೆಯಲ್ಲಿನ ಹಸಿ ತ್ಯಾಜ್ಯವನ್ನು ಆಯಾ ಕಚೇರಿಗಳಲ್ಲಿ ಸಂಸ್ಕರಿಸಿ ಗೊಬ್ಬರ ಮಾಡಬೇಕು ಎಂದು ನಗರಾಭಿವೃದ್ಧಿ ಇಲಾಖೆಯಿಂದ ಸರ್ಕಾರಿ ಅಧಿಕಾರಿಗಳಿಗೆ ಫರ್ಮಾನು ಮಾಡಿದೆ.
ಅಲ್ಲದೇ ಸರ್ಕಾರಿ ನೌಕರರು ಆದೇಶ ಪಾಲಿಸಿರುವ ಬಗ್ಗೆ ವರದಿ ನೀಡಲು ಸೂಚನೆ ನೀಡಿದೆ ಎನ್ನಲಾಗಿದೆ.