Select Your Language

Notifications

webdunia
webdunia
webdunia
webdunia

ದೀಪಾವಳಿ ದಿನ ಈ ಕೆಲಸಗಳನ್ನು ತಪ್ಪಿಯೂ ಮಾಡಬೇಡಿ

Deepawali

Krishnaveni K

ಬೆಂಗಳೂರು , ಮಂಗಳವಾರ, 21 ಅಕ್ಟೋಬರ್ 2025 (08:45 IST)
ದೀಪಾವಳಿ ಹಬ್ಬ ಇಂದಿನಿಂದ ಶುರುವಾಗಿದ್ದು ಮೂರು ದಿನಗಳ ಕಾಲ ಲಕ್ಷ್ಮೀ ದೇವಿಯ ಆರಾಧನೆ ನಡೆಯಲಿದೆ. ಹೀಗಾಗಿ ಲಕ್ಷ್ಮೀ ಕೃಪಾಕಟಾಕ್ಷ ಸಿಗಬೇಕಾದರೆ ದೀಪಾವಳಿ ದಿನ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ.

ಬೆಳಿಗ್ಗೆ ತಡವಾಗಿ ಏಳುವುದು: ದೀಪಾವಳಿ ಹಬ್ಬದ ದಿನ ಬೆಳಿಗ್ಗೆ ಬೇಗನೇ ಎದ್ದು ಸ್ನಾನ ಮುಗಿಸಿ ಮನೆಯನ್ನು ಒಪ್ಪ ಮಾಡಿಟ್ಟುಕೊಳ್ಳಬೇಕು. ಅದರಲ್ಲೂ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದರೆ ಉತ್ತಮ.

ಸಂಜೆ ಹೊತ್ತು ಮಲಗಬೇಡಿ: ಮುಸ್ಸಂಜೆ ಹೊತ್ತು ಮನೆಗೆ ಲಕ್ಷ್ಮೀ ಬರುವ ಸಮಯ ಎಂಬ ನಂಬಿಕೆಯಿದೆ. ಈ ಸಮಯದಲ್ಲಿ ಮಲಗುವುದು ಶುಭವಲ್ಲ.

ಮನೆಯಲ್ಲಿ ಕಸ, ಕೊಳೆ ಇರದಂತೆ ನೋಡಿ: ಮನೆಯಲ್ಲಿ ಕಸ, ಕೊಳೆ ಇರದಂತೆ ನೋಡಿಕೊಳ್ಳಿ. ಲಕ್ಷ್ಮೀ ಬರುವ ಸಮಯದಲ್ಲಿ ಮನೆ ಶುಚಿಯಾಗಿರಬೇಕು.

ಕಲಹ, ಹಿರಿಯರಿಗೆ ಅಗೌರವ: ದೀಪಾವಳಿ ಸಂದರ್ಭದಲ್ಲಿ ಜಗಳವಾಡುವುದು, ಹಿರಿಯರಿಗೆ ಅಗೌರವ ತೋರುವುದು ಮಾಡಬೇಡಿ. ಇದರಿಂದ ಲಕ್ಷ್ಮೀ ದೇವಿ ಮುನಿಸಿಕೊಳ್ಳುತ್ತಾಳೆ.

ಮಾಂಸಾಹಾರ ಬೇಡ: ದೀಪಾವಳಿ ಹಬ್ಬ ಪವಿತ್ರವಾದ ದಿನವಾಗಿದ್ದು ಈ ದಿನಗಳಲ್ಲಿ ಮಾಂಸಾಹಾರವನ್ನು ಮಾಡಬೇಡಿ.

ಹಣಕಾಸಿನ ವ್ಯವಹಾರ ಬೇಡ: ದೀಪಾವಳಿ ಸಂದರ್ಭದಲ್ಲಿ ಸಾಲ ನೀಡುವುದು, ಸಾಲ ಪಡೆಯುವುದು ಇತ್ಯಾದಿ ಹಣಕಾಸಿನ ವ್ಯವಹಾರ ಮಾಡಬೇಡಿ.


Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರಂ ತಪ್ಪದೇ ಓದಿ