ಪ್ರಾರ್ಥನೆ ಮತ್ತು ಔಷಧ: ಇಲ್ಲಿಗೆ ಬರುವವರಿಗೆ ದೈಹಿಕ ಮತ್ತು ಮಾನಸಿಕ ತೊಂದರೆಗಳು ಶಮನಗೊಳ್ಳುತ್ತದೆ. ಈ ಮಂದಿರದ ಟ್ರಸ್ಟಿಯಾಗಿರುವ ಸೈಯದ್ ಚೋಟು ಮಿಯಾನ್ ಹೇಳುವಂತೆ, ಔಷಧ ಮತ್ತು ಪ್ರಾರ್ಥನೆ ಎರಡೂ ವಿಧಗಳ ಮೂಲಕ ಭಕ್ತಾಧಿಗಳ ತೊಂದರೆಗಳನ್ನು ನಿವಾರಿಸಲಾಗುತ್ತದೆ. ಇತ್ತೀಚೆಗೆ, ಗುಜರಾತ್ ಸರಕಾರವು ಇದರ ಸಹಾಯಕ್ಕೆ ಮುಂದೆ ಬಂದಿದೆ. ಪ್ರತಿ ಮಂಗಳವಾರ ಮಾನಸಿಕ ರೋಗಿಗಳನ್ನು ಪರೀಕ್ಷಿಸಲು ವೈದ್ಯರು ಇಲ್ಲಿಗೆ ಭೇಟಿ ನೀಡುತ್ತಾರೆ. ರೋಗಿಗಳಿಗೆ ಯಾವುದೇ ವೈದ್ಯಕೀಯ ಶುಲ್ಕವಿರುವುದಿಲ್ಲ.ಹೋಗುವುದು ಹೇಗೆ ?ವಾಯುಮಾರ್ಗ: ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣ ಅಹಮದಾಬಾದ್
ರೈಲುಮಾರ್ಗ: ಉಂಜಾ ಮತ್ತು ಮೆಹ್ಸಾನಾ ರೈಲು ನಿಲ್ದಾಣದಿಂದ ಕ್ರಮವಾಗಿ ಈ ಮಂದಿರಕ್ಕೆ 5 ಮತ್ತು 19 ಕಿ.ಮೀ ಅಂತರ.
ಭೂಮಾರ್ಗ: ದೆಹಲಿ-ಪಾಲಾಂಪುರ್-ಅಹ್ಮದಾಬಾದ್ ಹೈವೇಯಲ್ಲಿ ಉನಾವಾ ಇದ್ದು, ಇದು ಪಾಲಾಂಪುರದಿಂದ 55 ಕಿ.ಮೀ ಮತ್ತು ಅಹ್ಮದಾಬಾದ್‌ನಿಂದ 95 ಕಿ.ಮೀ ದೂರದಲ್ಲಿದೆ.