Newsworld News Regional 1203 09 1120309005_1.htm

Select Your Language

Notifications

webdunia
webdunia
webdunia
webdunia

ಸದನದಲ್ಲಿ ಸೆಕ್ಸ್ ವೀಡಿಯೊ; ಸವದಿಗೆ ಕಣ್ಣು ಸರಿ ಕಾಣಲ್ವಂತೆ!

ಸೆಕ್ಸ್ ವೀಡಿಯೊ
PR
ಸದನಲ್ಲಿ ಕದ್ದುಮುಚ್ಚಿ ಸೆಕ್ಸ್ ವೀಡಿಯೊ ನೋಡಿ ಸಿಕ್ಕಿ ಬಿದ್ದು ಒಂದೇ ದಿನದಲ್ಲಿ ವಿಶ್ವದ ತ್ರಿಬಲ್ ಎಕ್ಸ್ ಶಾಸಕರೆಂದು ಸುದ್ದಿ ಮಾಡಿದ್ದ ಬಿಜೆಪಿ ಶಾಸಕರುಗಳಾದ ಲಕ್ಷ್ಮಣ ಸವದಿ, ಸಿಸಿ ಪಾಟೀಲ್, ಕೃಷ್ಣ ಪಾಲೇಮಾರ್ ಅವರುಗಳು ವಿಚಾರಣೆ ಸಂದರ್ಭದಲ್ಲಿ ಅಚ್ಚರಿ ಹುಟ್ಟಿಸುವಂತಾ ಹೇಳಿಕೆಗಳನ್ನು ನೀಡಿದ್ದಾರೆ.

ತಾನು ಸದನದಲ್ಲಿ ಮೊಬೈಲ್ ಆನ್ ಮಾಡಿಲ್ಲ ಎಂದು ಕೃಷ್ಣ ಪಾಲೇಮಾರ್ ಹೇಳಿದ್ದರೆ, ಮೊಬೈಲಿನಲ್ಲಿ ನೋಡಿದ ದೃಶ್ಯಾವಳಿಗಳು ಅಶ್ಲೀಲವಾಗಿರುವುದಾಗಿ ನನಗೆ ಗೊತ್ತಿರಲಿಲ್ಲ ಎಂದಿದ್ದಾರೆ ಸಿಸಿ ಪಾಟೀಲ್.

ಆದರೆ ತಮಾಷೆಯೆಂದರೆ, ಸೆಕ್ಸ್ ವೀಡಿಯೊಗಳನ್ನು ನೋಡಿ ತಲೆಕೆರೆದುಕೊಳ್ಳುತ್ತಾ ಕುಳಿತಿದ್ದ ಲಕ್ಷ್ಮಣ ಸವದಿ ಅವರಿಗೆ ಕನ್ನಡಕ ಹಾಕಿದರೆ ಮಾತ್ರ ಕಣ್ಣು ಕಾಣುತ್ತದಂತೆ. ಕನ್ನಡಕ ಹಾಕದಿದ್ರೆ ಕಣ್ಣು ಸರಿಯಾಗಿ ಕಾಣುವುದಿಲ್ಲವಂತೆ. ಹಾಗಾಗಿ ಇತ್ತೀಚೆಗೆ ಸೆಕ್ಸ್ ವೀಡಿಯೊ ನೋಡಿದ್ದ ಸಂದರ್ಭದಲ್ಲಿ ಕನ್ನಡಕ ಹಾಕಿರಲಿಲ್ಲ. ಆದ್ದರಿಂದ ಕೆಟ್ಟದನ್ನು ನೋಡಿಲ್ಲ, ನೋಡಿಲ್ಲ, ನೋಡೇಇಲ್ಲ ಎಂದು ತನ್ನನ್ನು ಸಮರ್ಥಿಸಿಕೊಂಡಿದ್ದಾರೆ.

Share this Story:

Follow Webdunia kannada