Sports Cricket Cricketnews 0907 10 1090710041_1.htm

Select Your Language

Notifications

webdunia
webdunia
webdunia
webdunia

11 ಸಾವಿರ ರನ್ ಪೂರೈಸಿದ ಪಾಂಟಿಂಗ್

ರಿಕಿ ಪಾಟಿಂಗ್
ಲಂಡನ್ , ಶುಕ್ರವಾರ, 10 ಜುಲೈ 2009 (13:50 IST)
PTI
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ರಿಕಿ ಪಾಟಿಂಗ್ ಗುರುವಾರದಂದು ಟೆಸ್ಟ್ ಕ್ರಿಕೆಟ್‌ನಲ್ಲಿ 11 ಸಾವಿರ ರನ್ ಗಡಿಯನ್ನು ದಾಟಿದ ಕ್ರಿಕೆಟಿಗರ ಏಲೈಟ್ ಕ್ಲಬ್‌ಗೆ ಸೇರ್ಪಡೆಯಾಗಿದ್ದಾರೆ.

ಪಾಂಟಿಂಗ್ ಇಂಗ್ಲೆಂಡ್ ವಿರುದ್ಧದ ಆಶಸ್ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ 40 ರನ್‌ಗಳನ್ನು ಪೂರೈಸುತ್ತಿದ್ದಂತೆ ಅವರಿಗೆ 11 ಸಾವಿರ್ ರನ್‌ಗಳನ್ನು ಪೂರೈಸಿದವರ ಸಾಲಿಗೆ ಸೇರ್ಪಡೆಯಾದರು.ಸಚಿನ್ ತೆಂಡೂಲ್ಕರ್ ,ಬ್ರಿಯಾನ್ ಲಾರಾ ಮತ್ತು ಅಲನ್ ಬಾರ್ಡರ್‌ ಅವರ ನಂತರದ ನಾಲ್ಕನೇ ಸ್ಥಾನವನ್ನು ಪಾಂಟಿಂಗ್ ಪಡೆದರು. 132ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಪಾಂಟಿಂಗ್ ಮೂವರಿಗಿಂತಲೂ ಉತ್ತಮ ಸರಾಸರಿ (56.42)ಯನ್ನು ಹೊಂದಿದ್ದಾರೆ.

ಆಸ್ಟ್ರೇಲಿಯಾ ತಂಡದ ನಾಯಕ ರಿಕಿ ಪಾಂಟಿಂಗ್ ,ಸ್ಟುವರ್ಟ್ ಬ್ರಾಡ್ ಅವರ ಎಸೆತದಲ್ಲಿ ಬೌಂಡರಿ ಬಾರಿಸಿ ತಮ್ಮ 11 ಸಾವಿರ ರನ್‌ಗಳನ್ನು ಪೂರೈಸಿದರು.ಇದೇ ಟೆಸ್ಟ್‌ನಲ್ಲಿ 20 ರನ್‌ಗಳನ್ನು ಬಾರಿಸುವುದರೊಂದಿಗೆ ಇಂಗ್ಲೆಂಡ್‌ ವಿರುದ್ಧ 2 ಸಾವಿರ ರನ್‌ಗಳನ್ನು ಪೇರಿಸಿದ ಖ್ಯಾತಿಯನ್ನು ಪಡೆದರು.ಇಲ್ಲಿಯವರೆಗೆ ಪಾಂಟಿಂಗ್ ಇಂಗ್ಲೆಂಡ್ ವಿರುದ್ಧ 27 ಟೆಸ್ಟ್‌ಗಳಲ್ಲಿ ಆಡಿದ್ದಾರೆ.

ಪಾಟಿಂಗ್ ಇದನ್ನು ಹೊರತುಪಡಿಸಿ ದಕ್ಷಿಣ ಆಫ್ರಿಕಾ ( 21 ಪಂದ್ಯಗಳಲ್ಲಿ 2030 ರನ್ ) ಭಾರತ (23 ಪಂದ್ಯಗಳಲ್ಲಿ 1787ರನ್) ವೆಸ್ಟ್‌ಇಂಡೀಸ್ (18 ಪಂದ್ಯಗಳಲ್ಲಿ 1695ರನ್ ) ಮತ್ತು ಪಾಕಿಸ್ತಾನ (10 ಪಂದ್ಯಗಳಲ್ಲಿ 1061 ರನ್‌)ಗಳಿಸಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ 37 ಶತಕಗಳನ್ನು ಬಾರಿಸಿ ಸಚಿನ್ ತೆಂಡೂಲ್ಕರ್(42 ಶತಕ ) ನಂತರದ ಸ್ಥಾನವನ್ನು ಪಡೆದಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ 11 ಸಾವಿರ ರನ್‌ ಪೂರೈಸಿದ ಆಟಗಾರರು

1 ಸಚಿನ್ ತೆಂಡೂಲ್ಕರ್ 159 ಪಂದ್ಯ , 12773 ರನ್,ಸರಾಸರಿ 54.58
2 ಬ್ರಿಯಾನ್ ಲಾರಾ 131 ಪಂದ್ಯ , 11953 ರನ್, ಸರಾಸರಿ 52.88
3 ಅಲನ್ ಬಾರ್ಡರ್ 156 ಪಂದ್ಯ , 11174 ರನ್ ಸರಾಸರಿ 50.56
4 ರಿಕಿ ಪಾಂಟಿಂಗ್ 132 ಪಂದ್ಯ 11001 ರನ್ ,ಸರಾಸರಿ 56.42

Share this Story:

Follow Webdunia kannada