Select Your Language

Notifications

webdunia
webdunia
webdunia
webdunia

ದೀಪಾವಳಿಗೆ ಯಾವ ರಾಶಿಯವರು ಯಾವ ವಸ್ತುಗಳನ್ನು ದಾನ ಮಾಡಬೇಕು

Arathi

Krishnaveni K

ಬೆಂಗಳೂರು , ಬುಧವಾರ, 15 ಅಕ್ಟೋಬರ್ 2025 (08:32 IST)
ದೀಪಾವಳಿ ಸಮೃದ್ಧಿ, ಐಶ್ವರ್ಯದ ಸಂಕೇತದ ಹಬ್ಬವಾಗಿದೆ. ಈ ಹಬ್ಬದ ಸಂದರ್ಭದಲ್ಲಿ ಯಾವ ರಾಶಿಯವರು ಏನು ದಾನ ಮಾಡಿದರೆ ಶ್ರೇಷ್ಠ ಎಂಬ ವಿವರ ಇಲ್ಲಿದೆ ನೋಡಿ.

ಆಯಾ ರಾಶಿಗಳ ಗ್ರಹಗಳಿಗೆ ಅನುಗುಣವಾಗಿ ಒಂದೊಂದು ವಸ್ತುಗಳನ್ನು ದಾನ ಮಾಡುವುದರಿಂದ ಪಾಪಗಳು ಪರಿಹಾರವಾಗುವುದು. ಇದರಿಂದ ಮನೆಯಲ್ಲಿ ಲಕ್ಷ್ಮೀ ಸಾನಿಧ್ಯ ಬರುವುದು ಎಂಬ ನಂಬಿಕೆಯಿದೆ.

ಮೇಷ: ಬೆಲ್ಲ, ಕೆಂಪು ವಸ್ತ್ರ, ಹೆಸರು ಬೇಳೆ ಅಥವಾ ದೇವಾಲಯಕ್ಕೆ ಕಸಬರಿಕೆ ದಾನ ಮಾಡಬಹುದು.
ವೃಷಭ: ಅಕ್ಕಿ, ಸಕ್ಕರೆ, ಮೊಸರು, ಅನ್ನದಾನ ಮಾಡುವುದು ಶ್ರೇಷ್ಠವಾಗಿದೆ.
ಮಿಥುನ: ಪಚ್ಚೆ ಹೆಸರು ಕಾಳು, ಹಸಿರು ಬಣ್ಣದ ಬಟ್ಟೆ, ಗೋ ಗ್ರಾಸ ನೀಡಿದರೆ ಉತ್ತಮ.
ಕರ್ಕಟಕ: ಹಾಲು, ಅಕ್ಕಿ, ಸಿಹಿ ತಿನಿಸು ಅಥವಾ ಜಲ ದಾನ ಮಾಡಿ.
ಸಿಂಹ: ಗೋಧಿ, ಬೆಲ್ಲ, ಹಳದಿ ಬಣ್ಣದ ಸಿಹಿ ತಿನಿಸು ಅಥವಾ ವಸ್ತ್ರದಾನ
ಕನ್ಯಾ: ಹಸಿರು ತರಕಾರಿಗಳು, ಬ್ರಾಹ್ಮಣರಿಗೆ ಸಿಹಿ ಭೋಜನ, ಧಾನ್ಯ ದಾನ.
ತುಲಾ: ಪುಸ್ತಕ, ಮೊಸರು, ವಸ್ತ್ರದಾನ, ಅನ್ನದಾನ ಮಾಡುವುದು ಉತ್ತಮ.
ವೃಶ್ಚಿಕ: ಬೆಲ್ಲ, ಚನ್ನಾ ದಾಲ್, ಶಿವ ದೇವಾಲಯಕ್ಕೆ ಜೇನು ತುಪ್ಪ ನೀಡುವುದು ಉತ್ತಮ.
ಧನು: ಹಳದಿ ಬಟ್ಟೆ, ಅರಿಶಿನ, ಕಬ್ಬಿಣದಿಂದ ಮಾಡಿದಂತಹ ವಸ್ತುಗಳನ್ನು ದಾನ ಮಾಡಿ.
ಮಕರ: ಕಪ್ಪು ಉದ್ದಿನ ಬೇಳೆ, ಹೊದಿಕೆ, ಎಳ್ಳೆಣ್ಣೆ, ಎಳ್ಳು ದಾನ ಮಾಡಿ.
ಕುಂಭ: ಕಪ್ಪು ಉದ್ದಿನ ಬೇಳೆ, ಹೊದಿಕೆ, ಎಳ್ಳೆಣ್ಣೆ, ದೇವಿ ದೇವಸ್ಥಾನಕ್ಕೆ ಕೆಂಪು ಬಟ್ಟೆ ದಾನ.
ಮೀನ: ಅರಿಶಿನ, ಕಡಲೆಹಿಟ್ಟು, ನೀರು, ಹಳದಿ ಬಣ್ಣದ ಸಿಹಿತಿನಿಸು.

Share this Story:

Follow Webdunia kannada

ಮುಂದಿನ ಸುದ್ದಿ

ಸಂಕಷ್ಟ ನಿವಾರಣೆಗೆ ಉಚ್ಛಿಷ್ಟ ಗಣಪತಿ ಸ್ತೋತ್ರ