Sports Cricket Cricketersprofile 0903 13 1090313053_1.htm

Daily Horoscope

Select Your Language

Notifications

webdunia
webdunia
webdunia
webdunia

ಸೆಹ್ವಾಗ್ ವಿಶ್ವಶ್ರೇಷ್ಠ ದಾಂಡಿಗನೇ?

ವೀರೇಂದ್ರ ಸೆಹ್ವಾಗ್
ಆಕ್ರಮಣಕಾರಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್‌ಗೆ ಬಾಲ್ ಎಸೆಯುವುದೆಂದರೆ ವಿಶ್ವದ ಎಲ್ಲಾ ಬೌಲರ್‌ಗಳಲ್ಲಿ ಭೀತಿ ಕಾಡುತ್ತಿರುತ್ತದೆ. ಆತ ಕ್ರೀಸ್‌ನಲ್ಲಿ ಸ್ಪಲ್ಪ ಹೊತ್ತು ಉಳಿದರೆ ನಂತರ ಅಸಾಧ್ಯವಾದುದೆಲ್ಲ ಸಾಧ್ಯವಾಗಿಸುವ ತಾಕತ್ತು ಹೊಂದಿರುವವನು ಎಂದು ಈಗಾಗಲೇ ಹಲವು ಬಾರಿ ಶ್ರುತಪಟ್ಟಿರುವುದೇ ಇದರ ಹಿಂದಿನ ಕಾರಣ. ಇದು ಕೇವಲ ಒಂದೋ ಎರಡೋ ಪಂದ್ಯಗಳಿಗೆ ಮಾತ್ರ ಸೀಮಿತವಲ್ಲ. ಪಿಚ್ ಹೇಗೆ ಇರಲಿ, ಎಂತಹುದೇ ಪರಿಸ್ಥಿತಿಯಲ್ಲಿಯ‌ೂ ಸಹ ಸೆಹ್ವಾಗ್ ಮೈದಾನಕ್ಕಿಳಿದ ನಂತರ ಎಲ್ಲವೂ ಸುಲಭ. ಇದಕ್ಕೆ 'ಬಾಲ್ ಇರುವುದೇ ದಂಡಿಸುವುದೋಸ್ಕರ' ಎಂಬ ಸೆಹ್ವಾಗ್ ಧ್ಯೇಯವಾಕ್ಯವೇ ಸಾಕ್ಷಿ.
PTIPTI

ಸೆಹ್ವಾಗ್ ನ್ಯೂಜಿಲೆಂಡ್ ವಿರುದ್ಧದ ಪ್ರವಾಸ ಆರಂಭಿಸಿದ್ದೇ ಹ್ಯಾಟ್ರಿಕ್ ಸಿಕ್ಸರ್‍‌ಗಳ ಮ‌ೂಲಕ. ಟ್ವೆಂಟಿ-20 ಪಂದ್ಯದಲ್ಲಿ ಸೌಥಿ ಎಸೆದ ಮೊದಲ ಮ‌ೂರು ಎಸೆತಗಳನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ತನ್ನ ಯಾತ್ರೆ ಆರಂಭಿಸಿದ್ದರು.

ಸೆಹ್ವಾಗ್ ದಾಖಲೆಗಳನ್ನು ಮೆಲುಕು ಹಾಕಿದಾಗ ಅವರೇ ವಿಶ್ವದ ನಂಬರ್ ವನ್ ಆಟಗಾರನೆಂಬ ಭಾವನೆ ಬರದಿರದು. ಆತನ ಬ್ಯಾಟಿಂಗ್ ಶೈಲಿ, ಕ್ರೀಡಾಸ್ಪೂರ್ತಿ ಎಲ್ಲವೂ ಇತರ ಆಟಗಾರರಿಗಿಂತ ಭಿನ್ನವಾಗಿದೆ.

