ಬೆಂಗಳೂರು: ದೀಪಾವಳಿ ಹಬ್ಬದ ಮುಗಿದ ಬಳಿಕ ಬರುವ ಉತ್ಥಾನ ದ್ವಾದಶಿಯಂದು ಭಕ್ತಿಯಿಂದ ತುಳಸಿ ಹಬ್ಬ ಮಾಡುವುದು ವಾಡಿಕೆ.
ಸಂಜೆ ಹೊತ್ತು ದೀಪ ಹಚ್ಚಿ, ತುಳಸಿಗೆ ಪೂಜೆ ಮಾಡಿದರೆ ಶ್ರೇಷ್ಠ. ಜೊತೆಗೆ ಇಂದು ವಿಷ್ಣು ದೇವರ ಪೂಜೆ ಮಾಡದೇ ಹೋದರೆ ಜೀವನದಲ್ಲಿ ಸಂಕಷ್ಟಗಳು ಗ್ಯಾರಂಟಿ ಎಂದು ಆಸ್ತಿಕರು ನಂಬುತ್ತಾರೆ. ಇಂದು ವಿಷ್ಣು ಪೂಜೆ ಮಾಡಿದಲ್ಲಿ ಸಕಲ ದೋಷಗಳೂ ಪರಿಹಾರವಾಗಿ ಜೀವನದಲ್ಲಿ ಸಮೃದ್ಧಿ ಉಂಟಾಗುತ್ತದೆ.
ಕಾರ್ತಿಕ ಮಾಸದ ಬರುವ ಉತ್ಥಾನ ದ್ವಾದಶಿಯಂದು ತುಳಸಿ ಪೂಜೆ ಮಾಡಿದರೆ ಜನ್ಮಜನ್ಮಾಂತರದ ಪಾಪ ನಾಶವಾಗುವುದು ಎಂಬ ನಂಬಿಕೆಯಿದೆ. ಇಂದಿನ ದಿನ ವ್ರತ ಆಚರಿಸುವುದು ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಶ್ರೇಯಸ್ಕರ. ದ್ವಾದಶ ನಾಮಗಳಿಂದ ತುಳಸಿ ಪೂಜೆ ಮಾಡಿ, ಅರಶಿನ, ಕುಂಕುಮದಿಂದ ಅರ್ಚನೆ ಮಾಡಿದರೆ ಉತ್ತಮ.
ಈ ದಿನ ತುಳಸಿ-ದಾಮೋದರ ವಿವಾಹ ಮಾಡುವುದರಿಂದ ಹೆಣ್ಣು ಮಕ್ಕಳಿಗೆ ಸಕಲ ಸೌಭಾಗ್ಯ ದೊರೆಯುತ್ತದೆ. ತುಳಸಿ ಶ್ರೀಕೃಷ್ಣನಿಗೂ ಅತ್ಯಂತ ಪ್ರಿಯವಾದ ಹೂ. ಹೀಗಾಗಿ ತುಳಸಿ ಮತ್ತು ಕೃಷ್ಣ ಅಥವಾ ಮಹಾವಿಷ್ಣುವಿನ ಆರಾಧನೆ ಇಂದಿನ ದಿನದ ವಿಶೇಷವಾಗಿದೆ.