Select Your Language

Notifications

webdunia
webdunia
webdunia
webdunia

ಬೆಂಗಳೂರಿನ ಮೋಡ ಕವಿದ ವಾತಾವರಣಕ್ಕೆ ಶೀತ, ಗಂಟಲು ನೋವು ಜೋರು: ಹೀಗೆ ಎಚ್ಚರಿಕೆ ವಹಿಸಿ

Bangalore rain

Krishnaveni K

ಬೆಂಗಳೂರು , ಮಂಗಳವಾರ, 26 ನವೆಂಬರ್ 2024 (09:00 IST)
ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಒಂದು ರೀತಿಯ ಮೋಡ ಕವಿದ ವಾತಾವರಣವಿದೆ. ಇದರಿಂದಾಗಿ ಶೀತ ಸಂಬಂಧೀ ಆರೋಗ್ಯ ಸಮಸ್ಯೆಯೂ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ನಿಧಾನವಾಗಿ ಚಳಿಗಾಲದ ವಾತಾವರಣ ಕಂಡುಬರುತ್ತಿದೆ. ಬೆಳಿಗ್ಗಿನ ಹೊತ್ತು ಮಂಜು ಜೊತೆಗೆ ಮೋಡ ಕವಿದ ವಾತಾವರಣವಿರುತ್ತದೆ. ಹಗಲೂ ಬಿಸಿಲಿನ ಜೊತೆಗೆ ಮೋಡ ಕವಿದ ವಾತಾವರಣ. ಸಂಜೆಯೂ ಶೈತ್ಯ ಹವಾಮಾನ ಮುಂದುವರಿದಿದೆ. ಇದರಿಂದಾಗಿ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ.

ಇಂತಹ ವಾತಾವರಣಕ್ಕೆ ಧೂಳು ಸಹಿತ ವಾತಾವರಣವಿದ್ದು, ಜನರಲ್ಲಿ ಶೀತ, ಗಂಟಲು ನೋವು, ಕೆಮ್ಮು ಇತ್ಯಾದಿ ಸಮಸ್ಯೆಗಳು ಹೆಚ್ಚಾಗಿವೆ. ಚಳಿಗಾಲ ಬಂತೆಂದರೆ ಬೆಂಗಳೂರಿನಲ್ಲಿ ಇಂತಹ ಖಾಯಿಲೆಗಳು ಸಾಮಾನ್ಯ. ಇದೀಗ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಶೀತ, ಗಂಟಲು ನೋವು ಸಮಸ್ಯೆ ಕಾಡುತ್ತಿದೆ.

ಮುನ್ನೆಚ್ಚರಿಕೆ ವಹಿಸಿ
ಈ ರೀತಿಯ ವಾತಾವರಣದಲ್ಲಿ ಆದಷ್ಟು ಬೆಚ್ಚಗಿರಲು ಪ್ರಯತ್ನಿಸಿ.
ಹೊರಗೆ ಹೋಗುವಾಗ ತಪ್ಪದೇ ಮಾಸ್ಕ್ ಧರಿಸಿ
ರಾತ್ರಿ ಮಲಗುವಾಗ ಟೋಪಿ ಧರಿಸಿ ಕಿವಿಗೆ ಗಾಳಿಯಾಡದಂತೆ ನೋಡಿಕೊಳ್ಳಿ
ಆದಷ್ಟು ಸ್ವೆಟರ್ ಅಥವಾ ಬೆಚ್ಚಗಿನ ಬಟ್ಟೆ ಧರಿಸಿ
ಆಗಾಗ ಬಿಸಿ ನೀರು ಸೇವನೆ ಮಾಡುತ್ತಿರಿ
ರೋಗ ನಿರೋಧಕ ಶಕ್ತಿ ಹೆಚ್ಚಿರುವ ಕಾಳುಮೆಣಸು, ಜೀರಿಗೆ ನೀರನ್ನು ಸೇವನೆ ಮಾಡಬೇಕು
ತಂಪು, ಫ್ರಿಡ್ಜ್ ನಲ್ಲಿರಿಸಿದ ಆಹಾರದ ಬದಲು ಬೆಚ್ಚಗಿನ ಆಹಾರ ಸೇವನೆ ಮಾಡುತ್ತಿರಿ
ವಿಟಮಿನ್ ಸಿ ಅಧಿಕವಿರುವ ಟೊಮೆಟೊ, ಬೆಳ್ಳುಳ್ಳಿ ಹಾಕಿದ ಸೂಪ್ ಸೇವನೆ ಮಾಡುತ್ತಿರಿ
ಪ್ರತಿನಿತ್ಯ ಮಲಗುವ ಮುನ್ನ ಬಿಸಿ ನೀರಿನಿಂದ ಗಾರ್ಗಲ್ ಮಾಡುವುದನ್ನು ಮರೆಯದಿರಿ

Share this Story:

Follow Webdunia kannada

ಮುಂದಿನ ಸುದ್ದಿ

Horoscope 2025: ಮಕರ ರಾಶಿಯವರಿಗೆ 2025 ರಲ್ಲಿ ಕೌಟುಂಬಿಕವಾಗಿ ಚಿಂತೆ ಬೇಡ