ಭಾರತ-ದ.ಆಫ್ರಿಕಾ 'ಹೈ ವೊಲ್ಟೇಜ್' ಸರಣಿ; ವೇಳಾಪಟ್ಟಿ ಇಲ್ಲಿದೆ...
ಜೋಹಾನ್ಸ್‌ಬರ್ಗ್ , ಸೋಮವಾರ, 13 ಡಿಸೆಂಬರ್ 2010 (15:55 IST)
ಟೆಸ್ಟ್ ಕ್ರಿಕೆಟ್‌ನ ಎರಡು ಅಗ್ರತಂಡಗಳ ನಡುವಣ 'ಹೈ ವೊಲ್ಟೇಜ್' ಸರಣಿಗಾಗಿ ಕ್ಷಣಗಣನೆ ಆರಂಭವಾಗಿದೆ. ಆಟಗಾರರ ನಡುವಣ ಮಾತಿನ ಯುದ್ಧವು ಒಂದೆಡೆಯಾದರೆ ಮತ್ತೊಂದೆಡೆ ಸಂಘಟಕರು ಅಂಕಿ-ಅಂಶಗಳ ಪ್ರಕಾರ ಲೆಕ್ಕಾಚಾರ ಶುರು ಮಾಡಿದ್ದಾರೆ. ಟೆಸ್ಟ್‌ನ ಅಗ್ರ ತಂಡವಾಗಿರುವುದರಿಂದ ಭಾರತ ಈ ಬಾರಿ ದಕ್ಷಿಣ ಆಫ್ರಿಕಾ ನೆಲದಲ್ಲೇ ಐತಿಹಾಸಿಕ ಸರಣಿ ಜಯ ದಾಖಲಿಸಲಿದೆಯೆಂಬ ನಂಬಿಕೆ ಕ್ರೀಡಾಭಿಮಾನಿಗಳಲ್ಲಿ ಮನೆ ಮಾಡಿದೆ. ಇದೇ ನಿರೀಕ್ಷೆಯನ್ನು ಹೊತ್ತುಕೊಂಡಿರುವ ನಾಯಕ ಮಹೇಂದ್ರ ಸಿಂಗ್ ಧೋನಿ ಬಳಗ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದೆ. ಭಾರತ ಇದುವರೆಗೆ ದಕ್ಷಿಣ ಆಫ್ರಿಕಾದಲ್ಲಿ ಆಡಿರುವ 12 ಪಂದ್ಯದಲ್ಲಿ ಕೇವಲ 1ರಲ್ಲಷ್ಟೇ ಜಯ ಸಾಧಿಸಲು ಯಶಸ್ವಿಯಾಗಿದೆ. 2007ರಲ್ಲಿ ಮೊದಲ ಬಾರಿಗೆ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಅವರದ್ದೇ ನೆಲದಲ್ಲಿ ಬಗ್ಗು ಬಡಿದಿತ್ತು. ಇದೀಗ ಟೆಸ್ಟ್‌ನ ಅಗ್ರತಂಡವಾಗಿರುವುದರಿಂದ ಸಹಜವಾಗಿಯೇ ಭಾರತಕ್ಕಿದು ಪ್ರತಿಷ್ಠೆಯ ಸರಣಿಯಾಗಿರಲಿದೆ. ಕೋಚ್ ಗ್ಯಾರಿ ಕರ್ಸ್ಟನ್ ದಕ್ಷಿಣ ಆಫ್ರಿಕಾದವರೇ ಆಗಿದ್ದರಿಂದ ಮಹಿ ಪಡೆಗೆ ಅಲ್ಲಿನ ಪರಿಸ್ಥಿತಿ ಬೇಗನೇ ಅರಿತುಕೊಳ್ಳಲು ಸಾಕಷ್ಟು ನೆರವು ಮಾಡಲಿದೆ. ಇದೇ ಸರಣಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ತಮ್ಮ 50ನೇ ಟೆಸ್ಟ್ ಶತಕ ಮತ್ತು ರಾಹುಲ್ ದ್ರಾವಿಡ್ ಅವರು ಕ್ಯಾಚ್‌ಗಳ ದ್ವಿಶತಕವನ್ನು ಎದುರು ನೋಡುತ್ತಿದ್ದಾರೆ. ಭಾರತ ಇದೀಗ ಮೂರು ಟೆಸ್ಟ್, ಏಕೈಕ ಟ್ವೆಂಟಿ-20 ಮತ್ತು ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸಲಿದೆ. ಸರಣಿಯ ಮೊದಲ ಟೆಸ್ಟ್ ಡಿಸೆಂಬರ್ 16ರಂದು ನಡೆಯಲಿದೆ. ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿಭಾರತ-ದ.ಆಫ್ರಿಕಾ ಸರಣಿ ವೇಳಾಪಟ್ಟಿ: ದಿನಾಂಕ | ಟೆಸ್ಟ್ | ಟ್ವೆಂಟಿ-20 | ಏಕದಿನ |
ಡಿ.16-20 | ಮೊದಲ ಟೆಸ್ಟ್, ಸೆಂಚುರಿಯನ್ | - | - |
ಡಿ. 26-30 | ದ್ವಿತೀಯ ಟೆಸ್ಟ್, ಡರ್ಬನ್ | - | - |
ಜ 02-06 | ಮೂರನೇ ಟೆಸ್ಟ್, ಕೇಪ್‌ಟೌನ್ | - | - |
ಜ. 9 | - | ಏಕೈಕ ಟ್ವೆಂಟಿ-20, ಡರ್ಬನ್ | - |
ಜ. 12* | - | - | ಮೊದಲ ಏಕದಿನ, ಡರ್ಬನ್ |
ಜ. 15* | - | - | 2ನೇ ಏಕದಿನ, ಜೋಹಾನ್ಸ್‌ಬರ್ಗ್ |
ಜ. 18* | - | - | 3ನೇ ಏಕದಿನ, ಕೇಪ್‌ಟೌನ್ |
ಜ. 21* | - | - | 4ನೇ ಏಕದಿನ, ಪೋರ್ಟ್ ಎಲಿಜಬೆತ್ |
ಜ. 23 | - | - | 5ನೇ ಏಕದಿನ, ಸೆಂಚುರಿಯನ್ |
(
*ಅಹರ್ನಿಶಿ ಪಂದ್ಯಗಳು)