Publish Date: Sat, 24 Aug 2019 (09:08 IST)
Updated Date: Sat, 24 Aug 2019 (09:12 IST)
ಬೆಂಗಳೂರು : ಶನಿವಾರದಂದು ಕೆಲವು ವಸ್ತುಗಳನ್ನು ಮನೆಗೆ ತರುವುದು ಶುಭವಲ್ಲ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಆ ವಸ್ತುಗಳು ಯಾವುವು ಎಂದು ತಿಳಿಯೋಣ.
ಶನಿವಾರದಂದು ಬದನೆಕಾಯಿಯನ್ನು ಕೊಂಡುಕೊಂಡು ಮನೆಗೆ ತರಬಾರದು ಹಾಗೆ ತಿನ್ನಲೂ ಬಾರದು. ಕಾಳು ಮೆಣಸನ್ನು ಸಹ ಶನಿವಾರದಂದು ಕೊಂಡುಕೊಳ್ಳಬಾರದು ಹಾಗೆ ಮನೆಗೆ ತರಬಾರದು , ತಿನ್ನಲುಬಾರದು. ಉಪ್ಪನ್ನು ಕೂಡ ಶನಿವಾರದಂದು ಮನೆಗೆ ಕೊಂಡುಕೊಂಡು ತರಬಾರದು. ಅಂದು ಉಪ್ಪು ಇಲ್ಲದ ಆಹಾರ ಸೇವನೆ ಮಾಡಿದರೆ ಒಳ್ಳೆಯದು. ಉಪ್ಪನ್ನು ಶನಿವಾರದ ದಿನ ಯಾವುದಾದರೂ ದೇವಸ್ಥಾನಕ್ಕೆ ದಾನ ಮಾಡಿದರೆ ಓಳ್ಳೆಯದು.
ಕಬ್ಬಿಣ ಹಾಗೂ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಶನಿವಾರದ ದಿನ ಕೊಂಡುಕೊಳ್ಳ ಬಾರದು ಹಾಗೂ ಮನೆಗೆ ತರಲೇ ಬಾರದು. ಬೇಳೆಯೂ ಸಹ ಶನಿದೇವನಿಗೆ ಸಭಂಧಪಟ್ಟದ್ದು ಅದ್ದರಿಂದ ಬೇಳೆಯನ್ನು ಶನಿವಾರ ಕೊಂಡು ಕೊಳ್ಳಬಾರದು. ಇದರ ಬದಲು ಬಡವರಿಗೆ ದಾನ ಮಾಡುವುದರಿಂದ ಸಾಕಷ್ಟು ಒಳ್ಳೆಯದಾಗುತ್ತೆ.
ಶನಿವಾರ ಸಾಸಿವೆ ಮತ್ತು ಸಾಸಿವೆ ಎಣ್ಣೆಯನ್ನು ಕೊಂಡುಕೊಳ್ಳಬಾರದು. ಇದರ ಬದಲು ಬಡವರಿಗೆ ದಾನ ಮಾಡಬೇಕು. ಶನಿವಾರದಂದು ಮರದಿಂದ ಮಾಡುವ ಪೀಠೋಪಕರಣಗಳನ್ನು ಮನೆಗೆ ತರಬಾರದು.