Select Your Language

Notifications

webdunia
webdunia
webdunia
webdunia

ಮಕ್ಕಳು ಶಿವನ ಈ ಮೂರು ಮಂತ್ರಗಳನ್ನು ಜಪಿಸುವುದು ಉತ್ತಮ

Astrology

Krishnaveni K

ಬೆಂಗಳೂರು , ಸೋಮವಾರ, 9 ಡಿಸೆಂಬರ್ 2024 (08:40 IST)
ಬೆಂಗಳೂರು: ಇಂದು ಸೋಮವಾರವಾಗಿದ್ದು ಶಿವನಿಗೆ ವಿಶೇಷವಾದ ದಿನವಾಗಿದೆ. ಶಿವನು ಆರೋಗ್ಯ, ಧೈರ್ಯ, ಶಕ್ತಿ ನೀಡುವ ದೇವರಾಗಿದ್ದು, ಆತನನ್ನು ಕುರಿತು ಮಕ್ಕಳು ಈ ಮೂರು ಸ್ತೋತ್ರಗಳನ್ನು ಪಠಿಸುವುದು ತುಂಬಾ ಉತ್ತಮ.

ಮಕ್ಕಳು ಶಿವನ ಕುರಿತಾಗಿ ಮೂರು ಮಂತ್ರಗಳನ್ನು ಪಠಿಸಿದರೆ ಅವರ ಜೀವನದಲ್ಲಿ ಯಶಸ್ಸು, ಉತ್ತಮ ಆರೋಗ್ಯ ಮತ್ತು ಸರಿಯಾದ ದಿಕ್ಕಿನಲ್ಲಿ ಸಾಗುವ ಸೂತ್ರವನ್ನು ಆ ಶಿವನು ಕರುಣಿಸುತ್ತಾನೆ ಎಂಬುದು ನಂಬಿಕೆ. ಜೊತೆಗೆ ಈ ಮಂತ್ರಗಳನ್ನು ಮಾನಸಿಕವಾಗಿ ನೆಮ್ಮದಿ ಮತ್ತು ಶಕ್ತಿಯನ್ನು ಕೊಡುತ್ತವೆ.

ಮಹಾಮೃತ್ಯುಂಜಯ ಮಂತ್ರ
ಉತ್ತಮ ಆರೋಗ್ಯಕ್ಕಾಗಿ ಯಾರು ಬೇಕಾದರೂ ಹೇಳಬಹುದಾದ ಮಹಾಮೃತ್ಯುಂಜಯ ಮಂತ್ರವನ್ನು ಮಕ್ಕಳಿಗೆ ಪ್ರತಿನಿತ್ಯ ಪಠಿಸಲು ಹೇಳಿ. ದಿನಕ್ಕೆ 108 ಬಾರಿ ಇದನ್ನು ಪಠಿಸುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ.

ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿ ವರ್ಧನಂ
ಉರ್ವಾ ರುಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯಮಾಮೃತಾತ್

ಶಿವನ ಮೂಲ ಮಂತ್ರ
ಶಿವನ ಮೂಲ ಮಂತ್ರವಾಗಿರುವ ‘ಓಂ ನಮಃ ಶಿವಾಯ’ ಎನ್ನುವ ಮಂತ್ರವನ್ನು ಪ್ರತಿನಿತ್ಯ 108 ಬಾರಿ ಜಪಿಸಿ. ಮಕ್ಕಳಲ್ಲಿ ಹಠಮಾರಿತನ ಸ್ವಭಾವ ಮರೆಯಾಗಿ ತಂದೆ, ತಾಯಿಗಳಿಗೆ ವಿಧೇಯರಾಗಿ ಶಾಂತ ಚಿತ್ತರಾಗುತ್ತಾರೆ.

ರುದ್ರ ಮಂತ್ರ
ಓಂ ನಮೋಭಗವತೇ ರುದ್ರಾಯ ಎನ್ನುವ ಶಿವನ ರುದ್ರ ಮಂತ್ರವನ್ನು ಪಠಿಸುವುದರಿಂದ ಮಕ್ಕಳು ಜೀವನದಲ್ಲಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಾರೆ. ಋಣಾತ್ಮಕ ಮತ್ತು ಕೆಟ್ಟ ಸಂಗಗಳನ್ನು ಮಾಡುವುದಿಲ್ಲ. ಈ ಮಂತ್ರವು ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?