ಪುರುಷರು ವರಮಹಾಲಕ್ಷ್ಮಿ ವ್ರತ ಮಾಡಬಹುದೇ

Krishnaveni K
ಶುಕ್ರವಾರ, 16 ಆಗಸ್ಟ್ 2024 (08:45 IST)
ಬೆಂಗಳೂರು: ಇಂದು ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮದಿಂದ ಅಚರಿಸಲಾಗುತ್ತಿದ್ದು, ಇದನ್ನು ಹೆಂಗಳೆಯರ ಹಬ್ಬವೆಂದೇ ಪರಿಗಣಿಸಲಾಗುತ್ತದೆ. ಆದರೆ ವರಮಹಾಲಕ್ಷ್ಮಿ ಹಬ್ಬದ ವ್ರತವನ್ನು ಪುರುಷರು ಮಾಡಬಾರದೇ?

ವರಮಹಾಲಕ್ಷ್ಮಿ ಹಬ್ಬ ಶ್ರಾವಣ ಮಾಸದ ಮೊದಲ ಅದ್ಧೂರಿ ಹಬ್ಬ. ಇದಕ್ಕೆ ಮೊದಲು ನಾಗರಪಂಚಮಿ, ಭೀಮನ ಅಮವಾಸ್ಯೆ ಬಂದರೂ ಅದು ಚಿಕ್ಕದಾಗಿ ಬಂದು ಹೋಗುತ್ತದೆ. ಆದರೆ ಶ್ರಾವಣ ಮಾಸದ ಪ್ರಮುಖ ಹಬ್ಬವೆಂದರೆ ವರಮಹಾಲಕ್ಷ್ಮಿ ಹಬ್ಬ ಎಂದೇ ಜನಜನಿತವಾಗಿದೆ.

ವರಮಹಾಲಕ್ಷ್ಮಿ ಹಬ್ಬದಲ್ಲಿ ಲಕ್ಷ್ಮೀ ದೇವಿಯ ಆರಾಧನೆ ಮಾಡಲಾಗುತ್ತದೆ. ಲಕ್ಷ್ಮೀ ದೇವಿಯ ಪ್ರಿಯವಾದ ಶುಕ್ರವಾರದಂದೇ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಮುಖ್ಯವಾಗಿ ಉಪವಾಸ ವ್ರತ ಮಾಡಿ ಲಕ್ಷ್ಮೀ ದೇವಿಯ ಕಲಶವಿಟ್ಟು ಪೂಜೆ ಮಾಡುವುದು ರೂಢಿ.

ಹಾಗಾದರೆ ವರಮಹಾಲಕ್ಷ್ಮಿ ಹಬ್ಬ ಮಹಿಳೆಯರಿಗೆ ಮಾತ್ರವೇ ಸೀಮಿತವೇ? ಸಾಮಾನ್ಯವಾಗಿ ವರಮಹಾಲಕ್ಷ್ಮಿ ಹಬ್ಬದಲ್ಲಿ ಮಹಿಳೆಯರೇ ಲಕ್ಷ್ಮೀ ದೇವಿಯ ಪೂಜೆ ಮಾಡುತ್ತಾರೆ. ಹಾಗಂತ ಇದು ಕೇವಲ ಮಹಿಳೆಯರಿಗೆ ಸೀಮಿತವಾದ ಹಬ್ಬ ಎಂದರ್ಥವಲ್ಲ. ಈ ಹಬ್ಬದಲ್ಲಿ ಪುರುಷರೂ ಉಪವಾಸ ವ್ರತ ಮಾಡಿ ಲಕ್ಷ್ಮೀ ದೇವಿಯ ಪೂಜೆ ಮಾಡಬಹುದಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸೋಮವಾರ ಶಿವ ಆರತಿ ಸ್ತೋತ್ರವನ್ನು ಓದಿ

ಸೂರ್ಯ ಮಂಡಲ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಶನಿ ಅಷ್ಟೋತ್ತರ ಶತನಾಮ ಸ್ತೋತ್ರ ತಪ್ಪದೇ ಓದಿ

ಮಹೇಂದ್ರ ಕೃತ ಶ್ರೀ ಮನಸಾ ದೇವಿ ಸ್ತೋತ್ರಂ

ನರಸಿಂಹ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments