ದೇವರ ಪ್ರತಿಮೆಗಳುಳ್ಳ ವಸ್ತುಗಳನ್ನು ಧರಿಸಿದವರು ಈ ನಿಯಮಗಳನ್ನು ಪಾಲಿಸಲೇಬೇಕು!

Webdunia
ಶುಕ್ರವಾರ, 6 ಏಪ್ರಿಲ್ 2018 (07:28 IST)
ಬೆಂಗಳೂರು : ನಮ್ಮಲ್ಲಿ ಬಹಳಷ್ಟು ಮಂದಿ ದೇವರ ಪ್ರತಿಮೆಗಳುಳ್ಳ ಉಂಗುರ, ಕತ್ತಿನಲ್ಲಿ ಸರಕ್ಕೆ ಲಾಕೆಟ್ ಮಾಡಿಸಿಕೊಳ್ಳುತ್ತಿರುತ್ತಾರೆ. ದೇವರ ಪ್ರತಿಮೆಗಳುಳ್ಳ ಉಂಗುರಗಳನ್ನು ಧರಿಸಿದರಷ್ಟೇ ಸಾಲದು. ಅವು ಧರಿಸಲು, ಧರಿಸಿದ ಬಳಿಕ ಸಹ ಕೆಲವು ಪದ್ಧತಿಗಳಿವೆ. ಅವನ್ನು ಪಾಲಿಸದೇ ಹೋದರೆ ನಷ್ಟ ಉಂಟಾಗುತ್ತದೆ. ಆ ನಿಯಮಗಳು ಏನೂ ಎಂಬುದು ಇಲ್ಲಿದೆ ನೋಡಿ.


*ಉಂಗುರ ಧರಿಸುವ ಮೊದಲು ಆಲಯಗಳಲ್ಲಿ ಸೂಕ್ತ ಪೂಜೆ, ಅಭಿಷೇಕ ಮಾಡಿಸಬೇಕು. ಆಗಲೇ ಅದಕ್ಕೆ ಶಕ್ತಿ ಸಿಗುತ್ತದೆ. ಆ ಭಗವಂತ ನಮ್ಮೊಂದಿಗೆ ಇರುವ ಅನುಭಾವ ಸಿದ್ದಿಸುತ್ತದೆ.

*ಉಂಗುರದಲ್ಲಿರುವ ದೇವರ ಪ್ರತಿಮೆ ಕಾಲುಗಳು ಕೈ ಉಗುರುಗಳ ಕಡೆಗೆ, ಮಣಿಕಟ್ಟಿನ ಕಡೆಗೆ ಇರುವಂತೆ ಧರಿಸಬೇಕು. ನಮಸ್ಕರಿಸುವಾಗ ಮುಷ್ಟಿ ಮಡಚಿ ನಮಸ್ಕರಿಸಬೇಕು.. ಆಗ ಭಗವಂತನ ಕಾಲಿಗೆ ನಮಸ್ಕರಿಸಿದವರಾಗುತ್ತೇವೆ.

*ದೇವರ ಪ್ರತಿಮೆ ಇರುವ ಉಂಗುರಗಳನ್ನು ಧರಿಸಿ ಮಾಂಸಾಹಾರ ಸೇವಿಸಬಾರದು. ಅಷ್ಟೇ ಅಲ್ಲ ಎಂಜಲು ತಾಗದಂತೆ ಎಚ್ಚರ ವಹಿಸಬೇಕು.

*ಸ್ತ್ರೀಯರು ಮುಟ್ಟಿನ ಸಮಯದಲ್ಲಿ ಉಂಗುರ, ಲಾಕೆಟ್‍ಗಳನ್ನು ತೆಗೆದಿಡುವುದು ಉತ್ತಮ.

*ಮದ್ಯ ಸೇವಿಸುವವರು, ಸಿಗರೇಟ್ ಸೇದುವರರು ಉಂಗುರ ಧರಿಸುವುದು ಒಳಿತಲ್ಲ. ಉಂಗುರ ಧರಿಸಿ ಮದ್ಯ ಸೇವಿಸುವುದು, ಧೂಮಪಾನ ಮಾಡುವುದು ಮಾಡಬಾರದು. ಈ ನಿಯಮಗಳನ್ನು ಪಾಲಿಸದೆ ದೇವರ ಪ್ರತಿಮೆ ಇರುವ ಉಂಗುರ ಇಟ್ಟುಕೊಂಡರೆ ನಮಗೆ ಒಳ್ಳೆಯದಕ್ಕಿಂತ ಕೆಟ್ಟದ್ದೇ ಆಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸೋಮವಾರ ಶಿವ ಹೃದಯಂ ಸ್ತೋತ್ರ ಪಾರಾಯಣ ಮಾಡಿ

ತುಳಸಿ ಹಬ್ಬ 2025: ತುಳಸಿ ಪೂಜೆ ಮಾಡುವಾಗ ಈ ಮಂತ್ರ ಜಪಿಸಿದರೆ ಅದೃಷ್ಟ

ಎಲ್ಲಾ ರೀತಿಯ ಗ್ರಹ ದೋಷಗಳಿಗೆ ಈ ಮಂತ್ರ ಪರಿಹಾರ

ತುಳಸಿ ಹಬ್ಬ ಯಾವಾಗ, ಪೂಜಾ ಸಮಯ, ಶುಭ ಮುಹೂರ್ತ ಇಲ್ಲಿದೆ

ಧನಾದಾಯ ವೃದ್ಧಿಗೆ ಇಂದು ಲಕ್ಷ್ಮೀ ದೇವಿಯ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments