ಆಂಜನೇಯ ಸ್ವಾಮಿ ಕೇವಲ ಧೈರ್ಯ, ಸಾಹಸದ ಪ್ರತೀಕವಲ್ಲ. ಆರೋಗ್ಯಕ್ಕಾಗಿಯೂ ಹನುಮಂತನ ನಾಮ ಸ್ಮರಣೆ ಮಾಡುತ್ತಾರೆ. ಉತ್ತಮ ಆರೋಗ್ಯಕ್ಕಾಗಿ ಪಠಿಸಬೇಕಾದ ಆಂಜನೇಯ ಮಂತ್ರ ಯಾವುದು ನೋಡಿ.
ಬುದ್ಧಿ, ವಿದ್ಯೆ, ಆರೋಗ್ಯ, ಆಯುಷ್ಯ, ಶತ್ರು ಭಯ ನಾಶ, ದುಷ್ಟ ಶಕ್ತಿಗಳ ನಿವಾರಣೆಗಾಗಿಯೂ ಆಂಜನೇಯ ಸ್ವಾಮಿಯ ಪ್ರಾರ್ಥನೆ ಮಾಡಲಾಗುತ್ತದೆ. ಕೆಟ್ಟ ದೃಷ್ಟಿ ನಿವಾರಿಸಿ ಜೀವನದಲ್ಲಿ ಯಶಸ್ಸಿಗಾಗಿಯೂ ಆಂಜನೇಯ ಸ್ವಾಮಿಯ ಪ್ರಾರ್ಥನೆ ಮಾಡಲಾಗುತ್ತದೆ.
ಅದೇ ರೀತಿ ಉತ್ತಮ ಆರೋಗ್ಯಕ್ಕಾಗಿಯೂ ಆಂಜನೇಯ ಸ್ವಾಮಿಯ ಪ್ರಾರ್ಥನೆ ಮಾಡಬಹುದು. ಸುದೀರ್ಘ ಕಾಲದಿಂದ ಅನಾರೋಗ್ಯಕ್ಕೀಡಾಗಿದ್ದರೆ ಆಂಜನೇಯ ಸ್ವಾಮಿಯ ಪ್ರಾರ್ಥನೆ ಮಾಡುವುದರಿಂದ ಒಳಿತಾಗುವುದು. ಇದಕ್ಕಾಗಿ ಈ ಮಂತ್ರವನ್ನು ಜಪಿಸಿ.
"ಓಂ ನಮೋ ಹನುಮಾನ್ ರುದ್ರಾವತಾರಾಯ ಸರ್ವಶತೃಸಹರಣಾಯ ಸರ್ವರೋಗ ಹರಾಯ ಸರ್ವವಶೀಕರಣಾಯ ರಾಮದೂತಾಯ ಸ್ವಾಹಾ”