Select Your Language

Notifications

webdunia
webdunia
webdunia
webdunia

ಬೇರೆಯವರ ಈ ವಸ್ತುಗಳನ್ನು ಯಾವ ಕಾರಣಕ್ಕೂ ಬಳಸಬೇಡಿ

ಬೇರೆಯವರ ಈ ವಸ್ತುಗಳನ್ನು ಯಾವ ಕಾರಣಕ್ಕೂ ಬಳಸಬೇಡಿ
ಬೆಂಗಳೂರು , ಶನಿವಾರ, 23 ಡಿಸೆಂಬರ್ 2017 (11:10 IST)
ಬೆಂಗಳೂರು: ಕೆಲವರಿಗೆ ಬೇರೆಯವರ ವಸ್ತುಗಳನ್ನು ತೊಡುವ ಅಭ್ಯಾಸವಿರುತ್ತದೆ. ಅವರಿಗೆ ತಮ್ಮ ಬಳಿ ಇರುವ ವಸ್ತುಗಳು ಹಿಡಿಸೋದೆ ಇಲ್ಲ. ಆದರೆ ಬೇರೆಯವರ ವಸ್ತುಗಳನ್ನು ನೋಡಿ ಆಸೆಯಾಗಿ ಅದನ್ನು ಒಂದು ಬಾರಿಯಾದರೂ ಉಪಯೋಗಿಸಬೇಕು ಅಂತ ಅನಿಸುತ್ತದೆ. ಬೇರೆಯವರ ವಸ್ತುಗಳನ್ನು ಬಳಸಿದರೆ ನಕರಾತ್ಮಕ ಪರಿಣಾಮ ಬೀರುತ್ತದೆ ಹಾಗೆ ಅನೇಕ ತೊಂದರೆ, ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ.


ಬೇರೆಯವರು ಮಲಗಿದ ಮಂಚದ ಮೇಲೆ ಮಲಗಬಾರದು. ಇದು ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಹಾಗೆ ಇತರರ ಬಟ್ಟೆ ಅಥವಾ ಚಪ್ಪಲಿ ಎಷ್ಟೆ ಚೆನ್ನಾಗಿದ್ದರೂ ಅದನ್ನು ಧರಿಸಬಾರದು. ಇದರಿಂದ ಬೇರೆಯವರ ದುರಾದೃಷ್ಟ ನಮ್ಮ ಹಿಂದೆ ಬರುತ್ತದೆ. ಬೇರೆಯವರ ಹಣವನ್ನು ಅನ್ಯಾಯದ ದಾರಿಯಲ್ಲಿ ಪಡೆಯಬಾರದು.ಇದರ ಬಗ್ಗೆ ಮಹಾಭಾರತದ ವಿಧುರನೀತಿಯಲ್ಲಿ ಪ್ರಸ್ತಾಪವಾಗಿದೆ. ಬೇರೆಯವರ ಹಣಕ್ಕೆ ಆಸೆ ಪಡುವವರು ನೆಮ್ಮದಿಯಾಗಿ ನಿದ್ದೆ ಮಾಡುವುದಿಲ್ಲ.


ಬೇರೆಯವರ ಲೇಖನಿಗಳನ್ನು ಬಳಸಬಾರದು. ಅದರಬದಲು ತಮ್ಮದೇ ಆದ ಲೇಖನಿಗಳನ್ನು ಉಪಯೋಗಿಸುವುದು ಉತ್ತಮ. ಹಾಗೆ ಬೇರೆಯವರ ಕೈಗಡಿಯಾರಗಳನ್ನು ಬಳಸಬಾರದು.ಇದರಿಂದ ಅವರಿಗಿರುವ ಕೆಟ್ಟ ಸಮಯ ನಮಗೆ ಬರುತ್ತದೆ ಹಾಗೆ ನಮ್ಮ ಕೆಲಸ ಕಾರ್ಯಗಳು ಕೆಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯ ಬಗ್ಗೆ ಇಂತಹದೆಲ್ಲಾ ಮೂಢನಂಬಿಕೆಗಳಿವೆಯಂತೆ!