Select Your Language

Notifications

webdunia
webdunia
webdunia
webdunia

ವಿಶ್ವಕಪ್‌ನಲ್ಲಿ ಯುವರಾಜ್, ಪಠಾಣ್ ಫಾರ್ಮ್ ನಿರ್ಣಾಯಕ: ವೆಂಗಾ

ವಿಶ್ವಕಪ್‌ನಲ್ಲಿ ಯುವರಾಜ್, ಪಠಾಣ್ ಫಾರ್ಮ್ ನಿರ್ಣಾಯಕ: ವೆಂಗಾ
ಮುಂಬೈ , ಶುಕ್ರವಾರ, 28 ಜನವರಿ 2011 (09:19 IST)
ಭಾರತ 28 ವರ್ಷಗಳ ನಂತರ ಏಕದಿನ ವಿಶ್ವಕಪ್ ಗೆಲುವನ್ನು ಎದುರು ನೋಡುತ್ತಿದೆ. ಆದರೆ ತವರಿನಲ್ಲಿ ನಡೆಯಲಿರುವ ಈ ಮಹತ್ತರ ಕೂಟದಲ್ಲಿ ಭಾರತೀಯರ ಕನಸು ನನಸಾಗಬೇಕಾಗದಲ್ಲಿ ಆಲ್‌ರೌಂಡರ್‌ಗಳಾದ ಯುವರಾಜ್ ಸಿಂಗ್ ಮತ್ತು ಯೂಸುಫ್ ಪಠಾಣ್ ಫಾರ್ಮ್ ನಿರ್ಣಾಯಕವೆನಿಸಲಿದೆ ಎಂದು 1983ರ ಭಾರತ ತಂಡದ ಸದಸ್ಯರಾಗಿದ್ದ ದಿಲೀಪ್ ವೆಂಗಾಸರ್ಕಾರ್ ಅಭಿಪ್ರಾಯಪಟ್ಟಿದ್ದಾರೆ.

ಸಮಕಾಲೀನ ಕ್ರಿಕೆಟ್‌ನಲ್ಲಿ ಭಾರತವೇ ಶ್ರೇಷ್ಠ ತಂಡವೆನಿಸಿದೆ. ಹಾಗೆಯೇ ತವರಿನ ಪರಿಸ್ಥಿತಿಯಲ್ಲಿ ಆಡುವುದು ಪ್ರಯೋಜನವಾಗಲಿದೆ. 1983ಕ್ಕೆ ಹೋಲಿಸಿದಾಗ ಭಾರತ ತಂಡ ಇದೀಗ ಫೆವರೀಟ್ ಎನಿಸಿಕೊಂಡಿದೆ ಎಂದವರು ಹೇಳಿದರು.

ತಂಡ ಸೆಹ್ವಾಗ್, ತೆಂಡೂಲ್ಕರ್, ಗಂಭೀರ್, ಯುವರಾಜ್ ಮತ್ತು ಯೂಸುಫ್‌ರಂತಹ ಪ್ರಬಲ ಬ್ಯಾಟಿಂಗ್ ಕ್ರಮಾಂಕವನ್ನೇ ಭಾರತ ಹೊಂದಿದ್ದು, ಇದು ಆತಿಥೇಯ ತಂಡಕ್ಕೆ ನೆರವಾಗಲಿದೆ ಎಂದು ಆಯ್ಕೆ ಸಮಿತಿಯ ಮಾಜಿ ಸದಸ್ಯರೂ ಆಗಿರುವ ಸರ್ಕಾರ್ ನುಡಿದರು.

Share this Story:

Follow Webdunia kannada