'ವೀರೂ' ಎಂದೇ ಖ್ಯಾತಿ ಪಡೆದ ವೀರೇಂದ್ರ ಸೆಹ್ವಾಗ್ ಒಟ್ಟು 204 ಏಕದಿನ ಪಂದ್ಯಗಳಾನ್ನಾಡಿದ್ದು, 34.30 ಸರಾಸರಿಯಲ್ಲಿ 6,552 ರನ್ ಕಲೆ ಹಾಕಿದ್ದಾರೆ. ಅದೇ ರೀತಿ 66 ಟೆಸ್ಟ್‌ ಪಂದ್ಯಗಳಲ್ಲಿ 51.06 ಸರಾಸರಿಯಲ್ಲಿ 5,617 ರನ್ ಬಾರಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ತ್ರಿಶತಕ ಬಾರಿಸಿದ ವಿಶ್ವದ ಏಕೈಕ ದಾಂಡಿಗನಾಗಿದ್ದಾರೆ ಸೆಹವಾಗ್. ಇವೆರಡು ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ದಾಖಲಾಗಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಂತೂ ಸೆಹ್ವಾಗ್ ಕೇವಲ 304 ಎಸೆತಗಳಲ್ಲಿ 319 ಬಾರಿಸಿದ್ದರು. ಇದು ಟೆಸ್ಟ್ ಇತಿಹಾಸದಲ್ಲಿ ಅತ್ಯಂತ ವೇಗದ ತ್ರಿಶತಕವಾಗಿ ದಾಖಲಾಗಿದೆ.
webdunia
PTIPTI

ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಟ್ಟು 15 ಶತಕ ಬಾರಿಸಿರುವ ಸೆಹ್ವಾಗ್‌‌ರ ಕೊನೆಯ 11 ಶತಕಗಳು 150ರ ದಾಟಿರುವುದು ಇಲ್ಲಿನ ವಿಶೇಷ. ಅದರಲ್ಲೂ ಸರಾಸರಿ 75ಕ್ಕಿಂತಲೂ ಹೆಚ್ಚು. ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಂತು ಆಕ್ರಮಣಕಾರಿ ಆಟ ಪ್ರದರ್ಶಿಸುವ ತಾಕತ್ತು ಸೆಹವಾಗ್‌ರಲ್ಲಿದೆ ಎಂಬುದು ಇದರಿಂದ ಸಾಬೀತಾಗಿದೆ. ಸ್ಟೈಕ್ ರೇಟ್ ವಿಚಾರದಲ್ಲಿ ಸೆಹ್ವಾಗ್‌ಗೆ ಸರಿಸಾಟಿ ವಿಶ್ವ ಕ್ರಿಕೆಟ್‌ನಲ್ಲಿ ಯಾರೂ ಇಲ್ಲ.

ಸೆಹ್ವಾಗ್‌ರ ಕೊನೆಯ 11 ಸೆಂಚುರಿಗಳು ಇಂತಿವೆ: 201*, 319, 151, 180, 254, 201, 173, 164, 155, 309, 195.

ಸೆಹ್ವಾಗ್‌ರನ್ನು ಎಲ್ಲರಿಗಿಂತಲೂ ವಿಭಿನ್ನವಾಗಿಸುವುದು ಆಕ್ರಮಣಕಾರಿ ಮನೋಭಾವದ ಆಟ. ಚೆಂಡನ್ನು ಕೇಂದ್ರೀಕರಿಸುತ್ತಾ ದಂಡಿಸುವ ಅವರ ಹೊಡೆತಗಳಲ್ಲಿ ಆತ್ಮವಿಶ್ವಾಸ ತುಂಬಿರುತ್ತದೆ. ಏಕದಿನ, ಟೆಸ್ಟ್ ಮತ್ತು ಟ್ವೆಂಟಿ-20 ಸಹಿತ ಕ್ರಿಕೆಟಿನ ಎಲ್ಲಾ ಪ್ರಕಾರಗಳಲ್ಲಿಯೂ ಬೌಲರ್‌ಗಳ ಮೇಲೆ ಸಲೀಸಾಗಿ ದಂಡೆತ್ತಿ ಹೋಗಬಲ್ಲ ಏಕ ಮಾತ್ರ ಕ್ರಿಕೆಟಿಗ ಸೆಹ್ವಾಗ್.

ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನದಲ್ಲಿ ಶತಕ ದಾಖಲಿಸುವ ಮ‌ೂಲಕ ಹೊಡೆಬಡಿ ದಾಂಡಿಗ ವೀರೇಂದ್ರ ಸೆಹ್ವಾಗ್ ಏಕದಿನ ಕ್ರಿಕೆಟ್‌ ಇತಿಹಾಸದಲ್ಲೇ ಏಳನೇ ಅತಿ ವೇಗದ ಶತಕ ಹಾಗೂ ಭಾರತದ ದಾಂಡಿಗ ದಾಖಲಿಸಿದ ಅತಿ ವೇಗದ ಶತಕ ಎಂಬ ದಾಖಲೆ ನಿರ್ಮಿಸಿದ್ದಾರೆ. ಸೆಹ್ವಾಗ್‌ರ ಶತಕ ಕೇವಲ 60 ಬಾಲ್‌ಗಳಲ್ಲಿ ದಾಖಲಾಗಿತ್ತು.
webdunia
PTIPTI

ಸೆಹ್ವಾಗ್ ಏಕದಿನದಲ್ಲಿ 200ಕ್ಕಿಂತಲ‌ೂ ಹೆಚ್ಚು ಪಂದ್ಯಗಳ ಅನುಭವ ಹೊಂದಿದ್ದಾರೆ. ಸ್ಟೈಕ್ ರೇಟ್ 101.66. ಆದರೆ ಅವರ ಬ್ಯಾಟಿಂಗ್ ಸರಾಸರಿ ಕೇವಲ 34ರ ಅಸುಪಾಸಿನಲ್ಲಿದೆ. ಆದರೆ ಕೊನೆಯ 20 ಏಕದಿನ ತೆಗೆದು ನೋಡಿದರೆ ಅವರ ಬ್ಯಾಟಿಂಗ್ ಸರಾಸರಿ 60ಕ್ಕಿಂತಲೂ ಹೆಚ್ಚು.

ವಿಶ್ವದ ಅತ್ಯಂತ ಪ್ರಭಾವಿಶಾಲಿ ಬೌಲರ್‌ಗಳಾದ ಮೆಕ್‌ಗ್ರಾಥ್, ಬ್ರೆಟ್ ಲೀ, ಶಾನ್ ಪೋಲಾಕ್, ಮಖಾಯ ಎನ್‌ಟಿನಿ, ಸ್ಟೈನ್, ಚಾಮಿಂಡ ವಾಸ್ ವಿರುದ್ಧ ಸೆಹ್ವಾಗ್ ಸಲೀಸಾಗಿ ಆಡಬಲ್ಲರು. ಇವರಿಗೆಲ್ಲರ ವಿರುದ್ಧ ದೆಹಲಿ ದಾಂಡಿಗನ ಹತ್ತಿರವಿರುವ ಮದ್ದು ಒಂದೇ. ಅದು ಸ್ಪೋಟಕ, ಸ್ಪೋಟಕ ಮತ್ತು ಸ್ಪೋಟಕ..!

ಅದೇ ರೀತಿ ಬೌಲಿಂಗ್‌ನಲ್ಲೂ ಸಹ ಉಪಯುಕ್ತ ಸೇವೆ ನೀಡುವ ವೀರೂ ಇದುವರೆಗೆ ಏಕದಿನದಲ್ಲಿ 87 ಹಾಗೂ ಟೆಸ್ಟ್‌ನಲ್ಲಿ 27 ವಿಕೆಟ್ ಕಿತ್ತಿದ್ದಾರೆ.


Share this Story:

Follow Webdunia kannada