Webdunia - Bharat's app for daily news and videos

Install App

ನಿಮ್ಮ ಮಕ್ಕಳು ವಿದ್ಯೆಯಲ್ಲಿ ಸಮಸ್ಯೆ ಎದುರಿಸುತ್ತಿದ್ದಾರಾ...? ಹಾಗಾದ್ರೆ ಈ ರೀತಿ ಮಾಡಿ ಮಕ್ಕಳನ್ನು ವಿದ್ಯಾವಂತರನ್ನಾಗಿಸಿ!

Webdunia
ಶನಿವಾರ, 7 ಏಪ್ರಿಲ್ 2018 (09:54 IST)
ಬೆಂಗಳೂರು : ನಮ್ಮ ಮಕ್ಕಳು ಒಳ್ಳೆಯ ವಿದ್ಯಾವಂತರಾಗಬೇಕು ಎನ್ನುವ ಆಸೆ ಸಾಮಾನ್ಯವಾಗಿ ಎಲ್ಲಾ ಪೋಷಕರಲ್ಲೂ ಇರುತ್ತದೆ. ಆ ನಿಟ್ಟಿನಲ್ಲಿ ಅವರು ಹೆಚ್ಚಿನ ಸಮಯ ಹಾಗು ಹಣ ಎರಡನ್ನೂ ವ್ಯಯಿಸುತ್ತಾರೆ. ಹೀಗಿರುವಾಗ ನಮ್ಮ ವಿಶಿಷ್ಟ ಪುರಾತನ ಜ್ಯೋತಿಷ ಶಾಸ್ತ್ರದ ಸಹಾಯವನ್ನೂ ಸಹ ಪಡೆದರೆ ಗುರಿ ಮುಟ್ಟುವುದು ಸ್ವಲ್ಪ ಮಟ್ಟಿಗೆ ಸುಲಭ ಸಾಧ್ಯ ಆಗುವುದರಲ್ಲಿ ಸಂಶಯವಿಲ್ಲ.


ಜ್ಯೋತಿಷ ಶಾಸ್ತ್ರದ ಪ್ರಕಾರ ವಿದ್ಯೆ ಚನ್ನಾಗಿ ಸಿಗಬೇಕು ಎಂದರೆ ಆ ಜಾತಕದಲ್ಲಿ ಪ್ರಮುಖವಾಗಿ ಜ್ಞಾನಕಾರಕ ಗುರು ಗ್ರಹ ಹಾಗು ವಿದ್ಯಾಕಾರಕ ಬುಧ ಗ್ರಹ  ಈ ಎರಡೂ ಗ್ರಹಗಳು ಚೆನ್ನಾಗಿ ಇರಬೇಕು. ಬುಧ ಹಾಗು ಗುರು ಗ್ರಹ ಈ ಎರಡೂ ಗ್ರಹಗಳು ಚನ್ನಾಗಿ ಇದ್ದರೂ ಸಹ ಕೆಲವರಿಗೆ ವಿದ್ಯೆಯಲ್ಲಿ ಸಮಸ್ಯೆಗಳು ಎದುರಾಗುತ್ತವೆ ಅದಕ್ಕೆ ಇನ್ನೊಂದು ಮುಖ್ಯ ಕಾರಣ ಸರ್ಪದೋಷ ! ಈ ದೋಷದಿಂದಾಗಿಯೂ ಕೂಡ ಮಕ್ಕಳು ಅತಿಯಾದ ಸಿಟ್ಟು ಹಾಗು ಬೇಡದ ಹಠ ಮಾಡಿ ವಿದ್ಯೆಯಿಂದ ವಂಚಿತರಾಗುತ್ತಾರೆ.


ಇಂಥ ಸಮಸ್ಯೆಗಳ ಪರಿಹಾರದ ವಿಚಾರಕ್ಕೆ ಬಂದಾಗ ಪೋಷಕರು ತಮ್ಮ ಮಕ್ಕಳ ಜಾತಕವನ್ನು ಒಮ್ಮೆ ಸರಿಯಾದ ಜ್ಯೋತಿಷ್ಯಗಳ ಬಳಿ ಕೊಟ್ಟು ಪರಿಶೀಲಿಸಬೇಕು . ಬುಧನ ದೋಷ ಪರಿಹಾರಕ್ಕಾಗಿ ಪುರುಷ ಸೂಕ್ತ ಹವನ ಹಾಗು ಗುರು ದೋಷ ಪರಿಹಾರಕ್ಕೆ ಗುರು ಮಂತ್ರ ಜಪ ಹಾಗು ಹವನ ಮಾಡಿಸಬೇಕು ಅದರಲ್ಲೂ ಸಹ ಸರಸ್ವತೀ ಮಂತ್ರ ಹವನದಿಂದ ಖಂಡಿತ ವಿಶೇಷ ಫಲ ಸಿಗುತ್ತದೆ. ಇನ್ನು ಹವನ ಮಾಡಿಸಲು ಅಶಕ್ತರು ಯಂತ್ರ ಮುದ್ರಿತ ಅಲ್ಲದೆ ಶಾಸ್ರ್ತೇಕ್ತವಾಗಿ ಕೈಯಲ್ಲೇ ತಾಮ್ರದ ತಗಡಿನಲ್ಲಿ ಸರಸ್ವತಿ ಯಂತ್ರ ಬರೆಸಿ ಅದನ್ನು ತಮ್ಮ ಮಕ್ಕಳ ಕೈನಲ್ಲಿ ಪೂಜೆ ಮಾಡಿಸಬಹುದು. ಪ್ರತಿ ನಿತ್ಯ ಸರಸ್ವತಿ ಅಷ್ಟೋತ್ತರ ಒದಿಸಬೇಕು.ಇನ್ನು ಮನೆಯಲ್ಲಿ ಈಶಾನ್ಯದಲ್ಲಿ ಒಂದು ಕೋಣೆ ಇದ್ದ ಪಕ್ಷದಲ್ಲಿ ಮಕ್ಕಳನ್ನು ಅದೇ ಕೋಣೆಯಲ್ಲಿ ಕುಳಿತು ಓದಲು ಹೇಳಿದರೆ ಉತ್ತಮ ಫಲ ನಿರೀಕ್ಷಿಸಬಹುದು ಎಂಬುದಾಗಿ ಪಂಡಿತರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿಷ್ಣು ಶತನಾಮ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

Ganesha Festival: ಈ ಒಂದು ನೈವೇದ್ಯ ಗಣೇಶನಿಗೆ 21 ಭಕ್ಷ್ಯ ಅರ್ಪಿಸಿದ ಹಾಗೇ

Ganesha Festival 2025: ಮನೆಗೆ ಗಣೇಶ ಮೂರ್ತಿ ತರುವಾಗ ಈ ತಪ್ಪನ್ನು ಮಾಡಬೇಡಿ, ಮನೆಗೆ ಶ್ರೇಯಸ್ಸಲ್ಲ

ಮಂಗಳ ಗೌರಿ ವ್ರತ ಮಾಡುವಾಗ ಈ ಮಂತ್ರವನ್ನು ಪಠಿಸಿ

ಇಂದು ಶಿವನಿಗೆ ಪೂಜೆ ಮಾಡುವಾಗ ತಪ್ಪದೇ ಈ ಮಂತ್ರ ಹೇಳಿ

ಮುಂದಿನ ಸುದ್ದಿ
Show comments