ದ. ಆಫ್ರಿಕಾ ಏಕದಿನ ಸರಣಿಗೆ ತಂಡ: ಸಚಿನ್ ವಾಪಸ್
ಡರ್ಬನ್ , ಮಂಗಳವಾರ, 21 ಡಿಸೆಂಬರ್ 2010 (14:22 IST)
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತವು ಆತಿಥೇಯರ ವಿರುದ್ಧದ ಏಕದಿನ ಸರಣಿ ಮತ್ತು ಟ್ವೆಂಟಿ-20 ಪಂದ್ಯಕ್ಕೆ 16 ಆಟಗಾರರ ತಂಡವನ್ನು ಘೋಷಿಸಿದ್ದು, ಸಚಿನ್ ತೆಂಡುಲ್ಕರ್ ಹತ್ತು ತಿಂಗಳ ನಂತರ ಮರಳಿದ್ದರೆ, ಇಶಾಂತ್ ಶರ್ಮಾ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾರಿಗೆ ಖೊಕ್ ನೀಡಲಾಗಿದೆ.ಕೆಲವೇ ತಿಂಗಳಲ್ಲಿ ನಡೆಯಲಿರುವ ವಿಶ್ವಕಪ್-2011 ಕೂಟಕ್ಕೂ ಬಹುತೇಕ ಇದೇ ತಂಡವನ್ನು ಆರಿಸುವ ಸಾಧ್ಯತೆಯೊಂದಿಗೆ, ಈ ಏಕದಿನ ತಂಡಕ್ಕೆ ವಿಶೇಷ ಮಹತ್ವ ದೊರೆತಿದ್ದು, ಪ್ರಯೋಗಾತ್ಮಕವಾಗಿ ಈ ಆಟಗಾರರನ್ನು ಆಡಿಸಲಾಗುತ್ತಿದೆ ಎಂದು ಅಂದಾಜಿಸಲಾಗುತ್ತಿದೆ.ದಕ್ಷಿಣ ಆಫ್ರಿಕಾ ವಿರುದ್ಧ ಜನವರಿ 9ರಂದು ಒಂದು ಟ್ವೆಂಟಿ-20 ಪಂದ್ಯ ಹಾಗೂ ಜನವರಿ 12ರಿಂದ ಐದು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಅದರ ವೇಳಾಪಟ್ಟಿಗೆ ಇಲ್ಲಿ ಕ್ಲಿಕ್ ಮಾಡಿ.ಬೌನ್ಸಿ ಟ್ರ್ಯಾಕ್‌ನಲ್ಲಿ ಸ್ಪಿನ್ನರ್ ಪೀಯೂಷ್ ಚಾವ್ಲಾಗೂ ತಂಡದಲ್ಲಿ ಅವಕಾಶ ನೀಡಲಾಗಿದೆ. ಉಳಿದಂತೆ ತಂಡ ಇಂತಿದೆ:ಮಹೇಂದ್ರ ಸಿಂಗ್ ಧೋನಿ (ನಾಯಕ, ವಿಕೆಟ್ ಕೀಪರ್)ವೀರೇಂದ್ರ ಸೆಹ್ವಾಗ್ಗೌತಮ್ ಗಂಭೀರ್ಸಚಿನ್ ತೆಂಡುಲ್ಕರ್ಯುವರಾಜ್ ಸಿಂಗ್ವಿರಾಟ್ ಕೋಹ್ಲಿಸುರೇಶ್ ರೈನಾಯೂಸುಫ್ ಪಠಾಣ್ಜಹೀರ್ ಖಾನ್ಶ್ರೀಶಾಂತ್ಆಶಿಷ್ ನೆಹ್ರಾಹರಭಜನ್ ಸಿಂಗ್ಪ್ರವೀಣ್ ಕುಮಾರ್ಮುನಾಫ್ ಪಟೇಲ್ಆರ್.ಅಶ್ವಿನ್ಪೀಯೂಷ್ ಚಾವ್ಲಾ