Sports Olympics Article 0808 19 1080819002_1.htm

Daily Horoscope

Select Your Language

Notifications

webdunia
webdunia
webdunia
webdunia

ಉದ್ದ ಜಿಗಿತ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲೇ ಅಂಜು ಔಟ್

ಅಂಜು ಬಾಬಿ ಜಾರ್ಜ್
PTI
ಬೀಜಿಂಗ್‌‌ನಲ್ಲಿ ಭಾರತದ ಪಾಲಿಗೆ ನಿರಾಶದಾಯಕ ಚಿತ್ರಣಗಳು ಹೆಚ್ಚುತ್ತಿದ್ದು ಭಾರತದ ಉದ್ದಜಿಗಿತ ತಾರೆ ಅಂಜುಬಾಬಿ ಜಾರ್ಜ್ ಮಹಿಳೆಯರ ವಿಭಾಗದ ಉದ್ದಜಿಗಿತ ಸ್ಪರ್ಧೆಯ ಅರ್ಹತಾ ಸ್ಫರ್ಧೆಯಿಂದಲೇ ಹಿಂದಕ್ಕೆ ಬಿದ್ದಿದ್ದಾರೆ.

ಅಂಜುಬಾಬಿ ಜಾರ್ಜ್ 2003ರಲ್ಲಿ ಪ್ಯಾರೀಸ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ವಿಶ್ವಮಟ್ಟದ ಪರಿಧಿಯಲ್ಲಿ ಗುರುತಿಸಲ್ಪಟ್ಟಿದ್ದರು.

ಅವರು ಆಥೇನ್ಸ್‌ನಲ್ಲಿ 6.83ಮೀ ದೂರ ಜಿಗಿದಿದ್ದರು ಆದರೆ ಬಳಿಕ ಮೋನಾಕೊದಲ್ಲಿ 6.75ಮೀ ದೂರ ಜಿಗಿದ ನಂತರ ಅವರು ಹಿಂದೆ ಸರಿದಿದ್ದರು ಮತ್ತು ವಿಶ್ವದಲ್ಲಿ 16ನೇ ರ‌್ಯಾಂಕ್ ಪಡೆಯಲಷ್ಟೇ ಶಕ್ತರಾದರು. ಮೂರು ವಿವಿಧ ವಿಭಾಗಗಳಲ್ಲಿ 6.55ಮೀ ಜಿಗಿತ ಅಂಜು ಪಾಲಿನ ಅತ್ಯುತ್ತಮ ಸಾಧನೆ ಎನಿಸಿತ್ತು ಮತ್ತು ಅವರ ಪಾಲಿಗೆ ವರ್ಷಗಳ ಹಿಂದೆ ವಿಶ್ವ ಅಥ್ಲೆಟಿಕ್ ಫೈನಲ್‌‌ನಲ್ಲಿ 6.75ಮೀ ನೆಗೆಯುವ ಮೂಲಕ ಜಯಿಸಿದ್ದ ಬೆಳ್ಳಿಯ ಪದಕ ಮಹತ್ವದ ಸಾಧನೆ ಎನಿಸಿತ್ತು.

Share this Story:

Follow Webdunia kannada