Select Your Language

Notifications

webdunia
webdunia
webdunia
webdunia

ದೇವರಿಗೆ ಎದುರಾಗಿ ನಿಂತು ನಮಸ್ಕಾರ ಮಾಡಬಾರದು ಯಾಕೆ ಗೊತ್ತಾ?

ದೇವರಿಗೆ ಎದುರಾಗಿ ನಿಂತು ನಮಸ್ಕಾರ ಮಾಡಬಾರದು ಯಾಕೆ ಗೊತ್ತಾ?
ಬೆಂಗಳೂರು , ಸೋಮವಾರ, 25 ಡಿಸೆಂಬರ್ 2017 (07:20 IST)
ಬೆಂಗಳೂರು: ಸಾಮಾನ್ಯವಾಗಿ ಎಲ್ಲರೂ ದೇವಸ್ಥಾನಕ್ಕೆ ಹೋಗುತ್ತಿರುತ್ತಾರೆ. ಕೆಲವರು ವಾರಕ್ಕೊಮ್ಮೆ ಅಥವಾ ವಿಶೇಷ ದಿನಗಳಲ್ಲಿ ದೇವಸ್ಥಾನಕ್ಕೆ ಭೇಟಿ  ನೀಡುತ್ತಿರುತ್ತಾರೆ. ಆದರೆ ಹೇಗೆ ನಿಂತು ದೇವರಿಗೆ ನಮಸ್ಕರಿಸಬೇಕು ಎಂಬುದು ಹೆಚ್ಚಿನವರಿಗೆ ಗೊತ್ತಿರಲ್ಲ. ದೇವರಿಗೆ ಎದುರಾಗಿ ನಿಂತು ನಮಸ್ಕಾರ ಮಾಡಬಾರದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಆದರೆ ಹಾಗೆ ಮಾಡಿದರೆ ಏನಾಗುತ್ತದೆ ಎಂಬ ಸಂದೇಹ ಬಹಳಷ್ಟು  ಮಂದಿಯನ್ನು ಕಾಡಿರುತ್ತದೆ.

 
ದೇವಸ್ಥಾನಕ್ಕೆ ಹೋದಾಗ ದೇವರಿಗೆ ಒಂದು ಬದಿಯಲ್ಲಿ ನಿಂತು ನಮಸ್ಕರಿಸಬೇಕು. ಸ್ವಾಮಿ ಹಾಗು ಸ್ವಾಮಿಗೆ ಎದುರಾಗಿ ಇರುವ ವಾಹನದ ಪ್ರತಿಮೆಯ ನಡುವೆ ನಿಲ್ಲಬಾರದು. ಏಕೆಂದರೆ ಪ್ರಾಣ ಪ್ರತಿಷ್ಠೆ ಮಾಡುವ ಕ್ರಮದಲ್ಲಿ ಅದೆಷ್ಟೊ ಶಕ್ತಿಗಳನ್ನು ಸ್ವಾಮಿ ತನ್ನ ವಾಹನದ ಪ್ರತಿಮೆಗೆ ಆಹ್ವಾನಿಸುತ್ತಿರುತ್ತಾರೆ. ಆ ಶಕ್ತಿಯನ್ನು ನಮಗೆ ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ದೇವರಿಗೆ ಎದುರಾಗಿ ನಿಂತು ನಮಸ್ಕರಿಸಬಾರದು. ಆದರೆ ಇದು ಶನಿ ದೇವಾಲಯಕ್ಕೆ ಮಾತ್ರ ಅನ್ವಯಿಸುವುದಿಲ್ಲ. ಶನೇಶ್ವರನನ್ನು ಎದುರಾಗಿ ನಿಂತು ನಮಸ್ಕರಿಸಬೇಕು ಎಂದು ಜ್ಯೋತಿಷ್ಯರು ಹೇಳುತ್ತಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆರ್ಥಿಕ ವೃದ್ಧಿಗೆ ವಾಸ್ತು ಟಿಪ್ಸ್