Newsworld News Regional 0711 05 1071105007_1.htm

Select Your Language

Notifications

webdunia
webdunia
webdunia
webdunia

ಅಧಿಕಾರಕ್ಕೆ ಒತ್ತಾಯಿಸಿ ಶಾಸಕರ ಪೆರೇಡ್

ಅಧಿಕಾರಕ್ಕೆ
ಅಧಿಕಾರಕ್ಕೆ ಒತ್ತಾಯಿಸಿ ನಾಳೆ ದೆಹಲಿಯ ರಾಷ್ಟ್ತ್ರಪತಿ ಭವನದ ಎದುರು ರಾಜ್ಯದ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಪೆರೇಡ್ ನಡೆಸಲಿದ್ದಾರೆ.

ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ನಿಲ್ಲಿಸಿ ಮೈತ್ರಿ ಸರ್ಕಾರ ರಚಿಸಲು ಆಗ್ರಹಿಸಿ ನಡೆಯುತ್ತಿರುವ ಹೋರಾಟದ ಇನ್ನೊಂದು ರೂಪವಾಗಿ ಈ ಪೆರೇಡ್ ನಡೆಯಲಿದೆ.

ಈ ಸಂಬಂಧ ವಿಶೇಷ ವಿಮಾನದಲ್ಲಿ ಇಂದು ರಾತ್ರಿ ರಾಜ್ಯದ ಬಿಜೆಪಿ ಹಾಗೂ ಜೆಡಿಎಸ್‌ನ 129 ಶಾಸಕರು ದೆಹಲಿಗೆ ಪ್ರಯಾಣಿಸಲಿದ್ದಾರೆ.

ಗೊಂದಲ : ದೆಹಲಿಯಲ್ಲಿ ಎರಡೂ ಪಕ್ಷಗಳ ಶಾಸಕರು ಪೆರೇಡ್ ನಡೆಸುವ ಬಗ್ಗೆ ಗೊಂದಲ ತಲೆದೋರಿತ್ತು. ಈ ಸಂಬಂಧ ಜೆಡಿಎಸ್ ಅಸಮ್ಮತಿ ವ್ಯಕ್ತಪಡಿಸಿತ್ತು. ಶಾಸಕಾಂಗ ಪಕ್ಷದ ನಾಯಕನಾಗಿರುವ ತನ್ನಲ್ಲಿ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಏಕಾಏಕಿ ಈ ರೀತಿಯ ಪ್ರತಿಭಟನೆಯನ್ನು ರಾಷ್ಟ್ರಪತಿಯೆದುರು ನಡೆಸುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು.

ಆದರೆ ಇಂದು ಮುಂಜಾನೆ ಕುಮಾರಸ್ವಾಮಿ ಮಾಧ್ಯಮಗಳಿಗೆ ಹೇಳಿಕೆ ನೀಡಿ, ನಾಳೆ ದೆಹಲಿಯಲ್ಲಿ ನಡೆಯಲಿರುವ ಶಾಸಕರ ಪೆರೇಡ್‌ನಲ್ಲಿ ಜೆಡಿಎಸ್ ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ.

Share this Story:

Follow Webdunia kannada