ಈ ಐದು ರಾಶಿಯವರು ಜೀವನದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ

Krishnaveni K
ಬುಧವಾರ, 28 ಫೆಬ್ರವರಿ 2024 (09:16 IST)
ಬೆಂಗಳೂರು: ಜೀವನದಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಅತೀ ಮುಖ್ಯವಾಗಿದೆ. ಆದರೆ ಕೆಲವರು ಕೈಗೊಳ್ಳುವ ನಿರ್ಧಾರಗಳು ಅವರ ಜೀವನವನ್ನೇ ಮುಳುಗಿಸಬಹುದು. ಇಲ್ಲವೇ ಅವರ ಯಶಸ್ಸಿಗೆ ಹಾದಿಯಾಗಬಹುದು.

ಎಲ್ಲರಿಗೂ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಕಲೆ ಸಿದ್ಧಿಸಿರುವುದಿಲ್ಲ. ಇದಕ್ಕೆ ಅದೃಷ್ಟ ಬಲ, ರಾಶಿ ಬಲವೂ ಬೇಕಾಗುತ್ತದೆ. ಜ್ಯೋತಿಷ್ಯ ಪ್ರಕಾರ ಐದು ರಾಶಿಯವರು ಜೀವನದಲ್ಲಿ ನಿರ್ಧಾರ ತೆಗೆದುಕೊಳ್ಳುವ ವಿಚಾರದಲ್ಲಿ ಎಂದಿಗೂ ಲೆಕ್ಕ ತಪ್ಪಲ್ಲ. ಆ ಐದು ರಾಶಿಯವರು ಯಾರು ಎಂದು ಇಲ್ಲಿ ನೋಡೋಣ.

ಕನ್ಯಾ ರಾಶಿ: ಈ ರಾಶಿಯವರು ಜೀವನದಲ್ಲಿ ಅತೀ ಎಚ್ಚರಿಕೆಯಿಂದ, ಲೆಕ್ಕಾಚಾರ ಹಾಕಿ ಹೆಜ್ಜೆಯಿಡುತ್ತಾರೆ. ಇದು ಅವರ ನಿರ್ಧಾರ ತೆಗೆದುಕೊಳ್ಳುವ ವಿಚಾರದಲ್ಲೂ ಕಂಡುಬರುತ್ತದೆ. ಸರಿಯಾಗಿ ಅಳೆದು ತೂಗಿ, ಯಾವುದು ಸರಿ-ತಪ್ಪು ಎಂದು ಲೆಕ್ಕಾಚಾರ ಹಾಕಿಯೇ ಒಂದು ನಿರ್ಧಾರಕ್ಕೆ ಬರುತ್ತಾರೆ.
ತುಲಾ ರಾಶಿ: ಈ ರಾಶಿಯವರು ದೀರ್ಘಾವಧಿಯ ಯೋಚನೆ, ಆಳವಾಗಿ ಅಭ್ಯಸಿಸುವ ಗುಣ ಹೊಂದಿರುತ್ತಾರೆ. ಇವರಿಗೆ ಅದೃಷ್ಟದ ಬಲವೂ ಇರುತ್ತದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಇತರರ ಅಭಿಪ್ರಾಯವನ್ನೂ ಪಡೆದುಕೊಳ್ಳುತ್ತಾರೆ. ಅವರಿಗೆ ನಿರ್ಧಾರ ತೆಗೆದುಕೊಳ್ಳುವ ಕಲೆ ನೈಸರ್ಗಿಕವಾಗಿ ಒಲಿದಿರುತ್ತದೆ.
ವೃಶ್ಚಿಕ ರಾಶಿ: ತಮ್ಮ ಅದೃಷ್ಟದ ಬಲವನ್ನು ನಂಬಿ ಒಂದು ನಿರ್ಧಾರಕ್ಕೆ ಬರುತ್ತಾರೆ. ಅವರಿಗೆ ಸತ್ಯದ ದರ್ಶನ ಮಾಡುವ ಕಲೆ ಸಿದ್ಧಿಸಿರುತ್ತದೆ. ಯೋಜನಾಬದ್ಧವಾಗಿ ಯೋಚಿಸಿ ನಿರ್ಧಾರಕ್ಕೆ ಬರುತ್ತಾರೆ. ಅವರ ಲೆಕ್ಕ ತಪ್ಪುವುದು ಕಡಿಮೆ.
ಮಕರ ರಾಶಿ: ಈ ರಾಶಿಯವರು ಗುರಿ ಕಡೆಗೆ ಗಮನ ಕೊಡುತ್ತಾರೆ. ತುಂಬಾ ಪ್ರಾಕ್ಟಿಕಲ್ ಆಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ತಮ್ಮ ಆಯ್ಕೆ ಫಲಿತಾಂಶ ಏನಿರಬಹುದು ಎಂದು ಯೋಚಿಸಿ ನಿರ್ಧಾರಕ್ಕೆ ಬರುತ್ತಾರೆ.
ಮೀನ ರಾಶಿ: ತಮ್ಮ ಭಾವನೆಗೆ ಬೆಲೆ ಕೊಟ್ಟು ನಿರ್ಧಾರಕ್ಕೆ ಬರುತ್ತಾರೆ. ಆದರೆ ಅವರ ಲೆಕ್ಕಾಚಾರಗಳು ತಪ್ಪುವುದಿಲ್ಲ. ತಮ್ಮ ಹೃದಯದ ಮಾತಿಗೆ ಬೆಲೆ ಕೊಡುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಕೃಪೆಗಾಗಿ ಶ್ರೀ ರುದ್ರ ಸ್ತುತಿಯನ್ನು ಇಂದು ತಪ್ಪದೇ ಓದಿ

ಶನಿ ಅಷ್ಟೋತ್ತರ ಶತನಾಮಾವಳಿ ಇಂದು ತಪ್ಪದೇ ಓದಿ

ಶುಕ್ರವಾರ ಓದಬೇಕಾದ ಲಕ್ಷ್ಮೀ ಚಾಲೀಸಾ ಮಂತ್ರ

ಶ್ರೀಹರಿ ಸ್ತೋತ್ರಂ ಇಂದು ತಪ್ಪದೇ ಓದಿ

ಈ ರಾಶಿಯವರು ತಪ್ಪದೇ ದೀಪಾವಳಿಗೆ ಗೋ ಪೂಜೆ ಮಾಡಿ

ಮುಂದಿನ ಸುದ್ದಿ
Show comments